July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ : ಸಾಧಕರಿಗೆ ಸನ್ಮಾನ

ಬೆಳ್ತಂಗಡಿ: ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರ ಸಂಘದ 2024-25ನೇ ಸಾಲಿನ 18ನೇ ವಾರ್ಷಿಕ ಮಹಾಸಭೆ ಸಂಘದ ಅಧ್ಯಕ್ಷ ಭಗೀರಥ ಜಿ.ಅವರ ಅಧ್ಯಕ್ಷತೆಯಲ್ಲಿ ಆ.23ರಂದು ಬೆಳ್ತಂಗಡಿ ಶ್ರೀ ಗುರುಸಾನಿಧ್ಯ ವಾಣಿಜ್ಯ ಸಂಕೀರ್ಣದ ಸಭಾಭವನದಲ್ಲಿ ನಡೆಯಿತು.

ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಭಗೀರಥ ಜಿ ಮಾತನಾಡಿ ನಮ್ಮ ಸಹಕಾರ ಸಂಘವು “ನಿಮ್ಮ ಸ್ಪೂರ್ತಿ ನಮ್ಮ ಉತ್ಕೃಷ್ಟ ಸೇವೆ” ಎನ್ನುವ ಧೈಯವಾಕ್ಯದೊಂದಿಗೆ ಸದಸ್ಯರ ಸಹಕಾರದಿಂದ ಸಹಕಾರ ಕ್ಷೇತ್ರದಲ್ಲಿ ಕಳೆದ 16 ವರ್ಷಗಳ ಅತ್ಯಲ್ಪ ಅವಧಿಯಲ್ಲಿ ಅದ್ವಿತೀಯ ಸಾಧನೆ ಮಾಡಿದೆ ಎಂದು ಆಶಯ ವ್ಯಕ್ತಪಡಿಸಿದರು.

1500 ಕೋಟಿ ರೂ.ವಾರ್ಷಿಕವಾಗಿ ವ್ಯವಹಾರ ನಡೆಸಿ, 225 ಕೋಟಿ ರೂ.ಮಿಕ್ಕಿ ಸಾಲ ಹಂಚಿಕೆ ಮಾಡಿ, 267 ಕೋಟಿ ರೂ.ಠೇವಣಿ , 480ಕೋಟಿ ರೂ.ಲಾಭಗಳಿಸಿರುವ ಸಂಸ್ಥೆ ಸದಸ್ಯರಿಗೆ 15% ಡಿವಿಡೆಂಡ್ ಘೋಷಣೆ ಮಾಡಲಾಯಿತು.

ಸನ್ಮಾನ:
ವೆನ್ಲಾಕ್ ಆಸ್ಪತ್ರೆಯ ಮೂತ್ರರೋಗ ತಜ್ಞ ಡಾ.ಸದಾನಂದ ಪೂಜಾರಿ ಹಾಗೂ ಲೋಕಾಯುಕ್ತ ಇನ್ಸ್ಪೆಕ್ಟರ್ ಪ್ರದೀಪ್ ಪೂಜಾರಿ ಕೆಯ್ಯರು ಅವರನ್ನು ಸನ್ಮಾನಿಸಲಾಯಿತು. ಚಿಕಿತ್ಸಾ ಮತ್ತು ವಿದ್ಯಾರ್ಥಿ ವೇತನ ವಿತರಿಸಲಾಯಿತು. ಅತ್ಯುತ್ತಮ ವ್ಯವಹಾರ ಗಳಿಸಿದ ಬೆಳ್ತಂಗಡಿ ಶಾಖೆ, ಅತೀ ಹೆಚ್ಚು ಠೇವಣಿ ಸಂಗ್ರಹಿಸಿದ ಪಡೀಲು ಶಾಖೆ, ಅತೀ ಹೆಚ್ಚು ಸಾಲ ನೀಡಿದ ಪುರಸರಕಟ್ಟೆ ಶಾಖೆ, ಶೇ.100ರಷ್ಟು ಸಾಲ ವಸೂಲಾತಿಯ ಕಬಕ ಶಾಖೆ, ಲೆಕ್ಕ ಪರಿಶೋಧನೆಯಲ್ಲಿ ಎ ಗ್ರೇಡ್ ಪಡೆದ ಹಳೆಯಂಗಡಿ ಶಾಖೆ, ನೂತನ ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿದ ಉಪ್ಪಿನಂಗಡಿ ಶಾಖೆ , ಅತೀ ಕಡಿಮೆ ಖರ್ಚು ಮಾಡಿ ಅಭಿವೃದ್ಧಿ ಗಳಿಸಿದ ಕಲ್ಲಡ್ಕ ಶಾಖೆ, ಕ್ಷಿಪ್ರ ಅಭಿವೃದ್ಧಿ ಕುಂಬ್ರ ಶಾಖೆ, ಅತೀ ಹೆಚ್ಚು ದೈಹಿಕ ಠೇವಣಿ ಸಂಗ್ರಹಿಸಿದ ಶಿರ್ತಾಡಿ ಶಾಖೆಯ ಶಶಿಧರ್ , ಮುಡಿಪು ಶಾಖೆಯ ನಾರಾಯಣ ಭಟ್, ಮತ್ತು ಸಿಬ್ಬಂದಿಗಳ ಪ್ರಾಮಾಣಿಕ ಸೇವೆಯನ್ನು ಗೌರವಿಸಲಾಯಿತು.

