September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಧರ್ಮಸ್ಥಳ ಪ್ರಕರಣದಲ್ಲಿ ಸರಕಾರ ತುರ್ತು ನಿರ್ಧಾರ ಮಾಡಿದೆ : ಗೃಹ ಇಲಾಖೆ ಗಂಭೀರವಾಗಿ ಪರಿಗಣಿಸಬೇಕು: ಶಾಸಕ ಕಿಶೋರ್ ಕುಮಾರ್ ಪುತ್ತೂರು

ಬೆಂಗಳೂರು: ಶಾಸಕ ಕಿಶೋರ್ ಕುಮಾರ್ ಪುತ್ತೂರು ಅವರು ಇಂದು ವಿಧಾನ ಪರಿಷತ್ತಿನ ಶೂನ್ಯವೇಳೆಯಲ್ಲಿ ಮಾತನಾಡಿ, ಧರ್ಮಸ್ಥಳ ಗ್ರಾಮದಲ್ಲಿ “ಶವವನ್ನು ಹೂತಿದ್ದೇನೆ” ಎಂದು ಹೇಳಿಕೊಂಡ ವ್ಯಕ್ತಿಯ ಮಂಪರು (ಬ್ರೈನ್‌ ಮ್ಯಾಪಿಂಗ್) ಪರೀಕ್ಷೆ ನಡೆಸಬೇಕೆಂದು ಸರ್ಕಾರಕ್ಕೆ ಒತ್ತಾಯಿಸಿದರು.

ಅನಾಮಿಕ ವ್ಯಕ್ತಿಯೋರ್ವ ಬುರುಡೆ ಹಿಡಿದುಕೊಂಡು “ನಾನು ಧರ್ಮಸ್ಥಳದಲ್ಲಿ 13 ಕಡೆ ನೂರಾರು ಮಹಿಳೆಯರು ಮತ್ತು ಬಾಲಕಿಯರ ಶವವನ್ನು ಹೂತಿದ್ದೇನೆ” ಎಂದು ಹೇಳಿದ ಘಟನೆಗೆ ಸಂಬಂಧಿಸಿದಂತೆ, ಮಂಗಳೂರಿನ ಪೊಲೀಸ್ ಅಧೀಕ್ಷಕರು ಮಂಪರು ಪರೀಕ್ಷೆ ಮಾಡಬೇಕೆಂದು ಮೊದಲು ನಿರ್ಧರಿಸಿದ್ದರು ಎಂಬುದು ಮಾಧ್ಯಮ ವರದಿಗಳಲ್ಲಿ ತಿಳಿದುಬಂದಿತ್ತು. ಆದರೆ, “ಮುಖ್ಯಮಂತ್ರಿಗಳು ಎಡಪಂಥೀಯ ಹಿಂದೂ ವಿರೋಧಿ ಗುಂಪುಗಳ ಒತ್ತಡಕ್ಕೆ ಜಗ್ಗಿ, ಈ ಪ್ರಕರಣವನ್ನು SIT ಗೆ ವಹಿಸುವ ತರಾತುರಿ ನಿರ್ಧಾರ ಕೈಗೊಂಡಿದ್ದಾರೆ” ಎಂದು ಶಾಸಕ ಟೀಕಿಸಿದರು.

ಅವರು ಮುಂದುವರಿದು, “ಶ್ರೀ ಕ್ಷೇತ್ರ ಧರ್ಮಸ್ಥಳವು ಕೋಟಿ ಕೋಟಿ ಭಕ್ತರ ನಂಬಿಕೆಯ ಪುಣ್ಯ ಕ್ಷೇತ್ರ. ಇಂತಹ ವಿಷಯಗಳನ್ನು ಸರಕಾರವು ಗಂಭೀರವಾಗಿ ಪರಿಗಣಿಸಿ, ಸುಳ್ಳು ದೂರು ನೀಡಿದ ವ್ಯಕ್ತಿ ಮತ್ತು ಅವರ ಹಿಂದೆ ನಿಂತಿರುವ ಶಕ್ತಿಗಳ ವಿರುದ್ಧ ತಕ್ಷಣ ಸೂಕ್ತ ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಿದರು.

Related posts

ಬಂಗೇರ‌ ಪಾಥಿ೯ವ ಶರೀರದ ಅಂತಿಮ ದಶ೯ನಕ್ಕೆ ಹರಿದು ಬಂದ ಜನ ಸಾಗರ: ಬೆಳ್ತಂಗಡಿ ನಗರದಲ್ಲಿ ಅಂತಿಮ ಯಾತ್ರೆ: ಹುಟ್ಟೂರು ಕೇದೆಯಲ್ಲಿ ಅಂತ್ಯಸಂಸ್ಕಾರ

Suddi Udaya

ಮಡಂತ್ಯಾರು ಸಹಕಾರಿ ಸಂಘಕ್ಕೆ ದ.ಕ ಜಿಲ್ಲಾ ಕೇಂದ್ರ ಬ್ಯಾಂಕಿನಿಂದ ಪ್ರೋತ್ಸಾಹಕ ಪ್ರಶಸ್ತಿ

Suddi Udaya

ಉಜಿರೆ: ಶ್ರೀ ಧ.ಮಂ. ಕಾಲೇಜಿನ ಸಮಾಜಕಾರ್ಯ ವಿಭಾಗ ಹಾಗೂ ಸ್ತ್ರೀ ಶಕ್ತಿ ಪಡಂಗಡಿ ಇದರ ಸಹಯೋಗದಿಂದ ಮುಟ್ಟಿನ ಕಪ್ ಬಳಕೆ ಮತ್ತು ಸುರಕ್ಷತೆಯ ಅರಿವು ಕಾರ್ಯಕ್ರಮ

Suddi Udaya

ಬೆಳ್ತಂಗಡಿ : ಜೈನ ವಿದ್ಯಾರ್ಥಿ ಪ್ರೋತ್ಸಾಹ ಧನಕ್ಕಾಗಿ ಅರ್ಜಿ ಅಹ್ವಾನ

Suddi Udaya

ರಾಜ್ಯಾದಾದ್ಯಂತ ಬಾಂಬೆ ಮಿಠಾಯಿ ನಿಷೇಧ: ಆರೋಗ್ಯ ಸಚಿವರಿಂದ ಅಧಿಕೃತ ಆದೇಶ – ಇನ್ಮುಂದೆ ಮಾರಾಟ ಮಾಡಿದ್ರೆ ದಂಡ, ಜೈಲು ಶಿಕ್ಷೆ

Suddi Udaya

ಆರಂಬೋಡಿ: ಪಾಣಿಮೇರುನಲ್ಲಿ ಅಕ್ರಮ ಮರಳು ಸಾಗಾಟ: ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

Suddi Udaya
error: Content is protected !!