September 6, 2026
ವರದಿ

ಕಿಲ್ಲೂರು ಮುಹಿಯದ್ದೀನ್ ಜುಮಾ ಮಸೀದಿಯಲ್ಲಿ 79ನೇ ಸ್ವಾತಂತ್ರ ದಿನಾಚರಣೆ

ಬೆಳ್ತಂಗಡಿ: ಕಿಲ್ಲೂರು ಮುಹಿಯದ್ದೀನ್ ಜುಮ್ಮಾ ಮಸ್ಜಿದ್ ನಲ್ಲಿ ಬಹಳ ವಿಜೃಂಬಣೆಯಿಂದ 79 ನೇ ಸ್ವಾತಂತ್ರ ದಿನಾಚರಣೆಯನ್ನು ಜಮಾಅತ್ ಅಧ್ಯಕ್ಷರಾದ ಅಬ್ದುಲ್ ಅಝೀಝ್ ಝುಹುರಿ ಕಿಲ್ಲೂರು ಇವರ ನೇತೃತ್ವದಲ್ಲಿ ನಡೆಯಿತು.

ಜಮಾಅತ್ ಕೋಶಾಧಿಕಾರಿ ಅಬೂಬಕ್ಕರ್ ಮಲ್ಲಿಗೆ ಮನೆ ಧ್ವಜಾರೋಹಣ ಕಾರ್ಯಕ್ರಮವನ್ನು ನಿರ್ವಹಿಸಿದರು.ಜಮಾಅತ್ ಧರ್ಮ ಗುರುಗಳಾದ ಅಲ್ ಹಾಜ್ ಅಬ್ದುರಹ್ಮಾನ್ ಬಾಖವಿ ಕಕ್ಕಿಂಜೆ ಕಾರ್ಯಕ್ರವನ್ನು ಉದ್ಘಾಟಿಸಿ ಶುಭ ಹಾರೈಸಿದರು.

ಕಿಲ್ಲೂರು ಇರ್ಷಾದುಶ್ಶಿಬಿಯಾನ್ ಅರಬಿಕ್ ಮದರಸ ಮುಖ್ಯೋಪಾಧ್ಯಾಯರಾದ ಅಬ್ದುಲ್ ಅಝೀಝ್ ಸಅದಿ ಅಗ್ರಹಾರ ಸ್ವಾತಂತ್ರದ ಸಂದೇಶ ಭಾಷಣ ಮಾಡಿದರು. ಇರ್ಷಾದುಶ್ಶಿಬಿಯಾನ್ ಮದರಸ ವಿದ್ಯಾರ್ಥಿಗಳಿಂದ ದೇಶ ಭಕ್ತಿಗೀತೆ, ಹಾಗೂ ವಿವಿಧ ಕಾರ್ಯಕ್ರಮಗಳು ನಡೆಯಿತು.

ವಿಜೇತರಿಗೆ ಆಡಳಿತ ಕಮೀಟಿ ವತಿಯಿಂದ ಬಹುಮಾನ ವಿತರಣೆ ಮಾಡಲಾಯಿತು. ಜಮಾಅತ್ ಉಪಾಧ್ಯಕ್ಷ ಹಮೀದ್ ಅಮ್ಮಿ ಜಮಾಅತ್ ಕಾರ್ಯದರ್ಶಿ ಹಂಝತ್ ಕಿಲ್ಲೂರು , ಸದಸ್ಯರಾದ ಮಹಮ್ಮದ್ ಪುತ್ತುಮೋನು ಶ್ರವಣಗುಂಡ ,ಬದ್ರುದ್ದೀನ್ ಕಿಲ್ಲೂರು, ಮಹಮ್ಮದ್ ಮಣ್ಣಗುಂಡಿ , ಅಶ್ರಫ್ ಶ್ರವಣಗುಂಡ, ಮಾಜಿ ಖತೀಬರಾದ ಮುಹಮ್ಮದ್ ಉಸ್ತಾದ್ ಹಾಗೂ ಜಮಾಅತ್ ಗೆ ಒಳಪಟ್ಟ ಮಕ್ಕಳ ಪೋಷಕರು, ಊರಿನ ಹಿರಿಯರು ಉಪಸ್ಥಿತರಿದ್ದರು.

ಮದರಸ ವಿದ್ಯಾರ್ಥಿಗಳಿಗೆ ಯುವ ಉದ್ಯಮಿ ಕೊಡುಗೈ ದಾನಿ ಅಶ್ರಫ್ ತಿಮ್ಮನಬೆಟ್ಟು ರವರಿಂದ ಕುಡಿಯಲು ಪಾನೀಯ ಹಾಗೂ ಸಿಹಿ ತಿಂಡಿ ವಿತರಿಸಲಾಯಿತು. ಅಧ್ಯಾಪಕ ಅಬೂಬಕ್ಕರ್ ಮುಸ್ಲಿಯಾರ್ ಸ್ವಾಗತಿಸಿ ಧನ್ಯವಾದಗೈದರು.

Related posts

ಅರಸಿನಮಕ್ಕಿ: ಕುಡಿಯುವ ನೀರಿನ ಸ್ಥಾವರ ಉದ್ಘಾಟನೆ

Suddi Udaya

ಬೆಳ್ತಂಗಡಿ : ರೆಂಕೆದಗುತ್ತು ನಿವಾಸಿ ಉದಯ ಪೂಜಾರಿ ನಿಧನ

Suddi Udaya

ಆ.23: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ‘ಕೆಸರ್‌ದ ಕಂಡೊಡೊಂಜಿ ದಿನ’

Suddi Udaya

ಸೆ. 3: ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನದ ಜಗದ್ಗುರು ಪೀಠದ ಪೀಠಾಧೀಶರಾದ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಪಟ್ಟಾಭಿಷೇಕದ 16ನೇ ವರ್ಧಂತ್ಯುತ್ಸವ

Suddi Udaya

ಬೈಪಾಡಿ ಭಗವಾನ್ ಶ್ರೀ ಶಾಂತಿನಾಥ ಸ್ವಾಮಿ ಬಸದಿಯಲ್ಲಿ ಪಂಚಕಲ್ಯಾಣಪೂರ್ವಕ ಪ್ರತಿಷ್ಠಾ ಮಹೋತ್ಸವ

Suddi Udaya

ಉಪ್ಪಿನಂಗಡಿ ಬಸ್ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಕೂಡು ರಸ್ತೆಯ ಕಾಮಗಾರಿಯ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ರಾಜ್ಯ ಲೋಕೋಪಯೋಗಿ ಇಲಾಖೆಯ ಇಂಜಿನಿಯರ್‌ಗಳ ಜಂಟಿ ವೀಕ್ಷಣೆ

Suddi Udaya
error: Content is protected !!