23.5 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಶಿಶಿಲದಲ್ಲಿ 28ನೇ ವರ್ಷದ ಮೊಸರು ಕುಡಿಕೆ ಉತ್ಸವ, ಪ್ರತಿಭಾ ಪುರಸ್ಕಾರ

ಶಿಶಿಲ: ಶ್ರೀ ದುರ್ಗಾಪರಮೇಶ್ವರಿ ಯುವಕ ಮಂಡಲ ವೈಕುಂಠಪುರ ಶಿಶಿಲ ಇವರ ಆಶ್ರಯದಲ್ಲಿ 28ನೇ ವರ್ಷದ ಮೊಸರು ಕುಡಿಕೆ ಉತ್ಸವ ಜರುಗಿತು.


ಬೆಳಿಗ್ಗೆ ವಾಲ್ಮೀಕಿ ಆಶ್ರಮ ಶಾಲಾ ಶಿಕ್ಷಕ ರಕ್ಷಕ ಸಂಘದ ಉಪಾಧ್ಯಕ್ಷ ಉಮೇಶ್ ಕುಕ್ಕೆಶ್ರೀ ಕಾರ್ಯಕ್ರಮ ಉದ್ಘಾಟಿಸಿದರು.
ಬಳಿಕ ಪುರುಷರಿಗೆ ಮಹಿಳೆಯರಿಗೆ ಹಾಗೂ ಮಕ್ಕಳಿಗೆ ವಿವಿಧ ಕ್ರೀಡಾ ಸ್ಪರ್ಧೆಗಳು ನಡೆದವು.


ಮಕ್ಕಳಿಗೆ ಶ್ರೀ ಕೃಷ್ಣ ವೇಷ ಸ್ಪರ್ಧೆ ಆಯೋಜಿಸಲಾಗಿತ್ತು. ವಾಲ್ಮೀಕಿ ಆಶ್ರಮ ಶಾಲೆ ,ಹೇವಾಜೆ ಕಿ.ಪ್ರಾ.ಶಾಲೆ ಹಿ.ಪ್ರಾ.ಶಾಲೆ ಶಿಶಿಲ ಹಾಗೂ ಅಂಗನವಾಡಿ ಪುಟಾಣಿಗಳಿಂದ ನೃತ್ಯ ಕಾರ್ಯಕ್ರಮ ನಡೆಯಿತು. ಮಂಗಳೂರಿನ ಭರತನಾಟ್ಯ ಕಲಾವಿದೆ ಕು|| ವಿಧಾತ್ರಿ ಕೋಣೆಮನೆ ಇವರಿಂದ ಭರತನಾಟ್ಯ ಕಾರ್ಯಕ್ರಮ ನಿತಿನ್ ಬೈರಕಟ್ಟ ಇವರಿಂದ ಉರಗ ಮಾಹಿತಿ ಕಾರ್ಯಕ್ರಮ ನಡೆಯಿತು.

ಬಳಿಕ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯುವಕ ಮಂಡಲದ ಅಧ್ಯಕ್ಷ ಹರೀಶ್ ಕೊಳಂಬೆ ವಹಿಸಿದ್ದರು. ಅರಣ್ಯ ಮಿತ್ರ ಪ್ರಶಸ್ತಿ ಪುರಸ್ಕೃತ ಸಚಿನ್ ಭಿಡೆ ಮುಂಡಾಜೆ, ಉದ್ಯಮಿ ದಯಾನಂದ ಶೆಟ್ಟಿ ಹಾಗೂ ನಾಟಿವೈದ್ಯೆ ಮುತ್ತಮ್ ಇವರಿಗೆ ಹಾಗೂ ಎಸ್ ಎಸ್ ಎಲ್ ಸಿ ಮತ್ತು ದ್ವಿತೀಯ ಪಿಯುಸಿ ಸಾಧಕ ವಿದ್ಯಾರ್ಥಿಗಳಿಗೆ ಗೌರವಾರ್ಪಣೆ ಮಾಡಲಾಯಿತು.

ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಶಿಶಿಲ ಗ್ರಾಮ ಪಂಚಾಯತ್ ಅಧ್ಯಕ್ಷ ಸುಧಿನ್ ಡಿ., ಕೊಕ್ಕಡ ಗ್ರಾಮ ಆಡಳಿತಾಧಿಕಾರಿ ಶ್ರೀಮತಿ ತೇಜಸ್ವಿ ಹಾಗೂ ಉಮೇಶ್ ಕುಕ್ಕೆಶ್ರೀ ಉಪಸ್ಥಿತರಿದ್ದರು. ನಿತಿನ್ ಬೈರಕಟ್ಟ ಸ್ವಾಗತಿಸಿದರು. ಸುಂದರ ಕೆ. ಪ್ರಾಸ್ತಾವಿಕ ಮಾತುಗಳನ್ನಾಡಿದರು. ರಂಜಿತ್ ಹಾಗೂ ಶರತ್ ಬಹುಮಾನ ವಿಜೇತರ ಪಟ್ಟಿ ವಾಚಿಸಿದರು. ಶರತ್, ಭರತ್ ವಂದಿಸಿದರು. ಸತೀಶ್ ಬೆದ್ರ ಕಾರ್ಯಕ್ರಮ ನಿರೂಪಿಸಿದರು. ಯುವಕ ಮಂಡಲದ ಸದಸ್ಯರು ಸಹಕರಿಸಿದರು.

Related posts

ಕರಾಟೆ ಚಾಂಪಿಯನ್ ಶಿಪ್ : ಬಳ್ಳಮಂಜ ಶ್ರೀ ವಿದ್ಯಾಸಾಗರ ಸಿಬಿಎಸ್ ಇ ಶಾಲೆಯ ವಿದ್ಯಾರ್ಥಿಗಳಿಗೆ ಸಮಗ್ರ ಪ್ರಶಸ್ತಿ

Suddi Udaya

ಬಳಂಜ ಶ್ರೀ ಪಂಚಲಿಂಗೇಶ್ವರ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಆಟಿ ಅಮಾವಾಸ್ಯೆ

Suddi Udaya

ರಂಜಿತ್ ಎಚ್ ಡಿ ಯವರಿಗೆ ಜೆಸಿಐ ವಲಯ 15ರ ಅತ್ಯುತ್ತಮ ಘಟಕಾಧ್ಯಕ್ಷ ಪ್ರಶಸ್ತಿ

Suddi Udaya

ಅ.15-ಡಿ.31: ಶ್ರೀ ದುರ್ಗಾ ಟೆಕ್ಸ್‌ಟೈಲ್ಸ್‌ನಲ್ಲಿ ಫೆಸ್ಟಿವಲ್ ಮೆಗಾ ಡಿಸ್ಕೌಂಟ್ ಆಫರ್

Suddi Udaya

ಉಜಿರೆ: ಎಸ್.ಡಿ.ಎಂ. ಬಿ.ಎಡ್. ಕಾಲೇಜು ವ್ಯಕ್ತಿತ್ವ ವಿಕಸನ ಕಾರ್ಯಕ್ರಮ

Suddi Udaya

ಕೊಯ್ಯೂರು ಕಾಂತಜೆ ಸಮೀಪ ತಡೆ ಗೋಡೆಗೆ ಕೆ.ಎಸ್.ಆರ್.ಟಿ.ಸಿ.ಬಸ್ ಡಿಕ್ಕಿ, ತಪ್ಪಿದ ದೊಡ್ಡ ಅನಾಹುತ

Suddi Udaya
error: Content is protected !!