September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಹೊಸಪಟ್ಣ: ಶ್ರೀ ಸತ್ಯನಾರಾಯಣ ರಂಗ ಮಂದಿರದ ವಠಾರದಲ್ಲಿ ಮೊಸರು ಕುಡಿಕೆ ಉತ್ಸವ

ಬಜಿರೆ: ಬಜಿರೆ ಗ್ರಾಮದ ಹೊಸಪಟ್ಣ ಶ್ರೀ ಸತ್ಯನಾರಾಯಣ ಪೂಜಾ ಸೇವಾ ಸಮಿತಿ, ಹೊಸಪಟ್ಣ, ಶ್ರೀ ಸತ್ಯನಾರಾಯಣ ಫ್ರೆಂಡ್ಸ್ ಕ್ಲಬ್ ಹೊಸಪಟ್ಣ, ಶ್ರೀ ಸತ್ಯನಾರಾಯಣ ಭಜನಾ ಮಂಡಳಿ ಹೊಸಪಟ್ಣ, ಶ್ರೀ ಕ್ಷೇ.ಧ.ಗ್ರಾ.ಯೋಜನೆ , ಪ್ರಗತಿ ಬಂಧು ಒಕ್ಕೂಟ ಬಜಿರೆ ಬಿ. ಇವರ ಸಂಯುಕ್ತ ಆಶ್ರಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ 43 ನೇ ವರ್ಷದ ಮೊಸರು ಕುಡಿಕೆ ಉತ್ಸವ ಆ.16 ರಂದು ಹೊಸಪಟ್ಣ ಭಜನಾ ರಂಗ ಮಂದಿರದ ವಠಾರದಲ್ಲಿ ಜರುಗಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ವೇಣೂರು ದರ್ಗಾಂಬ ಎಲೆಕ್ಟ್ರಿಕಲ್ ಮಾಲಕರಾದ ವಸಂತ ಕೋಟ್ಯಾನ್ ನೆರವೇರಿಸಿ ಶುಭಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವೇಣೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಮಲ್ಲಿಕಾ ಕಾಶಿನಾಥ ಹೆಗ್ಡೆ ವಹಿಸಿ ಪ್ರಸ್ತಾವಿಕವಾಗಿ ಮಾತನಾಡಿದರು.

ಈ ಸಂದರ್ಭ ವೇದಿಕೆಯಲ್ಲಿ ವೇಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿಯ ಮತ್ತು ಗ್ಯಾರಂಟಿ ಅನುಷ್ಠಾನ ಸಮಿತಿಯ ಸದಸ್ಯ ಸತೀಶ್ ಹೆಗ್ಡೆ, ಹೊಸಪಟ್ಣ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಅಶೋಕ್ ಪೂಜಾರಿ ಕಜಿಪಟ್ಟ, ವೇಣೂರು ಗ್ರಾ.ಪಂ. ಸದಸ್ಯ ಸುನೀಲ್ ಪೂಜಾರಿ ಪುಣ್ಕೆದಡಿ, ಶೇಖರ ಪೂಜಾರಿ ಸುವಿಧಾ ಪ್ರಗತಿಪರ ಕೃಷಿಕ, ಬಜಿರೆ ಪಿ.ಎಂ.ಶ್ರೀ ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ದಿನೇಶ್ ಪೂಜಾರಿ, ಹಾಗೂ ಪದ್ಮನಾಭ ಶೆಟ್ಟಿ ಬ್ರಾಣಿಗೇರಿ, ದಾಸಪ್ಪ ರೈ ಬ್ರಾಣಿಗೇರಿ, ಹರೀಶ್ ಗೊಲ್ಲ ಮಣೇಲುಬೈಲು ಉಪಸ್ಥಿತರಿದ್ದರು.


