September 6, 2026
Uncategorized

ಮಿತ್ತಬಾಗಿಲು ಕೊಪ್ಪದಗುಂಡಿ ಕಿಂಡಿ ಅಣೆಕಟ್ಟು ಮುಳುಗಡೆ:ಬೈಕ್ ಸಹಿತ ನೀರು ಪಾಲಾದ ವ್ಯಕ್ತಿ ಅಪಾಯದಿಂದ ಪಾರು

* ಇಂದಬೆಟ್ಟು-ಮಿತ್ತಬಾಗಿಲು ಈಡೇರದೆ ಹೊಸ ಸೇತುವೆ ಬೇಡಿಕೆ

ಬೆಳ್ತಂಗಡಿ: ಇಂದಬೆಟ್ಟು ಮತ್ತು ಮಿತ್ತಬಾಗಿಲು ಗ್ರಾಮವನ್ನು ಸಂಪರ್ಕಿಸುವ ಕೊಪ್ಪದ ಗುಂಡಿ ಎಂಬಲ್ಲಿ ನಿರ್ಮಿಸಲಾಗಿರುವ ಕಿಂಡಿ-ಅಣೆಕಟ್ಟು ಕಳೆದ ಕೆಲ ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಗೆ ನಿನ್ನೆ ಸಂಜೆ ವ್ಯಕ್ತಿಯೋರ್ವ
ಬೈಕ್ ಸಹಿತ ನದಿ ದಾಟಲು ಹೋಗಿ ನದಿಗೆ ಬಿದ್ದು ಅಪಾಯದಿಂದ ಪಾರಾದ ಘಟನೆ ನಡೆದಿದೆ.
ಕಳೆದ ಕೆಲ ದಿನಗಳ ಜಡಿ ಮಳೆ ಗೆ ನಿನ್ನೆ ಸಂಜೆ ಕಿಂಡಿ ಅಣೆಕಟ್ಟು ನೀರಿನಲ್ಲಿ ಸಂಪೂರ್ಣ ಮುಳುಗಡೆಯಾಗಿದ್ದು, ಸಂಚಾರಕ್ಕೆ ತೀವ್ರ ಸಮಸ್ಯೆಯಾಗಿತ್ತು. ಈ ನಡುವೆ ಎಮಾ೯ಲ್ ಪಲ್ಕೆ ನಿವಾಸಿಯೋವ೯ ಬೈಕ್ ನಲ್ಲಿ ನದಿ ದಾಟಲು ಯತ್ನಿಸಿದಾಗ‌ ಕೊನೆಯ ಹಂತದಲ್ಲಿ ಆಯತಪ್ಪಿ ನದಿಗೆ ಬಿದ್ದು ಈಜಿ ದಡ ಸೇರಿ ಅಪಾಯದಿಂದ ಪಾರಾಗಿದ್ದಾರೆ. ಬೈಕ್ ನೀರಿನಲ್ಲಿ ಕೊಚ್ಚಿ ಹೋಗಿದ್ದು , ಸ್ಥಳೀಯರ ಸಹಕಾರದಲ್ಲಿ ಮೇಲೆತ್ತಲಾಗಿದೆ ಎಂದು ತಾ.ಪಂ ಮಾಜಿ ಅಧ್ಯಕ್ಷ ಮುಕುಂದ ಸುವರ್ಣ ಮಾಹಿತಿ ನೀಡಿದ್ದಾರೆ.
ಸೇತುವೆ ಬೇಡಿಕೆ:
ಇಂದಬೆಟ್ಟು ಮತ್ತು ಮಿತ್ತಬಾಗಿಲು ಗ್ರಾಮವನ್ನು ಸಂಪರ್ಕಿಸುವ ರಸ್ತೆ ಯಾದ ಮಿತ್ತಬಾಗಿಲು ಗ್ರಾಮದ ಕೊಪ್ಪದಗುಂಡಿ ಎಂಬಲ್ಲಿ ಸುಮಾರು 25 ವರ್ಷಗಳ ಹಿಂದೆ ಅಂದಿನ ತಾಪಂ ಅಧ್ಯಕ್ಷರಾಗಿದ್ದ ಮುಕುಂದ ಸುವರ್ಣರ ಸತತ ಪ್ರಯತ್ನದಲ್ಲಿ ಆಗಿನ ಸಚಿವರಾಗಿದ್ದ ರಮಾನಾಥ ರೈ ಮೂಲಕ ಕಿಂಡಿ ಅಣೆಕಟ್ಟು ಮಂಜೂರುಗೊಂಡಿತ್ತು. ಆ ಸಂದರ್ಭ ಕಿಂಡಿ ಅಣೆಕಟ್ಟಿನ ಇಕ್ಕೆಲಗಳಲ್ಲಿ ಮಣ್ಣಿನ ರಸ್ತೆ ಇತ್ತು. ಈಗ ಈ ರಸ್ತೆಗಳು ಕಾಂಕ್ರೀಟ್ ರಸ್ತೆಯಾಗಿ ಪರಿವರ್ತನೆಗೊಂಡಿದೆ.

ಇಂದಬೆಟ್ಟು ಕಿಲ್ಲೂರು ಕಡೆಯಿಂದ ಮಿತ್ತಬಾಗಿಲು, ಕಡಿರುದ್ಯಾವರ ಮೊದಲಾದ ಕಡೆಗಳಿಗೆ ಹೋಗಬೇಕಾದರೆ ಕೊಪ್ಪದಗಂಡಿ ಮೂಲಕ ಹತ್ತಿರದ ದಾರಿಯಾಗಿದೆ. ಇಲ್ಲವಾದರೆ ಕಿಲ್ಲೂರು ಮೂಲಕ ಸುಮಾರು ಐದು ಕಿ.ಮೀ ಸುತ್ತು ಬಳಸಿ ಹೋಗಬೇಕಾಗಿದೆ.

