September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಹುಣ್ಸೆಕಟ್ಟೆಯಲ್ಲಿ ನಾಯಿಗಳ ದಾಳಿಯಿಂದ ಬಿದ್ದು ಗಾಯಗೊಂಡ ಜಿಂಕೆ

ಬೆಳ್ತಂಗಡಿ : ಇಲ್ಲಿಯ ಹುಣ್ಸೆಕಟ್ಟೆಯಲ್ಲಿ ಜಿಂಕೆಯೊಂದು ಗಾಯವಾಗಿ ಬಿದ್ದಿದ್ದು ಅರಣ್ಯ ಇಲಾಖಾ ಸಿಬ್ಬಂದಿಗಳು ಕ್ಲಪ್ತ ಸಮಯದಲ್ಲಿ ಧಾವಿಸಿ ಮುಂದಿನ ಚಿಕಿತ್ಸೆ ಗಾಗಿ ಕಳುಹಿಸಿ ಕೊಡಲಾಯಿತು.

ಅತೀ ಹೆಚ್ಚು ನಾಯಿಗಳ ಕಾಟದಿಂದ ಈ ಘಟನೆ ಸಂಭವಿಸಿದ್ದು, ನಾಯಿಗಳು ಕಾಡಿನಿಂದ ಅಟ್ಟಾಡಿಸಿ ನಾರಾಯಣ ಪೂಜಾರಿ ಯವರ ಮನೆಯ ಸಮೀಪವಿರುವ ಬಟ್ಟೆ ಒಗೆಯುವ ಕಲ್ಲಿಗೆ ತಾಗಿ ಗಾಯಗೊಂಡಿದೆ ಎನ್ನಲಾಗಿದೆ. ಘಟನೆಯ ಸ್ಥಳಕ್ಕೆ ಅರಣ್ಯ ಇಲಾಖೆಯ ಸಿಬ್ಬಂದಿಗಳು ಬಂದಿದ್ದು ಜಿಂಕೆಯನ್ನು ರವಾನಿಸಿದ್ದಾರೆ. ಹಲವು ದಿನಗಳಿಂದ ಈ ಭಾಗದಲ್ಲಿ ಬೀದಿ ನಾಯಿಗಳಿಂದ ಊರಿನವರಿಗೆ ಮತ್ತು ಕಾಡು ಪ್ರಾಣಿಗಳಿಗೂ ಸಮಸ್ಯೆ ಆಗುತ್ತಿದೆ.

15ಕ್ಕಿಂತ ಹೆಚ್ಚು ನಾಯಿಗಳು ಈ ಪ್ರದೇಶದಲ್ಲಿದ್ದು, ಶಾಲೆಗೆ ತೆರಳುವ ಮಕ್ಕಳನ್ನು ಅಟ್ಟಾಡಿಸಿಕೊಂಡು ಹೋಗುತ್ತಿದ್ದು, ಪಾದಾಚಾರಿಗಳು, ಮಕ್ಕಳು ಭಯದಿಂದ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ನಗರ ಪಂಚಾಯತ್ ಇದರ ಬಗ್ಗೆ ತಕ್ಷಣ ಕ್ರಮ ಕೈ ಗೊಳ್ಳುವಂತೆ ಸ್ಥಳೀಯರ ಆಗ್ರಹಿಸಿದ್ದಾರೆ.

Related posts

ಸೇವಾ ನಿವೃತ್ತಿಗೊಳ್ಳುತ್ತಿರುವ ಸಹಾಯಕ ಕೃಷಿ ನಿರ್ದೇಶಕ ವೀರಭದ್ರಪ್ಪರಿಗೆ ಬೀಳ್ಕೊಡುಗೆ ಸಮಾರಂಭ

Suddi Udaya

ಬೆಳ್ತಂಗಡಿ : ಇಬ್ಬರು ಆಂಬುಲೆನ್ಸ್ ಚಾಲಕರು ಎಸ್.ಐ.ಟಿ ವಿಚಾರಣೆಗೆ ಹಾಜರು

Suddi Udaya

ಬೆಳ್ತಂಗಡಿ ಲಯನ್ಸ್ ಕ್ಲಬ್ ಅಧ್ಯಕ್ಷ ದೇವದಾಸ್ ಶೆಟ್ಟಿ ಹಿಬರೋಡಿ ರವರಿಂದ ಕೃತಕ ಕಾಲಿನ ವ್ಯವಸ್ಥೆಗೆ ಸಹಾಯಹಸ್ತ

Suddi Udaya

ಶಿರ್ತಾಡಿ : ಕಾರು ಮತ್ತು ಆಕ್ಟಿವಾ ನಡುವೆ ಭೀಕರ ಅಪಘಾತ: ಆಕ್ಟಿವಾ ಸವಾರೆ, ಶಿಕ್ಷಕಿ ಮೃತ್ಯು

Suddi Udaya

ಬೆಳ್ತಂಗಡಿ: ಹೆದ್ದಾರಿಯ ಅಗಲೀಕರಣ ಪರಿಹಾರಧನ ಪಡೆದಮನೆ, ಕಟ್ಟಡಗಳ ತೆರಿಗೆ ರದ್ದು ಪಡಿಸಲು ಸೂಚನೆ

Suddi Udaya

ಉಜಿರೆ ರುಡ್ ಸೆಟ್ ಸಂಸ್ಥೆಯಲ್ಲಿ “ವನ್ ಮಿನಿಟ್ ಉಮಾ”ರಿಂದ ವಿಶೇಷ ಬ್ಯೂಟೀಶಿಯನ್ ಕಾರ್ಯಾಗಾರ

Suddi Udaya
error: Content is protected !!