37.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಸುಲ್ಕೇರಿ ಬ್ರಹ್ಮಶ್ರೀ ಗುರುನಾರಾಯಣ ಸೇವಾ ಸಮಿತಿಯಿಂದ ಆಟಿಡೊಂಜಿ ದಿನ ಕಾರ್ಯಕ್ರಮ

ಸುಲ್ಕೇರಿ: ಬ್ರಹ್ಮಶ್ರೀ ಗುರುನಾರಾಯಣ ಸೇವಾ ಸಮಿತಿ ಬ್ರಹ್ಮಗಿರಿ ಸುಲ್ಕೇರಿ ಇವರ ನೇತೃತ್ವದಲ್ಲಿ ಆಟಿಡೊಂಜಿ ದಿನ ಕಾರ್ಯಕ್ರಮ ನಡೆಯಿತು.

ಬ್ರಹ್ಮಶ್ರೀ ಗುರುನಾರಾಯಣ ಸೇವಾ ಸಮಿತಿಯ ಗೌರವಾಧ್ಯಕ್ಷ ಸುಧೀರ್ ಎಸ್ .ಪಿ ರವರು ದೀಪಪ್ರಜ್ವಲನೆ ಮಾಡುವುದರ ಮುಖಾಂತರ ಕಾರ್ಯಕ್ರಮವನ್ನು ಉದ್ಘಾಟಿಸಿ, ಆಟಿ ತಿಂಗಳಲ್ಲಿ ನಮ್ಮ ಹಿರಿಯರು ಆಚರಿಸಿಕೊಂಡು ಬಂದ ಸಂಪ್ರದಾಯಗಳನ್ನು ಉಳಿಸಿ ಬೆಳೆಸುವ ಕೆಲಸವನ್ನು ನಾವೆಲ್ಲರೂ ಮಾಡಬೇಕು ಎಂದು ತಿಳಿಸಿದರು.

ಮುಖ್ಯ ಅತಿಥಿಗಳಾದ ಶ್ರೀ ಕ್ಷೇತ್ರ ಗೆಜ್ಜೆಗಿರಿಯ ಯಕ್ಷಗಾನ ಮಂಡಳಿಯ ಸಂಚಾಲಕ ನಿತ್ಯಾನಂದ ನಾವರ ಮಾತಾಡಿ ನಮ್ಮ ಹಿರಿಯರು ಆಟಿ ತಿಂಗಳಲ್ಲಿ ಯಾವ ಬಗೆಯ ತಿಂಡಿಗಳನ್ನು ಸೇವಿಸುತ್ತಿದ್ದರು, ಅನ್ನುವುದನ್ನು ಈ ಕಾರ್ಯಕ್ರಮದ ಮುಖಾಂತರ ಯುವಪೀಳಿಗೆಗೆ ಪರಿಚಯಿಸಲಾಯಿತು ಹಾಗೂ ನಮ್ಮಲ್ಲಿ ಯಾವುದೇ ರೀತಿಯ ಕೀಳರಿಮೆ ಇಲ್ಲದೆ ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಬ್ರಹ್ಮಶ್ರೀ ಗುರುನಾರಾಯಣ ಸೇವಾ ಸಮಿತಿಯ ಅಧ್ಯಕ್ಷ ವಸಂತ ಪೂಜಾರಿಯವರು, ನಿಮ್ಮೆಲ್ಲರ ಸಹಕಾರದಿಂದ ಕಾರ್ಯಕ್ರಮ ಯಶಸ್ವಿಯಾಗಿದೆ ಮುಂದಕ್ಕೂ ನಿಮ್ಮೆಲ್ಲರ ಸಹಕಾರ ಇದೆ ರೀತಿ ಇರಲಿ ಎಂದು ಆಶಿಸಿದರು. ಒಟ್ಟು 32 ಬಗೆಯ ತಿಂಡಿ ಎಲ್ಲಾರ ಗಮನ ಸೆಳೆಯಿತು. ಮಕ್ಕಳು ಹಾಗೂ ಸಮಿತಿಯ ಸದಸ್ಯರಿಂದ ವಿವಿಧ ರೀತಿಯ ಮನರಂಜನಾ ಕಾರ್ಯಕ್ರಮವು ನಡೆಯಿತು.

