
ಕಲ್ಮಂಜ: ಪ್ರಾಚೀನ ಗ್ರೀಕ್ ಮತ್ತು ಮೆಸಪೊಟೇಮಿಯ ನಾಗರಿಕತೆಗಳ ಸಹಿತ ಹಲವು ನಾಗರೀಕತೆಗಳು ಎಂದೋ ಅಳಿವಿನ ಅಂಚಿಗೆ ಸೇರಿದೆ. ಈ ಪ್ರಪಂಚವನ್ನು ಅತಿಕ್ರಮಿಸಿಕೊಂಡ ಅನ್ಯ ಧರ್ಮಗಳು ಅಲ್ಲಿನ ಸಂಸ್ಕೃತಿ, ಸಂಸ್ಕಾರಕ್ಕೆ ತಿಲಾಂಜಲಿ ಇಟ್ಟಿವೆ. ಆದರೆ ಅದರ ಸಮಕಾಲಿನ – ಸಿಂಧೂ ಬಯಲಿನಲ್ಲಿ ವಿಕಸನಗೊಂಡ ಭಾರತೀಯ ನಾಗರಿಕತೆ ಇನ್ನು ಜೀವಂತವಾಗಿದೆ. ಇದಕ್ಕೆ ಈ ನೆಲದ ಸಂಸ್ಕೃತಿ – ಸಂಸ್ಕಾರ ಮತ್ತು ಸಂಪ್ರದಾಯಗಳೇ ಕಾರಣ ಎಂದು ಕನ್ನಡ ಸಾಹಿತ್ಯ ಪರಿಷತ್ ಬೆಂಗಳೂರು ಇದರ ಕೇಂದ್ರೀಯ ಕಾರ್ಯಕಾರಿ ಸಮಿತಿ ಸದಸ್ಯರಾದ ಮಾಧವ ಎಂ.ಕೆ ಅಭಿಪ್ರಾಯಪಟ್ಟರು.

ಅವರು ಆ. 17ರಂದು ಶ್ರೀ ಓಂಕಾರೇಶ್ವರ ಭಜನಾ ಮಂಡಳಿ ಪಜಿರಡ್ಕ ಇವರ ಆಶ್ರಯದಲ್ಲಿ, ಸದಾಶಿವೇಶ್ವರ ದೇವಾಲಯದಲ್ಲಿ ನಡೆಸಲಾದ 13ನೇ ವರ್ಷದ ಗೋಕುಲಾಷ್ಟಮಿ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಅಧ್ಯಕ್ಷತೆಯನ್ನು ವಹಿಸಿದ್ದ ಸೇವಾ ಭಾರತಿ ಕನ್ಯಾಡಿ ಇದರ ಖಜಾಂಚಿ ಕೆ.ವಿನಾಯಕ ರಾವ್, ಓಂಕಾರೇಶ್ವರ ಭಜನಾ ಮಂಡಳಿಯ ಕಾರ್ಯಕ್ಷಮತೆಯನ್ನು ಶ್ಲಾಘಿಸಿದರು.

