September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಬೆಳಾಲು ಮೈತ್ರಿ ಯುವಕ ಮಂಡಲ ವತಿಯಿಂದ 21 ನೇ ವರ್ಷದ ಮೊಸರು ಕುಡಿಕೆ ಉತ್ಸವ, ಸಮಾರೋಪ ಸಮಾರಂಭ

ಬೆಳಾಲು : ಮೈತ್ರಿ ಯುವಕ ಮಂಡಲ ಬೆಳಾಲು ಇದರ ವತಿಯಿಂದ 21 ನೇ ವರ್ಷದ ಮೊಸರು ಕುಡಿಕೆ ಉತ್ಸವ, ಕೃಷ್ಣವೇಷ, ಆಟೋಟ ಸ್ಪರ್ಧೆಯ ಸಮಾರೋಪ ಸಮಾರಂಭ ಆ.17 ರಂದು ಸಂಘದ ವಠಾರದಲ್ಲಿ ನೆರವೇರಿತು.

ಉಪನ್ಯಾಸಕಿ ಡಾ. ಶೀಲಾವತಿಯವರು ಧಾರ್ಮಿಕ ಉಪನ್ಯಾಸ ನೀಡಿದರು. ಮುಖ್ಯ ಅತಿಥಿಗಳಾಗಿ ಬೌತಿಸ್ ಡಿ’ಸೋಜ ಬೆಳಾಲು, ಬೆಳಾಲು ಹಾಲು ಉತ್ಪಾದಕರ ಸಂಘ ಕಾರ್ಯದರ್ಶಿ ಸುಕೇಶ್ ಭಾಗವಹಿಸಿದ್ದರು, ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಮಹಾಂತೇಶ್ ಚೌಹಾನ್, ಜೇಸ್ಸಿ ಡಿ’ಸೋಜ, ಪದ್ಮಾವತಿ ಬನoದೂರು, ಕು. ಮನಶ್ರೀ ಇವರುಗಳಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.

ವೇದಿಕೆಯಲ್ಲಿ ಮೈತ್ರಿ ಯುವಕ ಮಂಡಲ ಅಧ್ಯಕ್ಷ ನಿತಿನ್ ಮೋನಿಸ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಗೌರವಾಧ್ಯಕ್ಷ ರಾಜೇಶ್ ಪಾರಳ, ಕಾರ್ಯದರ್ಶಿ ವಿಘ್ನೇಶ್ ಅನಂತೋಡಿ, ಪದಾಧಿಕಾರಿಗಳು ಉಪಸ್ಥಿತರಿದ್ದರು. ರಾಜೇಶ್ ಪಾರಳ ಸ್ವಾಗತಿಸಿ, ಸಂಘದ ಸಲಹೆಗಾರರು ನೋಟರಿ ವಕೀಲರಾದ ಶ್ರೀನಿವಾಸ ಗೌಡ ಕಾರ್ಯಕ್ರಮ ನಿರೂಪಿಸಿ, ಸಾತ್ವಿಕ್ ಸನ್ಮಾನ ಪತ್ರ ವಾಚಿಸಿದರು. ಕಿರಣ್ ಈರೆoತ್ಯಾರ್ ಬಹುಮಾನ ವಿಜೇತ ಪಟ್ಟಿ ವಾಚಿಸಿದರು. ಅಸೀಫ್ ಮುಂಡೆತ್ಯಾರು ಧನ್ಯವಾದವಿತ್ತರು. ಗ್ರಾಮಸ್ಥರಿಗೆ ವಿವಿಧ ಆಟೋಟ ಸ್ಪರ್ಧೆ ನಡೆಯಿತು.

Related posts

ಬೆಳ್ತಂಗಡಿ: ರೆಂಕೆದಗುತ್ತುನಲ್ಲಿ ಆವರಣ ಗೋಡೆ ಬಿದ್ದು ಹಾನಿ

Suddi Udaya

ಮುಂಡಾಜೆ: ಶ್ರೀ ದುರ್ಗಾಪರಮೇಶ್ವರೀ ಯಕ್ಷಗಾನ ಅಧ್ಯಯನ ಕೇಂದ್ರ ಉದ್ಘಾಟನೆ

Suddi Udaya

ಉಜಿರೆ: ಮಾಚಾರು ನಿವಾಸಿ ಕೃಷ್ಣ ಬೊಳ್ಮಿಣ್ಣಾಯ ನಿಧನ

Suddi Udaya

ಎಸ್.ಎಸ್.ಎಲ್.ಸಿ -ಪಿಯುಸಿ ನಂತರ ಭವಿಷ್ಯದ ಸರಿ ದಾರಿ – ಎ.26: ಅನುಗ್ರಹ ಟ್ರೈನಿಂಗ್ ಕಾಲೇಜ್ ನಲ್ಲಿ ಉಚಿತ ಮಾರ್ಗದರ್ಶನ ಕಾರ್ಯಾಗಾರ

Suddi Udaya

ಪ್ರೌಢಶಾಲಾ ಬಾಲಕ ಬಾಲಕಿಯರ ಕ್ರೀಡಾಕೂಟ : ಹೋಲಿ ರಿಡೀಮರ್ ಶಾಲಾ ವಿದ್ಯಾರ್ಥಿಗಳಿಗೆ ಹಲವು ಬಹುಮಾನ

Suddi Udaya

ಬೆಳ್ತಂಗಡಿ ಸಂತ ತೆರೇಸಾ ಪ್ರೌಢಶಾಲೆಯ ಶಿಕ್ಷಕಿ ಕು। ಥಿಯೋಫಿಲಾ ಡಿಸೋಜ ರವರಿಗೆ ವಿದಾಯ ಸಮಾರ೦ಭ

Suddi Udaya
error: Content is protected !!