ನಯನಾಡು: ಇಲ್ಲಿಯ ಪಿಲಾತಬೆಟ್ಟು ಸಂತ ಜೋಸೆಫರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು.

ಧ್ವಜಾರೋಹಣವನ್ನು ನಯನಾಡು ಚರ್ಚ್ ನ ಧರ್ಮಗುರು ಅನಿಲ್ ಅವಿಲ್ಡ್ ಲೋಬೊರವರು ನೆರವೇರಿಸಿ ಶುಭಹಾರೈಸಿದರು.

ಮುಖ್ಯ ಅತಿಥಿಗಳಾಗಿ ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಲ್ಯಾನ್ಸಿ ವಿಲಿಯಂ ಡಿ’ಸೋಜ, ಹಾಗೂ ಕಾರ್ಯದರ್ಶಿ ಇಗ್ನೇಷಿಯಸ್ ರೊಡ್ರಿಗಸ್, ಶಾಲಾ ಮುಖ್ಯೋಪಾಧ್ಯಾಯಿನಿ ಮೋಂತಿ ಡಿ’ಸೋಜಾ, ಶಿಕ್ಷಕ ವೃಂದದವರು, ಶಾಲಾ ಎಸ್‌ಡಿಎಂಸಿ ಸಮಿತಿಯವರು, ಪೋಷಕರು ಉಪಸ್ಥಿತರಿದ್ದರು.

ವಿದ್ಯಾರ್ಥಿಗಳು ತುಂಬು ಉತ್ಸಾಹದಿಂದ ಪಾಲ್ಗೊಂಡು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡಿದರು.











