ಉಜಿರೆ: ಶ್ರೀ ಸದಾಶಿವ ಬಾಲ ಗೋಕುಲ ಕೇಂದ್ರ ಕಿರಿಯಾಡಿ, ಮತ್ತು ಶ್ರೀ ಚಾಮುಂಡೇಶ್ವರಿ ಬಾಲಗೋಕುಲ ಕೇಂದ್ರ ಚಾಮುಂಡಿ ಬೆಟ್ಟ ಓಡಲ್ಲ ಇವುಗಳ ಜಂಟಿ ಆಶ್ರಯದಲ್ಲಿ, ಆ.15 ರಂದು ಕಿರಿಯಾಡಿ ದೇವಸ್ಥಾನದ ವಠಾರದಲ್ಲಿ ಪಾಲಕರ ಹಾಗೂ ಊರವರ ನೇತೃತ್ವದಲ್ಲಿ ಶ್ರೀ ಬಾಲ ಗೋಕಲಾಷ್ಟಮಿ ಕಾರ್ಯಕ್ರಮವು ಸಂಭ್ರಮ ಸಡಗರದಿಂದ ಜರುಗಿತು.

ನಿವೃತ್ತ ಶಿಕ್ಷಣ ಸಂಯೋಜನಾಧಿಕಾರಿ ಬಾ. ಬಾ. ಉಜಿರೆ ದೀಪ ಪ್ರಜ್ವಲನೆಯೊಂದಿಗೆ ಪ್ರಾರಂಭಗೊಂಡು, ನಿವೃತ್ತ ಸೈನ್ಯಧಿಕಾರಿಗಳಾದ ಹಾಗೂ ಪಾಲಕರಾದ ಜಯರಾಮ್ ಶೆಟ್ಟಿ ಕೆಮರ್ಜೆ ಹಾಗೂ ಸೂರಪ್ಪ ಗೌಡ ಕಿರಿಯಾಡಿ, ಇವರ ನೇತೃತ್ವದಲ್ಲಿ ಕೃಷ್ಣ ರಾಧೆ ವೇಷಗಳೊಂದಿಗೆ ಊರವರು ಜೊತೆಗೂಡಿ ಶಂಖ, ತಾಳ, ಜಾಗಟೆ ಕೃಷ್ಣನ ಘೋಷಣೆಗಳೊಂದಿಗೆ ಮೆರವಣಿಗೆ ಜರುಗಿತು.
35 ಕೃಷ್ಣ ರಾಧೆ ವೇಷಧಾರಿಗಳಿಂದ ವಿವಿಧ ನೃತ್ಯಗಳು, ಹಾಡು ಭಜನೆ ಕೃಷ್ಣನ ಘೋಷಣೆಗಳು ಗಣ್ಯರಿಂದ ಮೆಚ್ಚುಗೆ ಗಳಿಸಿದವು,
ಮುಖ್ಯ ಅತಿಥಿಗಳಾದ ಬಾಬಾ ಉಜಿರೆಯವರು ಶ್ರೀ ಕೃಷ್ಣನ ಬಾಲ್ಯ ಲೀಲೆಯ ಬಗ್ಗೆ ತಿಳಿಸಿದರು. ಗ್ರಾ.ಪಂ. ಸದಸ್ಯರಾದ ಶ್ರೀಮತಿ ಶಶಿಕಲಾ ದೇವಪ್ಪ ಗೌಡರವರು ಶುಭ ಹಾರೈಸಿದರು.
ತಾಲೂಕು ಗ್ರಾಮ ಸಮಿತಿ ಟೋಲಿ ಸದಸ್ಯೆ ಶ್ರೀಮತಿ ಭವ್ಯ ಮಾತಾಜಿಯವರು ಬಾಲ ಗೋಕುಲ ಕೇಂದ್ರದಲ್ಲಿ ನಡೆಯುತ್ತಿರುವ ಪ್ರಶಿಕ್ಷಣದ ಬಗ್ಗೆ ತಿಳಿಸಿದರು. ರಾಧಾಕೃಷ್ಣ ವೇಷಧಾರಿಗಳೊಂದಿಗೆ ಮಾತೆಯರು, ಪಾಲಕರು, ಮಾತಾಜಿಯವರು ಹಾಗೂ ಊರವರು ಪಾಲ್ಗೊಂಡರು .
ಉಜಿರೆ ಶಾರದಾ ಶೋರೂಮ್ ಮಾಲಕರು, ಹಾಗೂ ಉಜಿರೆ ಜೈನ ತರಕಾರಿ ಅಂಗಡಿಯವರು ಮತ್ತು ಗ್ರಾಮ ಪಂಚಾಯತ್ ಸದಸ್ಯೆ ಶ್ರೀಮತಿ ಶಶಿಕಲಾ ರವರು ಸಿಹಿ ತಿಂಡಿ ವಿತರಿಸಿದರು. ಪ್ರತಿ ಮನೆಯಿಂದ ಮಕ್ಕಳ ಜೊತೆ ಮಾತೆಯರು ಮುಷ್ಟಿ ಅವಲಕ್ಕಿ ಪ್ರಸಾದವನ್ನು ಕೃಷ್ಣದೇವರಿಗೆ ಸಮರ್ಪಿಸಿದರು.
ಶಿಕ್ಷಕಿ ಸೇವಂತಿ ನಿರಂಜನ್ ನಿರೂಪಿಸಿ, ರಾಜೇಶ್ವರಿ ಸ್ವಾಗತಿಸಿ, ಧನ್ಯವಾದವಿತ್ತರು.











