ಲಾಯಿಲ ಗ್ರಾಮ ಪಂಚಾಯತ್ ವತಿಯಿಂದ 79ನೇ ವರ್ಷದ ಸ್ವಾತಂತ್ರ್ಯೋತ್ಸವವನ್ನು ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಜಯಂತಿ ಎಂ.ಕೆ ರವರು ಧ್ವಜಾರೋಣಗೈದು ಆಚರಿಸಿದರು.
ಸಾಧಕರಿಗೆ ಸನ್ಮಾನ : ಮಾಜಿ ಸೈನಿಕ ಶಿವಕುಮಾರ್, ಉರಗಪ್ರೇಮಿ ಸ್ನೇಕ್ ಅಶೋಕ್, ನಾಟಿ ವೈದ್ಯ ಗಣೇಶ್ ಭಟ್, ಎಸೆಸ್ಸೆಲ್‌ಸಿ ಯಲ್ಲಿ 601 ಅಂಕ ಗಳಿಸಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ಕು| ಸಿಂಚನಾ , ಭಾರತ್ ಸ್ಕೌಟ್ & ಗೈಡ್ಸ್ನಲ್ಲಿ ರಾಜ್ಯ ಪ್ರಶಸ್ತಿ ಪತ್ರ ಸ್ವೀಕರಿಸಿದ ಕು| ವಿಹಾನ್ ಇವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಉಪಾಧ್ಯಕ್ಷರು, ಎಲ್ಲಾ ಸದಸ್ಯರು, ಶಾಲಾ ವಿದ್ಯಾರ್ಥಿಗಳು , ಸಂಘಸಂಸ್ಥೆಗಳ ಪದಾಧಿಕಾರಿಗಳು, ಊರವರು ಭಾಗವಹಿಸಿದರು. ಸದಸ್ಯ ಅರವಿಂದ ಸ್ವಾಗತಿಸಿ, ಮಹೇಶ್ ಪ್ರಾಸ್ತಾವಿಕವಾಗಿ ಮಾತನಾಡಿ, ಗಣೆಶ್ ವಂದಿಸಿದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀನಿವಾಸ್ ಡಿ.ಪಿ, ಕಾರ್ಯದರ್ಶಿ, ಲೆಕ್ಕ ಸಹಾಯಕರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.











