25.7 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪೊಲೀಸ್ಪ್ರಮುಖ ಸುದ್ದಿ

ಬೆಳ್ತಂಗಡಿ : ಮಹೇಶ್ ಶೆಟ್ಟಿ ತಿಮರೋಡಿ ಬಂಧನದ ವೇಳೆ ಕರ್ತವ್ಯಕ್ಕೆ ಅಡ್ಡಿ: ಗಿರೀಶ್ ಮಟ್ಟಣ್ಣನವ‌ರ್, ಜಯಂತ್ ಸೇರಿ ಹಲವರ ವಿರುದ್ದ ಪ್ರಕರಣ ದಾಖಲು

ಬೆಳ್ತಂಗಡಿ : ಉಜಿರೆ ತಿಮರೋಡಿ ಮನೆಯಲ್ಲಿ ಮಹೇಶ್ ಶೆಟ್ಟಿ ಬಂಧನ ಮಾಡಲು ಬ್ರಹ್ಮವಾರ ಪೊಲೀಸರು ಹೋದಾಗ ಕರ್ತವ್ಯಕ್ಕೆ ಅಡ್ಡಿಪಡಿಸಿದ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಹಲವರ ವಿರುದ್ಧ ಪ್ರಕರಣ ದಾಖಲಾಗಿದೆ.

ಯೂಟ್ಯೂಬ್ ಮೂಲಕ ಬಿ.ಎಲ್.ಸಂತೋಷ್ ವಿರುದ್ಧ ಮಹೇಶ್ ಶೆಟ್ಟಿ ತಿಮರೋಡಿ ಅವಹೇಳನಕಾರಿ ಹೇಳಿಕೆ ನೀಡಿದ ವಿರುದ್ಧ ಉಡುಪಿ ಜಿಲ್ಲೆಯ ಬ್ರಹ್ಮವಾರ ಪೊಲೀಸ್ ಠಾಣೆಯಲ್ಲಿ ಆ.18 ರಂದು ರಾಜೀವ್ ಕುಲಾಲ್ ದಾಖಲಾದ ಪ್ರಕರಣದಲ್ಲಿ ಆ.21 ರಂದು ಠಾಣೆಗೆ ಹಾಜರಾಗಲು ನೋಟಿಸ್ ನೀಡಿದ್ರೂ ಮಹೇಶ್ ಶೆಟ್ಟಿ ತಿಮರೋಡಿ ಹಾಜರಾಗದ ಹಿನ್ನಲೆಯಲ್ಲಿ ಆ.21 ರಂದು ಬೆಳಗ್ಗೆ ಉಜಿರೆ ತಿಮರೋಡಿ ಮನೆಯಲ್ಲಿ ಬ್ರಹ್ಮವಾರ ಪೊಲೀಸರು ಬಂಧನ ಮಾಡಲು ಬಂದಾಗ ಕರ್ತವ್ಯಕ್ಕೆ ಅಡ್ಡಿಪಡಿಸಿದ ಬಗ್ಗೆ ಆ.21 ರಂದು ಬೆಳ್ತಂಗಡಿ ಪೊಲೀಸ್‌ ಠಾಣೆಗೆ ಬ್ರಹ್ಮವಾರ ಪೊಲೀಸ್ ಠಾಣೆಯ ಸಬ್ ಇನ್ಸೆಕ್ಟ‌ರ್ ಅಶೋಕ್‌ ಮಲಬಾಗಿಲು ಅವರು ದೂರು ನೀಡಿದ್ದು ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣಣವರ್, ಜಯಂತ್.ಟಿ ಹಾಗೂ ಇತರ 10-15 ಮಂದಿ ಇಲಾಖಾ ಕರ್ತವ್ಯ ನಿರ್ವಹುಸದಂತೆ ಬಲಪ್ರಯೋಗ ಮಾಡಿ ಅಡ್ಡಿಪಡಿಸಿದ್ದಾರೆ, ಅಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿ ಮಾನಹಾನಿಕರವಾಗಿ ಸಂದೇಶಗಳನ್ನು ಪ್ರಸಾರ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ, ಅಲ್ಲದೆ ಮಹೇಶ್ ಶೆಟ್ಟಿಯನ್ನು ವಶಕ್ಕೆ ಪಡೆದ ಬಳಿಕ ಇಲಾಖಾ ವಾಹನದಲ್ಲಿ ಬರಲು ನಿರಾಕರಿಸಿದ್ದು ಖಾಸಗಿ ಕಾರಿನಲ್ಲಿ ಬಂದಿದ್ದು ಈ ವೇಳೆ ಸ್ಥಳದಲ್ಲಿ ನೆರೆದಿದ್ದ 10ರಿಂದ 15 ಮಂದಿ ಕಾರುಗಳನ್ನು ಹಿಂಬಾಲಿಸಿ ಬಂದು ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದಾರೆ ಎಂದು ದೂರು ನೀಡಿದ್ದು ಅದರಂತೆ ಆರೋಪಿಗಳ ವಿರುದ್ಧ ಕರ್ತವ್ಯಕ್ಕೆ ಅಡ್ಡಿ ಪಡಿಸಿರುವ ಬಗ್ಗೆ ಆ.22 ರಂದು ಬೆಳ್ತಂಗ ಪೊಲೀಸ್‌ ಠಾಣೆಯಲ್ಲಿ
132,189(2),351(2), 263a, 190, 262, ರಂತೆ ಪ್ರಕರಣ ದಾಖಲಾಗಿದೆ.

Related posts

ಓಡಿಲ್ನಾಳ : ವ್ಯಕ್ತಿ ನೇಣುಬಿಗಿದು ಆತ್ಮಹತ್ಯೆ

Suddi Udaya

ತುಳು ಕಲ್ಚರಲ್ ರಿಸರ್ಚ್ ಫೌಂಡೇಶನ್‌‌ ವತಿಯಿಂದ ಕರಂಬಾರು ಸ. ಹಿ. ಪ್ರಾ. ಶಾಲೆಯಲ್ಲಿ ‘ಶಾಲೆಡೊಂಜಿ ದಿನ’

Suddi Udaya

ಗುರುವಾಯನಕೆರೆ ಸ.ಪ್ರೌ. ಶಾಲೆಯ ಚಿತ್ರಕಲಾ ಶಿಕ್ಷಕ ವಿ.ಕೆ ವಿಟ್ಲ ರವರಿಗೆ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ

Suddi Udaya

Carotid body tumor ಎಂಬ ವಿಚಿತ್ರ ಖಾಯಿಲೆಯಿಂದ ಬಳಲುತ್ತಿರುವ ಮರೋಡಿಯ ಯುವಕ: ಶಸ್ತ್ರಚಿಕಿತ್ಸೆಗೆ ಬರೋಬ್ಬರಿ ರೂ. 8 ಲಕ್ಷದ ಅವಶ್ಯಕತೆ, ಬಡಕುಟುಂಬ ಸಹೃದಯ ದಾನಿಗಳ ಸಹಕಾರವನ್ನು ಎದುರು ನೋಡುತ್ತಿದೆ

Suddi Udaya

ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರ ಸಂಘದ ನಿರ್ದೇಶಕರಾಗಿ ಚಿದಾನಂದ ಪೂಜಾರಿ ಆಯ್ಕೆ

Suddi Udaya

ಕ್ಯಾಂಪ್ಕೋ ಸಂಸ್ಥೆಯ ‘ಸಾಂತ್ವನ’ ಯೋಜನೆಯಡಿಯಲ್ಲಿ ಆರ್ಥಿಕ ನೆರವು

Suddi Udaya
error: Content is protected !!