September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಕುದುರೆಮುಖ ರಾಷ್ಟ್ರೀಯ ಉದ್ಯಾನವನದಿಂದ ಪುನರ್ವಸತಿ ಹೊಂದಿರುವ ಫಲಾನುಭವಿಗಳಿಗೆ ಜಾಗತಿಕ ವನ್ಯಜೀವಿ ಸಂರಕ್ಷಣಾ ಸಂಘದಿಂದ ಚಾಲಾನ ಪರವಾನಿಗೆ ಹಾಗೂ ತೋಟಗಾರಿಕಾ ಬೆಳೆಗಳ ಸಸಿ ವಿತರಣೆ

ಕುತ್ಲೂರು : ಕುದುರೆಮುಖ ರಾಷ್ಟ್ರೀಯ ಉದ್ಯಾನವನದಿಂದ ಪುನರ್ವಸತಿ ಹೊಂದಿರುವ ಬೆಳ್ತಂಗಡಿ ಹಾಗೂ ಕಾರ್ಕಳ ತಾಲೂಕಿನ ಕುಟುಂಬಗಳಿಗೆ ಜಾಗತಿಕ ವನ್ಯಜೀವಿ ಸಂರಕ್ಷಣಾ ಸಂಸ್ಥೆಯಿಂದ ಉಚಿತವಾಗಿ ವಾಹನ ಚಾಲಾನ ತರಬೇತಿ ನೀಡಿ 32 ಫಲಾನುಭವಿಗಳಿಗೆ ಚಾಲಾನ ಪರವಾನಿಗೆ ಹಾಗೂ ತೋಟಗಾರಿಕಾ ಬೆಳೆಗಳ ಸಸಿ ವಿತರಣೆ ಕಾರ್ಯಕ್ರಮ ಆ.18ರಂದು ಕುತ್ಲೂರು ಮಂಜುಶ್ರೀ ಸಭಾಭವನದಲ್ಲಿ ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಕುದುರೆಮುಖ ವನ್ಯ ಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣ ಅಧಿಕಾರಿ ಡಾ. ಶಿವರಾಮ ಬಾಬು ಉದ್ಘಾಟಿಸಿ, ವಾಹನ ಚಾಲನ ತರಬೇತಿ ನೀಡಿ ವಾಹನ ಚಾಲನ ಪರವಾನಿಗೆ 32 ಫಲಾನುಭವಿಗಳಿಗೆ ಹಸ್ತಾಂತರಿಸಿದರು. ತೋಟಗಾರಿಕಾ ಬೆಳೆಗಳಾದ 3000 ಅಡಿಕೆ ಗಿಡ 100 ತೆಂಗಿನ ಗಿಡ 500 ಕಾಳು ಮೆಣಸು, ರಾಮಪತ್ರೆ 200 , ಮಲ್ಲಿಗೆ ಕೃಷಿ ಗಿಡಗಳನ್ನು ಆಯ್ದ ಫಲಾನುಭವಿಗಳಗೆ ಸಾಂಕೇತಿಕವಾಗಿ ನೀಡಿದರು. ಕುದುರೆಮುಖ ರಾಷ್ಟ್ರೀ ಯ ಉದ್ಯಾನವನದಿಂದ ಪುನರ್ವಸತಿ ಹೊಂದಿದ ಕುಟುಂಬಗಳ ಎಲ್ಲಾ ಸಮಸ್ಯೆಗಳಿಗೆ ಸದಾ ಸ್ಪಂದಿಸುತ್ತಿದ್ದ ಎನ್.ಜಿ.ಒ ಸಂಸ್ಥೆಯ ಕೆಲಸ ಕಾರ್ಯಗಳನ್ನು ಮಾಡುತ್ತಿರುವ ರಾಮಚಂದ್ರ ಭಟ್ ಕುಕ್ಕುಜೆ ಕುತ್ಲೂರು ಇವರಿಗೆ ಅಭಿನಂದನೆ ಸಲ್ಲಿಸಿದರು. ರಾಷ್ಟ್ರೀಯ ಉದ್ಯಾನವನದಿಂದ ಪುನರ್ವಸತಿ ಹೊಂದುವ ಕುಟುಂಬಗಳಿಗೆ ಅತ್ಯುತ್ತಮ ರೀತಿಯಲ್ಲಿ ಪರಿಹಾರ ನೀಡಿ ಅವರ ಏಳಿಗೆಗೆ ಸದಾ ಸ್ಪಂದಿಸುವುದಾಗಿ ತಿಳಿಸಿದರು. ಕೆಲವೊಂದು ಕಡತಗಳ ಸಮಸ್ಯೆಯಿಂದಾಗಿ ಪುನರ್ವಸತಿ ಕಾರ್ಯ ನಿಧಾನಗತಿಯಲ್ಲಿ ನಡೆಯುತ್ತಿರುವ ಬಗ್ಗೆ ತಿಳಿಸಿದರು.

ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ ಎನ್.ಜಿಒ ಕಾರ್ಯಕ್ರಮಗಳ ಬಗ್ಗೆ ವಿವರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಾರಾವಿ ಗ್ರಾಮ ಪಂಚಾಯತಿಯ ಅಧ್ಯಕ್ಷ ರಾಜವರ್ಮ ಜೈನ್ ನೆರವೇರಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಎಸ್.ಡಿಎಮ್. ಐಟಿಐ ವೇಣೂರು ಇದರ ಮುಖ್ಯ ಶಿಕ್ಷಕ ಶ್ರೀಧರ್ ಡಿ. ವಾಹನ ಚಾಲನೆಯ ಬಗ್ಗೆ ಸಂಪೂರ್ಣ ಮಾಹಿತಿ ನೀಡಿ Global Wildlife Conservation Society ಯ ಕೆಲಸಕಾರ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಕುದುರೆಮುಖ ವನ್ಯಜೀವಿ ಉಪ ವಿಭಾಗ ಕಾರ್ಕಳ ಸಹಾಯ ಅರಣ್ಯ ಸಂರಕ್ಷಣಾ ಅಧಿಕಾರಿ ಸತೀಶ್ ಎನ್. ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ವೇದಿಕೆಯಲ್ಲಿ ಬೆಳ್ತಂಗಡಿ ವಲಯ ಅರಣ್ಯ ಅಧಿಕಾರಿ ವಿ. ಶರ್ಮಿಷ್ಠ, ಅಳದಂಗಡಿ ಉಪ ವಲಯ ಅರಣ್ಯ ಅಧಿಕಾರಿ ಭರತ್ , ನಾರಾವಿ ಮಾಂಡೋವಿ ಮೋಟರ‍್ಸ್ ಟೀಮ್ ಮ್ಯಾನೇಜರ್ ಚರಣ್ ಕುಮಾರ್ , ವೇಣೂರು ನಿಕಟಪೂರ್ವ ಅಧ್ಯಕ್ಷ ಕೆ.ಎಸ್. ನಿರಂಜನ್ , ಸೀತಾಶ್ರೀರಾಮ್ ಡೈವಿಂಗ್ ಸ್ಕೂಲ್ ವೇಣೂರು, ಕುತ್ಲೂರು ಎಸ್.ಡಿ.ಎಮ್.ಸಿ. ಉಪಾಧ್ಯಕ್ಷೆ ಶ್ರೀಮತಿ ಶ್ವೇತಾ ಜಗದೀಶ್ , ನಾರಾವಿ ವಲಯ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೇಲ್ವಿಚಾರಕರು ಶ್ರೀಮತಿ ವಿಶಾಲ , ಕುತ್ಲೂರು ಸೇವಾ ಪ್ರತಿನಿಧಿ ಶ್ರೀಮತಿ ಉಷಾ ಉಪಸ್ಥಿತರಿದ್ದರು.

ಕಾರ್ಯಕ್ರಮದ ಸಂಯೋಜಕ ಹಾಗೂ ಎನ್.ಜಿ.ಒ ವನ್ಯಜೀವಿ ಸಂರಕ್ಷಕ ರಾಮಚಂದ್ರ ಭಟ್ ಕುಕ್ಕುಜೆ ಕುತ್ಲೂರು ಸ್ವಾಗತಿಸಿ ಸಂಸ್ಥೆ ಈ ವರೆಗೆ ನಡೆಸಿದ ಅರಣ್ಯ ಸಂರಕ್ಷಣೆ ಹಾಗೂ ಕೆಲಸ ಕಾರ್ಯಗಳ ಬಗ್ಗೆ ವಿವರಿಸಿದರು ಅಲ್ಲದೆ ಪುನರ್ವಸತಿ ಹೊಂದಿರುವ ಕುಟುಂಬಗಳ ಸರ್ವತೋಮುಖ ಬೆಳವಣಿಗೆಗೆ ಕಾರಣೀಕರ್ತರಾದ ಎಲ್ಲಾ ಇಲಾಖೆಯ ಹಾಗೂ ಸರಕಾರವನ್ನು ಅಭಿನಂದಿಸಿದರು.