ಕೊಂಪದಗಂಡಿಯ ಈ ಕಿಂಡಿಅಣೆಕಟ್ಟಿನ ಮೇಲೆ ಬೇಸಿಗೆ ಕಾಲದಲ್ಲಿ ವಾಹನಗಳಲ್ಲಿ ದಾಟಬಹುದು. ಆದರೆ ಮಳೆಗಾಲದಲ್ಲಿ ಪ್ರತಿ ವರ್ಷ ಮುಳುಗಡೆಯಾಗುತ್ತಿದೆ. ಇದರಿಂದಾಗಿ ಮಳೆಗಾಲದಲ್ಲಿ ಸಂಚಾರಕ್ಕೆ ಇಲ್ಲಿ ಬಹಳಷ್ಟು ಸಮಸ್ಯೆ ಕಾಡುತ್ತಿದ್ದು, ಸುಸಜ್ಜಿತ ಸೇತುವೆಗಾಗಿ ಬೇಡಿಕೆ ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದೆ.
ಮುಳುಗಿದ ಸೇತುವೆಯಲ್ಲಿ ನದಿ ದಾಟಲು ಹುಚ್ಚು ಸಾಹಸ:

ಕೆಲ ಯುವಕರು ನದಿಯಲ್ಲಿ ಪೂರ್ತಿ ಪ್ರವಾಹ ಇರುವಾಗಲೂ ಇಲ್ಲಿ ವಾಹನದಲ್ಲಿ ಹೋಗುವ ಹುಚ್ಚು ಸಾಹಸ ಮಾಡುತ್ತಿರುವುದು ಅಪಾಯಕಾರಿಯಾಗಿದೆ. ಕೊಪ್ಪದಂಗಡಿ ಎಂಬಲ್ಲಿ ಸೇತುವೆ ಬೇಕೆಂಬುದು ಈ ಪರಿಸರದ ಜನರ ಹಲವು ವರ್ಷಗಳ ಬೇಡಿಕೆ. ಆದರೆ ಇದು ಇಂದಿಗೂ ಈಡೇರಿಲ್ಲ, ಕಿಲ್ಲೂರು, ಇಂದಬೆಟ್ಟು ಸೇರಿದಂತೆ ವಿವಿಧ ಕಡೆಗಳಿಂದ ಮಿತ್ತಬಾಗಿಲು ಕಡೆಗೆ ಬರುವವರು ಕೊಂಪದಗಂಡಿಯ ಮೂಲಕವೇ ಬರುತ್ತಿದ್ದು, ಮಳೆಗಾಲದಲ್ಲಿ ಜನರ ಸಮಸ್ಯೆಗೆ ಕಾರಣವಾಗುವ ಕೊಂಪದಗುಂಡಿಗೆ ಸೇತುವೆಯೊಂದನ್ನು ಮಂಜೂರುಗೊಳಿಸುವಂತೆ ನಾಗರಿಕರು ಆಗ್ರಹಿಸಿದ್ದಾರೆ.

Related posts

ಹುಣ್ಸೆಕಟ್ಟೆ: ತೀರ ಹದಗೆಟ್ಟ ರಸ್ತೆ: ಪ.ಪಂ. ಅಧ್ಯಕ್ಷ ಜಯಾನಂದ ರಿಂದ ಕೂಡಲೇ ಸ್ಪಂದನೆ

Suddi Udaya

ಗೋಪಾಲಕೃಷ್ಣಶೆಟ್ಟಿ ನೆತ್ತರಇವರಿಗೆ ರೋಟರಿ ಇಂಟರ್ನ್ಯಾಷನಲ್ ಡಿಸ್ಟ್ರಿಕ್ಟ್ ಅವಾರ್ಡ್

Suddi Udaya

ಮೊಗ್ರು ಗ್ರಾಮದ ಅಲೆಕ್ಕಿ ಮುಗೇರಡ್ಕ ದ ಶ್ರೀ ರಾಮ ಶಿಶುಮಂದಿರದಲಿ ಅದ್ದೂರಿಯಾಗಿ ಶಾರದಾ ಪೂಜೆ ಮತ್ತು ಮಕ್ಕಳ ಅಕ್ಷರಾಭ್ಯಾಸ ಮತ್ತು ವಾಹನ ಪೂಜೆ ಕಾರ್ಯಕ್ರಮ

Suddi Udaya

ಮಡಂತ್ಯಾರು ಬಿಎಂಎಸ್ ಆಟೋ ಚಾಲಕ ಮಾಲಕರ ಸಂಘದಿಂದ ಬಿಎಂಎಸ್ ಸ್ಥಾಪನೆ ದಿನಾಚರಣೆ

Suddi Udaya

ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘ ಓಡಿಲ್ನಾಳ ಹಾಗೂ ಕುವೆಟ್ಟು ಗ್ರಾಮ ಸಮಿತಿಯ ವಾರ್ಷಿಕ ಮಹಾಸಭೆ

Suddi Udaya

ನಾಲ್ಕೂರು: ನಿಟ್ಟಡ್ಕ, ಪುಣ್ಕೆದೊಟ್ಟು, ಪರಿಸರದಲ್ಲಿ ಹೆಚ್ಚಿದ ಚಿರತೆ ಕಾಟ, ಭಯಭೀತರಾದ ಗ್ರಾಮಸ್ಥರು

Suddi Udaya
error: Content is protected !!