ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ನಾರಾವಿ ಮತ್ತು ಕುತ್ಲೂರು ಗ್ರಾಮದ ಶ್ರೀ ಕ್ಷೇತ್ರ ಧರ್ಮಸ್ಥಳದ ಭಕ್ತಾಭಿಮಾನಿಗಳಿಂದ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ಮನವಿ

ಬೆಳ್ತಂಗಡಿ: ನಾಡಿನ ಕೋಟ್ಯಂತರ ಭಕ್ತರ ನಂಬಿಕೆ ,ಶ್ರದ್ದೆಗಳ ಮತ್ತು ಧಾರ್ಮಿಕ ಕೇಂದ್ರವಾದ ಶ್ರೀ ಕ್ಷೇತ್ರ ಧರ್ಮಸ್ಥಳ ಮತ್ತು ಧರ್ಮಾಧಿಕಾರಿಯವರ ವಿರುದ್ಧ ಕೆಲ ಸಮಾಜ ವಿರೋಧಿ ವ್ಯಕ್ತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ, ನಿಂದನೆ, ಪ್ರಚೋದನಾತ್ಮಕ, ಅವಮಾನಕರ ಮತ್ತು ಅಸಹ್ಯಕರ ಹೇಳಿಕೆಗಳನ್ನು ನೀಡುವುದರ ಮೂಲಕ ಸಮಾಜದಲ್ಲಿ ಅಶಾಂತಿಯನ್ನು ಭಯದ ವಾತಾವರಣವನ್ನು ಸೃಷ್ಟಿಸಿ ಸಾಮಾಜಿಕ ಸ್ವಾಸ್ತ್ಯವನ್ನು ಹಾಳು ಮಾಡಲು ಪ್ರಯತ್ನಿಸುತ್ತಿದ್ದಾರೆ.

ಇದರಿಂದ ಸಮಾಜದ ಮೇಲೆ ದುಷ್ಪರಿಣಾಮ ಬೀರುವುದರ ಜೊತೆಗೆ ಕೋಟ್ಯಂತರ ಭಕ್ತರ ಶ್ರದ್ದೆ ಮತ್ತು ನಂಬಿಕೆಗಳಿಗೆ ತೀವ್ರ ಘಾಸಿಯನ್ನು0ಟು ಮಾಡಿದೆ. ಸಮಾಜದಲ್ಲಿ ಶಾಂತಿ, ನೆಮ್ಮದಿ, ಸಾಮರಸ್ಯಯನ್ನು ಕಾಪಾಡುವ ನಿಟ್ಟಿನಲ್ಲಿ ಇಂತಹ ಕೃತ್ಯಗಳನ್ನು ಮಾಡುವ ದುಷ್ಟ ಶಕ್ತಿಗಳನ್ನು ಧಮನಿಸುವ ಸಲುವಾಗಿ ಈ ಪ್ರಕರಣದ ಹಿಂದಿರುವ ಎಲ್ಲಾ ಸಮಾಜ ವಿರೋಧಿ ವ್ಯಕ್ತಿಗಳ, ಗುಂಪುಗಳ ವಿರುದ್ಧ ಕಾನೂನು ಕ್ರಮ ಜರಗಿಸಬೇಕು ಎಂಬ ಬೇಡಿಕೆಯೊಂದಿಗೆ ನಾರಾವಿ ಮತ್ತು ಕುತ್ಲೂರು ಗ್ರಾಮದ ಶ್ರೀ ಕ್ಷೇತ್ರ ಧರ್ಮಸ್ಥಳದ ಭಕ್ತಾಭಿಮಾನಿಗಳಿಂದ ಮಂಗಳೂರು ಜಿಲ್ಲಾಧಿಕಾರಿಯವರಿಗೆ ಮತ್ತು ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ಮನವಿಯನ್ನು ಸಲ್ಲಿಸಲಾಯಿತು.

Related posts

ಅಯ್ಯೋಧ್ಯೆ ಶ್ರೀ ರಾಮಲಲ್ಲಾನ ಪ್ರತಿಷ್ಟೆ ನಾಳ ದೇವಸ್ಥಾನದಲ್ಲಿ ನೇರಪ್ರಸಾರ, ಭಜನೆ, ಕರಸೇವಕರಿಗೆ ಸನ್ಮಾನ

Suddi Udaya

ಧರ್ಮಸ್ಥಳ: ದೊಂಡೋಲೆ ನಿವಾಸಿ ಗೃಹೋದ್ಯಮಿ ಸಂಧ್ಯಾ ಎಸ್ ಭಟ್ ನಿಧನ

Suddi Udaya

ಮಾಲಾಡಿ ಗ್ರಾ.ಪಂ. ನ ಪ್ರಥಮ ಸುತ್ತಿನ ಗ್ರಾಮ ಸಭೆ

Suddi Udaya

ನಿವೃತ್ತ ನೌಕರರ ಸಂಘದ ರಜತ ಮಹೋತ್ಸವ ಸ್ಮರಣಸಂಚಿಕೆ “ಪ್ರಬುದ್ಧ” ಡಾ| ಡಿ. ಹೆಗ್ಗಡೆಯವರಿಗೆ ಅರ್ಪಣೆ

Suddi Udaya

ದೀಪಕ್ ಜಿ ಯವರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ

Suddi Udaya

ಪುದುವೆಟ್ಟು ಹಿಂದೂ ಸೇವಾ ಸಮಿತಿ ವತಿಯಿಂದ ಲೋಕ ಕಲ್ಯಾಣಾರ್ಥವಾಗಿ 108 ತೆಂಗಿನಕಾಯಿ ಗಣಹೋಮ : ಶಾಸಕ ಹರೀಶ್ ಪೂಂಜ ಭಾಗಿ

Suddi Udaya
error: Content is protected !!