ಬೆಳ್ತಂಗಡಿ ತಾಲೂಕಿನ ಕುತ್ಲೂರು ಗ್ರಾಮದ ಕುರಿಯಾಡಿ ಸುತ್ತುಗಟ್ಟಿನಿಂದ 2014ರಲ್ಲಿ ಪುನರ್ವಸತಿ ಹೊಂದಿ ಈಗ ನೆಲ್ಲಿಕಾರು ಗ್ರಾಮದ ಪೆರ್ನೊಡಿ ರಾಧಿಕ ನಿವಾಸದಲ್ಲಿ ವಾಸ್ತವ್ಯವಿದ್ದು ಅತ್ಯುತ್ತಮ ಕೃಷಿ ಮಾಡಿ ಕುಟುಂಬದ ಬೆಳವಣಿಗೆಗೆ ಕಾರಣೀಕರ್ತರಾಗಿ ಉತ್ತಮ ಪುನರ್ವಸತಿ ಕುಟುಂಬ ಎಂದು ಪ್ರಶಂಸೆಗೆ ಪಾತ್ರರಾದ ಬಾಬು ಮಲೆಕುಡಿಯರವರ ಪರವಾಗಿ ಅವರ ಪುತ್ರ ಗಣೇಶ ಇವರನ್ನು ಶಾಲು ಹೂ ಹಾರ ಹಾಕಿ ಫಲಪುಷ್ಪ ನೀಡಿ ಸನ್ಮಾನಿಸಲಾಯಿತು.

ಕುದುರೆಮುಖ ರಾಷ್ಟ್ರೀಯ ಉದ್ಯಾನವನದಿಂದ ಪುನರ್ವಸತಿ ಹೊಂದಿದ ವಸಂತಿ ಪೆರ್ನೊಡಿ, ದೇವಪ್ಪ ಮಲೆಕುಡಿಯ ನೂರಾಳ್‌ಬೆಟ್ಟು, ಗಣೇಶ ಸುಲ್ಕೇರಿ, ವಸಂತ ಪೂಜಾರಿ ಸುಲ್ಕೇರಿ ಪುನರ್ವಸತಿ ಹೊಂದಿ ಒಳ್ಳೆಯ ಜೀವನ ನಡೆಸುತ್ತಿರುವ ಬಗ್ಗೆ ಹಾಗೂ ಎನ್.ಜಿ.ಒ ದವರಾದ ಕೆ. ರಾಮಚಂದ್ರ ಭಟ್‌ರವರು ಮಾಡಿದ ಸಹಾಯವನ್ನು ನೆನಪಿಸಿ ಇನ್ನೂ ಪುನರ್ವಸತಿ ಹೊಂದುವ ಕುಟುಂಬಗಳಿಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಶ್ರೀಮತಿ ವಿದ್ಯಾ ಜೆ. ಭಟ್ ನಾರಾವಿ ಪ್ರಾರ್ಥಿಸಿ, ಉಮೇಶ್ ಎಮ್.ಕೆ. ಮಾಪಾಲು ನಾರಾವಿ ಕಾರ್ಯಕ್ರಮ ನಿರೂಪಿಸಿ, ಧನ್ಯವಾದವಿತ್ತರು.

Related posts

ಭಾರತೀಯ ಭೂ ಸೇನೆಯಲ್ಲಿ 20 ವರ್ಷ ಸೇವೆ ಸಲ್ಲಿಸಿ ನಿವೃತ್ತಿಗೊಂಡು ಊರಿಗೆ ಆಗಮಿಸಿದ ಯೋಧ ವಿಕ್ರಮ್ ಜೆ.ಎನ್ ರವರಿಗೆ ಅಭಿನಂದನಾ ಕಾರ್ಯಕ್ರಮ

Suddi Udaya

ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ

Suddi Udaya

ಅರಿಕೆಗುಡ್ಡೆ ಶ್ರೀ ವನದುರ್ಗಾ ಕ್ಷೇತ್ರದಲ್ಲಿ ಪ್ರತಿಷ್ಠಾ ಅಷ್ಠಬಂಧ ಬ್ರಹ್ಮಕಲಶೋತ್ಸವ: ಧಾರ್ಮಿಕ ಸಭೆ

Suddi Udaya

ಉಜಿರೆ ಬೆನಕ ಹೆಲ್ತ್ ಸೆಂಟರ್ ವತಿಯಿಂದ ನಿವೃತ್ತ ಯೋಧ ಡಾ. ಗೋಪಾಲಕೃಷ್ಣ ಕಾಂಚೋಡುರಿಗೆ ಸನ್ಮಾನ

Suddi Udaya

ಮುಂಡೂರು ಶ್ರೀ ನಾಗಕಲ್ಲುರ್ಟಿ ದೈವಸ್ಥಾನ ವೈಭವ ಪೂರ್ಣವಾಗಿ ನಡೆದ ಕಾಲಾವಧಿ ನೇಮೋತ್ಸವ

Suddi Udaya

ಉಜಿರೆ ಶ್ರೀ ಧ.ಮಂಜುನಾಥೇಶ್ವರ ಕಾಲೇಜಿನಲ್ಲಿ ಗಾಂಧಿ ಜಯಂತಿ ಆಚರಣೆ

Suddi Udaya
error: Content is protected !!