ಉಪಾಧ್ಯಕ್ಷ ಜಗದೀಶ್ ಚಂದ್ರ ಡಿ., ಸಂಘದ ನಿರ್ದೇಶಕರಾದ ತನುಜಾ ಶೇಖರ್, ಸುಜಿತ ವಿ ಬಂಗೇರ, ಚಂದ್ರಶೇಖರ್, ಸಂಜೀವ ಪೂಜಾರಿ, ಕೆ.ಪಿ ದಿವಾಕರ, ಧರಣೇಂದ್ರ ಕುಮಾರ್, ಜಯವಿಕ್ರಮ್ ಪಿ, ಆನಂದ ಪೂಜಾರಿ, ರಕ್ಷಿತ್ ಶಿವರಾಮ್, ಚಿದಾನಂದ ಪೂಜಾರಿ, ಸೂರಜ್ ಕುಮಾರ್, ವಿಶೇಷಾಧಿಕಾರಿ ಮೋನಪ್ಪ ಪೂಜಾರಿ, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಅಶ್ವಥ್ ಕುಮಾರ್ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

ನಿರ್ದೇಶಕರಾದ ಗಂಗಾಧರ ಮಿತ್ತಮಾರ್ ಸ್ವಾಗತಿಸಿ, ಡಾ.ರಾಜಾರಾಮ ಕೆ.ಬಿ, ವಂದಿಸಿ , ಕಡಬ ಶಾಖಾ ವ್ಯವಸ್ಥಾಪಕ ಪ್ರದೀಶ್ ಎನ್., ಬಜಗೋಳಿ ಶಾಖಾ ವ್ಯವಸ್ಥಾಪಕ ಪ್ರವೀಣ್ ಪೂಜಾರಿ ನಿರೂಪಿಸಿದರು.

Related posts

ವೇಣೂರು: ಸುದೆರ್ದು ನಿಲಯದ ಶ್ರೀಮತಿ ಗೀತಾ ನಿಧನ

Suddi Udaya

ಬೈಲಹೊಂಗಲ ಮಂಡಲದ ವತಿಯಿಂದ ಶಾಸಕ ಹರೀಶ್ ಪೂಂಜರಿಗೆ ಸನ್ಮಾನ

Suddi Udaya

ಧರ್ಮಸ್ಥಳ: ಬಸ್‌ ಕಿಟಕಿಯಿಂದ ಇಳಿಯಲು ಯತ್ನಿಸಿದ ವ್ಯಕ್ತಿ ಆಯತಪ್ಪಿ ರಸ್ತೆಗೆ ಬಿದ್ದು ಸಾವು

Suddi Udaya

ನಾರಾವಿ ಶ್ರೀ ಸೂರ್ಯನಾರಾಯಣ ದೇವಸ್ಥಾನ ಕುರಿತಾದ “ನಾ…ರವಿ” ಬ್ರಹ್ಮಾಂಡದೊಡೆಯಗೆ ಭಕ್ತಿ ಪ್ರಜ್ವಲನೆ ಕನ್ನಡ ಆಲ್ಬಂ ಸಾಂಗ್ ಬಿಡುಗಡೆ

Suddi Udaya

ನಾವರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಂಭ್ರಮ: ಉಗ್ರಾಹ ಮುಹೂರ್ತ, ವಿವಿಧ ಗ್ರಾಮಗಳಿಂದ ಆಗಮಿಸಿದ ತರಕಾರಿ, ಬೊಂಡ, ಅಕ್ಕಿ, ಅಡಿಕೆ, ತೆಂಗು ಸಮರ್ಪಣೆ,

Suddi Udaya

ಧರ್ಮಸ್ಥಳದ ಯುವತಿ ಪಂಜಾಬ್ ನಲ್ಲಿ ನಿಗೂಢ ಸಾವು ಪ್ರಕರಣಕ್ಕೆ ತಿರುವು: ಪ್ರೇಮ ಪ್ರಕರಣ ವೈಫಲ್ಯ ಶಂಕೆ: ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಪ್ರಕರಣ ದಾಖಲು

Suddi Udaya
error: Content is protected !!