September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿವರದಿಶಾಲಾ ಕಾಲೇಜು

ಗುಂಡೂರಿ ಸ.ಕಿ.ಪ್ರಾ. ಶಾಲೆಯಲ್ಲಿ 79ನೇ ಸ್ವಾತಂತ್ರ ದಿನಾಚರಣೆ

ವೇಣೂರು: ಗುಂಡೂರಿ ಸ.ಕಿ.ಪ್ರಾ. ಶಾಲೆಯಲ್ಲಿ 79ನೇ ಸ್ವಾತಂತ್ರ ದಿನಾಚರಣೆಯ ಧ್ವಜಾರೋಹಣವನ್ನು ಶಾಲಾಭಿವೃದ್ದಿ ಸಮಿತಿಯ ಅಧ್ಯಕ್ಷ ಪ್ರವೀಣ್ ಆಚಾರ್ಯ ನೆರವೇರಿಸಿದರು.

ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆರಂಬೋಡಿ ಗ್ರಾ.ಪಂ. ಅಧ್ಯಕ್ಷ ಪ್ರವೀಣ್ ಚಂದ್ರ ಜೈನ್ ಜಂತೋಡಿಗುತ್ತು ವಹಿಸಿದ್ದರು. ವೇದಿಕೆಯಲ್ಲಿ ಗ್ರಾ.ಪಂ. ಉಪಾಧ್ಯಕ್ಷೆ ತೇಜಸ್ವಿನಿ, ವೇಣೂರು ಗ್ರಾ.ಪಂ. ಸದಸ್ಯರಾದ ದಿನೇಶ್ ಪೂಜಾರಿ, ಯುವ ಸೇವಾ ಸಂಗಮ ಸೇವಾಟ್ರಸ್ಟ್(ರಿ) ವೇಣೂರು ಇದರ ಅಧ್ಯಕ್ಷ ವಿಜಯ ಗೌಡ, ತುಂಬೆದಲೆಕ್ಕಿ ಶ್ರೀ ಸತ್ಯನಾರಾಯಣ ಭಜನಾ ಮಂದಿರದ ಅಧ್ಯಕ್ಷ ರಮೇಶ್ ಪೂಜಾರಿ ಪಡ್ಡಾಯಿ ಮಜಲು ಉಪಸ್ಥಿತರಿದ್ದರು.

ರೂ.18,000 ವೆಚ್ಚದಲ್ಲಿ ಶಾಲಾ ಎದುರು ಟೈಲ್ಸ್ ಅಳವಡಿಸಿದ ಶ್ರೀ ಕ್ಷೇ.ಧ.ಗ್ರಾ.ಯೋ. ಗುಂಡೂರಿ ಸೇವಾಪ್ರತಿನಿಧಿ ಹರೀಶ್ ಪೂಜಾರಿ ಅವರನ್ನು ಸನ್ಮಾನಿಸಲಾಯಿತು. ಯುವ ಸೇವಾ ಸಂಗಮ ಸೇವಾ ಟ್ರಸ್ಟ್ (ರಿ)ವೇಣೂರು ಇವರು ಶಾಲಾ ಮಕ್ಕಳಿಗೆ ಉಚಿತ ಐಡಿ, ಬೆಲ್ಟ್ ನೀಡಿದರು ಹಾಗೂ ಶಾಲಾ ವಠಾರದಲ್ಲಿ ವಿವಿಧ ಬಗೆಯ ಫಲ ವಸ್ತುಗಳ ಗಿಡಗಳನ್ನು ನೆಟ್ಟು ವನಮಹೋತ್ಸವ ಆಚರಿಸಿದರು. ಶಾಲಾಮುಖ್ಯ ಶಿಕ್ಷಕಿ ಶ್ರೀಮತಿ ಶೖಲಜಾ ಸ್ವಾಗತಿಸಿದರು. ಸಹ ಶಿಕ್ಷಕಿ ದಿಶಾಂತ ನಿರೂಪಿಸಿದರು.

Related posts

ಹೊಸ್ತೋಟ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ದಿನಾಚರಣೆ

Suddi Udaya

ಬಾರ್ಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಿಂದ ಕಳೆಂಜ ನಂದಗೋಕುಲ ಗೋಶಾಲೆಗೆ ದೇಣಿಗೆ ಹಸ್ತಾಂತರ

Suddi Udaya

ಗುರುವಾಯನಕೆರೆ ಆರ್ವಿಕ್ ಜ್ಯುವೆಲ್ಲರ್ಸ್ & ವರ್ಕ್ಸ್ ನಲ್ಲಿ ಗಿಫ್ಟ್ ವೋಚರ್ ಡ್ರಾ

Suddi Udaya

ರೆಖ್ಯ: ಗ್ರಾಮದಲ್ಲಿ ಜನರ ಜೀವ ಬಲಿ ಪಡೆಯುವ ರಾಷ್ಟ್ರೀಯ ಹೆದ್ದಾರಿಯ ಅವೈಜ್ಞಾನಿಕ ಕಾಮಗಾರಿ ಗ್ರಾಮಸ್ಥರಿಂದ ಹೆದ್ದಾರಿ ತಡೆದು ಪ್ರತಿಭಟನೆ ಮಾಡಲು ನಿರ್ಧಾರ

Suddi Udaya

ಉಜಿರೆ: ವಿಶೇಷ ಸ್ವಚ್ಛತಾ ಅಭಿಯಾನದ ಅಂಗವಾಗಿ ವಿವಿಧೆಡೆ ಸ್ವಚ್ಛತಾ ಶ್ರಮದಾನ ಹಾಗೂ ರಸ್ತೆ ಬದಿ ಅಪಾಯಕಾರಿ ತ್ಯಾಜ್ಯ ವಿಲೇವಾರಿ ಮಾಡಿದವರಿಗೆ ರೂ.5ಸಾವಿರ ದಂಡ

Suddi Udaya

ಅ.11: ಬೆಳ್ತಂಗಡಿಯಲ್ಲಿ ಇಂದಿರಾ ಕ್ಯಾಂಟೀನ್‌ ಉದ್ಘಾಟನೆ: ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರಿಂದ ಚಾಲನೆ

Suddi Udaya
error: Content is protected !!