ಈ ಸಂಧರ್ಭದಲ್ಲಿ ಸಾವ್ಯ ಗ್ರಾಮದ ಉದ್ಯಮಿಯಾದ ದಿನೇಶ್ ಕೋಟ್ಯಾನ್, ನಾರಾವಿಯ ಪ್ರಾಥಮಿಕ ಕೃಷಿಪತ್ತಿನ ಬ್ಯಾಂಕ್ ನ ನಿರ್ದೇಶಕರಾದ ಶ್ರೀಮತಿ ಯಶೋಧ ನಿತ್ಯಾನಂದ, ಸುಲ್ಕೇರಿಯ ಮಹಿಳಾ ಬಿಲ್ಲವ ವೇದಿಕೆಯ ಮಾಜಿ ಅಧ್ಯಕ್ಷೆ ಶ್ರೀಮತಿ ಪ್ರೇಮ ಲೋಕಯ್ಯ ಪೂಜಾರಿ, ಸುಲ್ಕೇರಿ ಗ್ರಾಮ ಪಂಚಾಯತಿನ ಸದಸ್ಯರಾದ ನಾರಾಯಣ ಪೂಜಾರಿ ಪರಾರಿ, ಸಮಿತಿಯ ನಿಕಟಪೂರ್ವ ಅಧ್ಯಕ್ಷ ಕೊರಗಪ್ಪ ಪೂಜಾರಿ, ಬರ್ಕೆಮನೆತನದ ಗುರಿಕಾರರಾದ ನಾರಾಯಣ ಪೂಜಾರಿ, ರಾಜು ಪೂಜಾರಿ, ಸುದೀಪ್ ಪೂಜಾರಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸುಲ್ಕೇರಿ ಒಕ್ಕೂಟದ ಅಧ್ಯಕ್ಷರಾದ ಯಶೋಧರ ಪೂಜಾರಿ ಹಾಗೂ ಸಮಿತಿಯ ಪದಾಧಿಕಾರಿಗಳು ಮತ್ತು ಸರ್ವ ಸದಸ್ಯರು ಉಪಸ್ಥಿತರಿದ್ದರು.

ಶ್ರೀಮತಿ ಮಲ್ಲಿಕಾ ಕಾರ್ಯಕ್ರಮ ನಿರೂಪಿಸಿದರು, ನಿಕಟಪೂರ್ವ ಕಾರ್ಯದರ್ಶಿ ಡೀಕಯ್ಯ ಪೂಜಾರಿ ಸ್ವಾಗತಿಸಿ, ವಸಂತಿ ಧನ್ಯವಾದವಿತ್ತರು

Related posts

ಶಾಸ್ತ್ರೀಯ ಸಂಗೀತ ಜೂನಿಯರ್ ಗ್ರೇಡ್ ಪರೀಕ್ಷೆಯಲ್ಲಿ ಸರಸ್ವತಿ ಸಂಗೀತ ಶಾಲೆಗೆ ಶೇಕಡ 100 ಫಲಿತಾಂಶ

Suddi Udaya

ಲಾಯಿಲ: ಪಡ್ಲಾಡಿ ಶ್ರೀ ಕೃಷ್ಣ ಜನ್ಮಾಷ್ಟಮಿ ಸಮಿತಿ: ಅಧ್ಯಕ್ಷರಾಗಿ ಹರ್ಷಿತ್ ನಿನ್ನಿಕಲ್ಲು, ಕಾರ್ಯದರ್ಶಿ ವಿನಯ್, ಕೋಶಾಧಿಕಾರಿ ಹರೀಶ್ ಎಲ್.ಆಯ್ಕೆ

Suddi Udaya

ಪಟ್ರಮೆ: ಸಂಕೇಶ ಮನೆ ನಿವಾಸಿ ಸುದೇಶ್ ನಿಧನ

Suddi Udaya

ಕಳೆಂಜ ಗ್ರಾಮ ಪಂಚಾಯತ್ ವತಿಯಿಂದ ನಿವೃತ್ತ ಸೈನಿಕ ಕೆ. ಮಹಾಬಲ ಕಾಂತ್ರೇಲು ಮತ್ತು ಹಿರಿಯ ಪಶು ವೈದ್ಯ ಯಾದವ ಗೌಡ ರವರಿಗೆ ಸನ್ಮಾನ

Suddi Udaya

ನಯನಾಡು ಸರಕಾರಿ ಪ್ರೌಢಶಾಲೆಗೆ ಯಸ್ಕಾವ ಕಂಪೆನಿಯ ವತಿಯಿಂದ ಉಪಕರಣಗಳ ಹಸ್ತಾಂತರ

Suddi Udaya

ಮುಂಡಾಜೆ ಬಂಟರ ಗ್ರಾಮ ಸಮಿತಿ  ಮಾಸಿಕ ಸಭೆ: ಎಸ್ ಎಸ್ ಎಲ್ ಸಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪುರಸ್ಕಾರ

Suddi Udaya
error: Content is protected !!