ವೇದಿಕೆಯಲ್ಲಿ ಕ್ಷೇತ್ರದ ಪ್ರಧಾನ ಅರ್ಚಕ ರಾಜೇಶ್ ಹೊಳ್ಳ, ಭಜನಾ ಮಂಡಳಿಯ ಅಧ್ಯಕ್ಷರಾಗಿರುವ ಗಣೇಶ್ ಎಸ್, ಕಲ್ಮಂಜ ಗ್ರಾ.ಪಂ. ಸದಸ್ಯರಾದ ಪ್ರವೀಣ್ ಗೌಡ ಕರಿಯನೆಲ ಉಪಸ್ಥಿತರಿದ್ದು, ಧಾರ್ಮಿಕ ಮುಖಂಡರಾದ ಕಿರಣ್ ಚಂದ್ರ .ಡಿ ಪುಷ್ಪಗಿರಿ ಉರುವಾಲು, ಅನ್ನದಾನದ ಸೇವಕರ್ತರಾದ ಅರ್ಚಕ ರಾಜೇಶ್ ಹೊಳ್ಳ, ಶ್ರೀ ನಾಗಬ್ರಹ್ಮ ಶಾಮಿಯಾನ ಮಾಲಕ ಜಯಾನಂದ ಮೂಡಾಯಿಬೆಟ್ಟು, ಮತ್ತು ನಿವೃತ್ತ ಯೋಧರಾದ ಮಂಜುನಾಥ್ ನಾಯ್ಕ ಮದ್ದಡ್ಕ ಇವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಬಾಲಚಂದ್ರ ರಾವ್ ಗುತ್ತು ಮನೆ, ಕಾರ್ಯಕ್ರಮಕ್ಕೆ ವಿದ್ಯುಕ್ತ ಚಾಲನೆ ನೀಡಿದರು. ಮುಖ್ಯ ಅತಿಥಿಗಳಾಗಿ ಸರಸ್ವತಿ ಆಂಗ್ಲ ಮಾಧ್ಯಮ ಶಾಲೆ ಮುಂಡಾಜೆ ಇದರ ಶಿಕ್ಷಕಿ ಶ್ರೀಮತಿ ವಿದ್ಯಾವತಿ ಗುಡಿಗಾರ್, ಪಜಿರಡ್ಕ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಕಾರ್ಯದರ್ಶಿ ಶ್ರೀ ಗಂಗಾಧರ್ ಗೌಡ ಕರಿಯನೆಲ, ಭಜನಾ ಮಂಡಳಿಯ ಕಾರ್ಯದರ್ಶಿ ಅಣ್ಣು ಎಂ.ಕೆ ಉಪಸ್ಥಿತರಿದ್ದು ಸಂದರ್ಭೋಚಿತವಾಗಿ ಮಾತನಾಡಿದರು. ಪ್ರಕಾಶ್ ಭಟ್ ಮಾಣಿಂಜೆ ಆಟೋಟ ಸ್ಪರ್ಧೆಗೆ ಚಾಲನೆ ನೀಡಿದರು.
ಅಭಿಜ್ಞಾ ಮತ್ತು ವಿಹಾನ್ ಪ್ರಾರ್ಥಿಸಿ, ಭಜನಾ ಮಂಡಳಿಯ ಸದಸ್ಯರುಗಳಾದ ಸುಜನ್ ಕುಮಾರ್ ವೈಯಕ್ತಿ ಗೀತೆ ಹಾಡಿ, ಚೇತನ್ ಗುಡಿಗಾರ್ ಸ್ವಾಗತಿಸಿ, ಸಂಚಾಲಕರಾದ ರಾಜೇಶ್ ಎಂ.ಕೆ ಧನ್ಯವಾದ ಇತ್ತರು. ಸುಂದರೇಶ್ ಎಂ.ಕೆ ನಿರೂಪಿಸಿ, ಪುರಂದರ ಗೌಡ ಕಾನಮೇರು, ತಾರನಾಥ , ರಮೇಶ್ ಎಸ್, ಆನಂದ ಎಸ್.ಡಿ, ಗ್ರಾಂ ಪಂ ಮಾಜಿ ಸದಸ್ಯೆ ಲೀಲಾವತಿ, ರಾಘವೇಂದ್ರ ಗೌಡ ಹೂಂಕ್ರೊಟ್ಟು, ರಾಜೇಶ್ ಸಂಗಮ್ ಅಟೋ, ದಿನೇಶ್ ಗೌಡ ಮೂಡಾಯಿಬೆಟ್ಟು, ಎಕ್ಸೆಲ್ ಟೆಕ್ನೋ ಸ್ಕೂಲ್ ವೇಣೂರು ಇಲ್ಲಿನ ಶಿಕ್ಷಕ ಕೃಷ್ಣಪ್ಪ ಎಂ.ಕೆ ಸಹಕರಿಸಿದರು. ರವಿ ರಂಜಿನಿ ಮುಂಡಾಜೆ, ಭವ್ಯ ಹೊಳ್ಳ ಉಜಿರೆ, ನೆಹರೂ ಯುವ ಕೇಂದ್ರ ಮಂಗಳೂರು ಇದರ ಸಾಂತಪ್ಪ ಎಂ ಕಲ್ಮಂಜ ತೀರ್ಪುಗಾರರಾಗಿ ಸಹಕರಿಸಿದರು.











