22.9 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಬೆಳ್ತಂಗಡಿ ನೂರಾ ಗೋಲ್ಡ್ ನಲ್ಲಿ ಸ್ವಾತಂತ್ರ್ಯೋತ್ಸವ ಪ್ರಯುಕ್ತ ಡ್ರಾಯಿಂಗ್ ಸ್ಪರ್ಧೆ: ವಿಜೇತರಿಗೆ ಬಹುಮಾನ ವಿತರಣೆ

ಬೆಳ್ತಂಗಡಿ: ಚಿನ್ನ, ಬೆಳ್ಳಿ ಮತ್ತು ವಜ್ರಾಭರಣಗಳ ಮಾರಾಟದಲ್ಲಿ ಜನಪ್ರಿಯಗೊಂಡಿರುವ ನೂರಾ ಗೋಲ್ಡ್ ಬೆಳ್ತಂಗಡಿ ಇಲ್ಲಿ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ವಿದ್ಯಾರ್ಥಿಗಳಿಗೆ ಆಭರಣಗಳ ಡಿಸೈನ್‌ನ ಚಿತ್ರ ಬರೆಯುವ ಸ್ಪರ್ಧೆ ಹಮ್ಮಿಕೊಂಡು ವಿಜೇತರಿಗೆ ಬಹುಮಾನ ವಿತರಣೆ ನಡೆಯಿತು.

ಸಂಸ್ಥೆಯ ಕಾರ್ಯನಿರ್ವಾಹಕ ಕೆ ಎಸ್ ಮುಸ್ತಫಾ ಕಕ್ಕಿಂಜೆ ಅವರ ನೇತೃತ್ವದಲ್ಲಿ ಜರಗಿದ ಸಮಾರಂಭದಲ್ಲಿ ಅತಿಥಿಗಳನ್ನು ಸಿಬ್ಬಂದಿಗಳು ಸ್ವಾಗತಿಸಿದರು. ಸಿದ್ದೀಕ್, ನಝೀರ್ ಹಾಗೂ ಸಿಬ್ಬಂದಿಗಳು ಜೊತೆಗಿದ್ದರು.

ಸ್ಪರ್ಧೆಯಲ್ಲಿ ತಾಲೂಕಿನ ಏಳ್ನೂರಕ್ಕೂ‌ ಹೆಚ್ಚು ಚಿತ್ರಗಳು ಬಂದಿದ್ದು ಪ್ರಬುದ್ಧ ತೀರ್ಪುಗಾರರ ಮೂಲಕ ವಿಜೇತರನ್ನು ಆಯ್ಕೆ ಮಾಡಲಾಯಿತು.
ಸ್ಪರ್ಧಾ ವಿಜೇತರಾದ ಸಹಲಾ ಫಾತಿಮಾ, ಫಾತಿಮಾ ರಫಾಹ್, ಬೃಂದಾ ಎಸ್, ಗೌತಮ್, ಇನಾಯಾ ರಮ್ಲತ್ ಇವರು ಬಹುಮಾನ ತಮ್ಮದಾಗಿಸಿಕೊಂಡರು. ಫಯಾಝ್ ಧನ್ಯವಾದ ಅರ್ಪಿಸಿದರು.


ನೂರಾ ಗೋಲ್ಡ್ ನಲ್ಲಿ ಅತ್ಯಾಧುನಿಕ ಶೈಲಿಯ ಆಭರಣಗಳು, ಏಂಟಿಕ್ ಮತ್ತು ಸೆಮಿ ಆಂಟಿಕ್ ಆಭರಣಗಳು, ಡೈಮಂಡ್ ಗಳ ಆಭರಣಗಳ ಅಪೂರ್ವ ಸಂಗ್ರಹವಿದ್ದು ಗ್ರಾಹಕರ ಮನಸಿಗೆ ಒಪ್ಪುವ ಡಿಸೈನ್ ಮಾಡಿಕೊಡುವ ವ್ಯವಸ್ಥೆಯೂ ಇದೆ. ಗ್ರಾಹಕರ ಸೇವೆಯೇ ನಮ್ಮ ಪ್ರಥಮ ಆದ್ಯತೆ ಎಂದು ನಿರ್ವಾಹಕ ಮುಸ್ತಫ ಕಕ್ಕಿಂಜೆ ತಿಳಿಸಿದರು.

Related posts

ಬೆಳ್ತಂಗಡಿ ತಾಲೂಕು ಹಬ್ಬಗಳ ಆಚರಣಾ ಸಮಿತಿ ಅಕ್ಕಮಹಾದೇವಿ ಜಯಂತಿ ಆಚರಣೆ

Suddi Udaya

ಬೆಳ್ತಂಗಡಿ ತಾಲೂಕಿನಲ್ಲಿ ನೈತಿಕ ಪೊಲೀಸ್ ಗಿರಿ: ಸೂಕ್ತ ಕ್ರಮಕ್ಕೆ ಆಗ್ರಹಿಸಿ ಎಸ್‌ವೈಎಸ್ ಬೆಳ್ತಂಗಡಿ ಝೋನ್ ನಿಂದ ತಹಶೀಲ್ದಾರ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯರವರಿಗೆ ಮನವಿ

Suddi Udaya

ಕರಾಟೆ ಸ್ಪರ್ಧೆ: ಬೆಂದ್ರಾಳ ಸೈಂಟ್ ಸಾವಿಯೋ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆ

Suddi Udaya

ಬಳಂಜದಲ್ಲಿ ಜೆಸಿಐ ಬೆಳ್ತಂಗಡಿ ಮಂಜುಶ್ರೀಯಿಂದ ವ್ಯಕ್ತಿತ್ವ ವಿಕಸನ ತರಬೇತಿ ಕಾರ್ಯಕ್ರಮ

Suddi Udaya

ಮುಗಳಿ ಬ್ರಹ್ಮ ಕ್ಷೇತ್ರ ದೇವರ ಸನ್ನಿಧಿ ಬಸದಿ ಒಳಗೆ ನುಗ್ಗಿದ್ದ ನೀರು

Suddi Udaya

ಭರತನಾಟ್ಯ ವಿದ್ವತ್ ಪರೀಕ್ಷೆಯಲ್ಲಿ ಉಜಿರೆಯ ಸುಶ್ಮಿತಾ ರಾವ್ ಉನ್ನತ ಶ್ರೇಣಿ

Suddi Udaya
error: Content is protected !!