ಈ ಸಂದರ್ಭ ಭಾಸ್ಕರ ಪೂಜಾರಿ ನಾರ‍್ಮೇರು, ಪ್ರವೀಣ್ ಕುಮಾರ್ ಜಾರಿಗೆದಡಿ, ಗಣೇಶ್ ಪೂಜಾರಿ ಹೊಸಪಟ್ನ, ಕಿಶೋರ್ ಕುಮಾರ್ ನಾರ‍್ಮೇರು, ಮೋಹನ್ ಬಿ.ಸಿ ಹೊಸಪಟ್ಣ, ಗೋಪಾಲ ಟೈಲರ್ ಹೊಸಪಟ್ಣ, ಸತೀಶ್ ಪೂಜಾರಿ ನಾರ‍್ಮೇರು, ಯೋಗೀಶ್ ಪೂಜಾರಿ ನಾರ‍್ಮೇರು ರಕ್ಷಿತ್ ಪೂಜಾರಿ ಪುಣ್ಕೆದಡಿ, ಹರೀಶ್ಚಂದ್ರ ಬಜಿರೆಗುತ್ತು, ಹೊಸಪಟ್ಣ ಶಾಲಾ ಶಿಕ್ಷಕಿ ವಿದ್ಯಾ ಕಾರ್ಕಳ, ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ದಯಾನಂದ ಪೂಜಾರಿ ಮಜಲು, ದೇಜಪ್ಪ ಮೂಲ್ಯ ಶಾಂತಿರೊಟ್ಟು, ಆನಂದ ಪೂಜಾರಿ, ಧರ್ಣಪ್ಪ ಮೂಲ್ಯ, ಮೋಹಾನಂದ ಪೂಜಾರಿ ಕುಡ್ಮೇರು, ವಿಶ್ವನಾಥ ಪೂಜಾರಿ ಪಂಜಿರೇಲು ಹಾಗೂ ಸಮಿತಿಯ ಎಲ್ಲಾ ಪದಾಧಿಕಾರಿಗಳು ಮತ್ತು ಸರ್ವಸದಸ್ಯರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಮುದ್ದು ಕೃಷ್ಣ ಸ್ಪರ್ಧೆ ಹಾಗೂ ಪುರುಷ ಮತ್ತು ಮಹಿಳೆಯರಿಗೆ ವಿವಿಧ ಸ್ಪರ್ಧಾ ಕಾರ್ಯಕ್ರಮಗಳು ಜರುಗಿತು.

Related posts

ಯಕ್ಷ ಭಾರತಿ ಕನ್ಯಾಡಿ ವತಿಯಿಂದ ಮುಖವರ್ಣಿಕೆಯ ಶಿಬಿರ

Suddi Udaya

ವಿ.ಪ. ಉಪಚುನಾವಣೆಯ ಬಿಜೆಪಿ ಅಭ್ಯರ್ಥಿ ಕಿಶೋರ್ ಕುಮಾರ್ ಪರವಾಗಿ ತಣ್ಣೀರುಪoತ, ಬಾರ್ಯ ಪಂಚಾಯತ್ ವ್ಯಾಪ್ತಿಯಲ್ಲಿ ಸoಸದ ಕೋಟ ಶ್ರೀನಿವಾಸ್ ಪೂಜಾರಿ ಮತ್ತು ಶಾಸಕ ಹರೀಶ್ ಪೂಂಜರಿಂದ ಮತಪ್ರಚಾರ

Suddi Udaya

ದಿಡುಪೆಯಲ್ಲಿ ದ್ವಿಚಕ್ರ ವಾಹನದ ಮೇಲೆ ಒಂಟಿ ಸಲಗ ದಾಳಿ

Suddi Udaya

ಶಾಲೆತ್ತಡ್ಕ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ಹರೀಶ್ ರಾವ್ ಕಾಯಡ, ಉಪಾಧ್ಯಕ್ಷರಾಗಿ ಭಾರತಿ ಆಯ್ಕೆ

Suddi Udaya

ವಾಣಿ ಆಂ.ಮಾ. ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ಲಕ್ಷ್ಮೀನಾರಾಯಣ. ಕೆ ರವರಿಗೆ ‘ರಾಜ್ಯ ಮಟ್ಟದ ವಿದ್ಯಾರತ್ನ ಪ್ರಶಸ್ತಿ’ ಪ್ರದಾನ

Suddi Udaya

140 ವರ್ಷಗಳ ಇತಿಹಾಸವಿರುವ ಗೇರುಕಟ್ಟೆ ಕೊರಂಜ ಪ್ರಾಥಮಿಕ ಶಾಲಾ ನೂತನ ಕೊಠಡಿ ಉದ್ಘಾಟನೆ

Suddi Udaya
error: Content is protected !!