25.7 C
ಪುತ್ತೂರು, ಬೆಳ್ತಂಗಡಿ
March 7, 2026
ಪ್ರಮುಖ ಸುದ್ದಿ

ಸುಲ್ಕೇರಿಮೊಗ್ರು: ಅಡಿಕೆ ತೋಟದಲ್ಲಿ ಜಾಷಧಿ ಸಿಂಪಡಿಸುತ್ತಿದ್ದ ವೇಳೆ ಆಕಸ್ಮಿಕವಾಗಿ ಜಾರಿ ಬಿದ್ದು ಮೃತ್ಯು

ಬೆಳ್ತಂಗಡಿ: ಅಡಿಕೆ ಮರವೇರಿ ಜಾಷಧ ಸಿಂಪಡಿಸುತ್ತಿದ್ದ ವ್ಯಕ್ತಿಯೋರ್ವ ಕಾಲು ಜಾರಿ ಬಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಆ.22ರಂದು ಸಲ್ಕೇರಿಮೊಗ್ರುನಲ್ಲಿ ಸಂಭವಿಸಿದೆ.

ಸುಲ್ಕೇರಿ ಮೊಗ್ರು ಗ್ರಾಮದ ಹಿತ್ತಿಲು ಮನೆ ಗಂಗಯ್ಯ ನಾಯ್ಕ(62ವ), ಮೃತ ಪಟ್ಟವರು.ಗಂಗಯ್ಯ ನಾಯ್ಕ ಎಂಬವರು ಆ. 22ರಂದು 12.45ಕ್ಕೆ ತಮ್ಮ ಅಡಿಕೆ ತೋಟದಲ್ಲಿ ಪುತ್ರ ಪ್ರದೀಪ್ ಜೊತೆ ಜಾಷಧಿ ಸಿಂಪಡಣೆಗೆ ತಯಾರಿ ನಡೆಸಿ, ಗಂಗಯ್ಯ ನಾಯ್ಕ ಅವರು ಅಡಿಕೆ ತೋಟದಲ್ಲಿ ಅಡಿಕೆ ಮರಕ್ಕೆ ಹತ್ತಿ ಮದ್ದು ಸಿಂಪಡಿಸುತ್ತಿರುವ ಸಮಯ ಆಕಸ್ಮಿಕವಾಗಿ ಕಾಲು ಜಾರಿ ಸುಮಾರು 30 ಅಡಿ ಎತ್ತರದಿಂದ ಕೆಳಗೆ ಕವುಚಿ ಬಿದ್ದರೆನ್ನಲಾಗಿದೆ. ಪ್ರಜ್ಞಾಹೀನರಾಗಿದ್ದವರನ್ನು ಪುತ್ರ ಪ್ರದೀಪ್ ಮತ್ತಿತರರು ಸೇರಿ ಎತ್ತಿ ಉಪಚರಿಸಿ, ಅಂಬುಲೆನ್ಸ್‌ ವಾಹನವೊಂದರಲ್ಲಿ ಉಜಿರೆಯ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರುಸಂಜೆ ಮೃತಪಟ್ಟದ್ದಾರೆ. ಈ ಬಗ್ಗೆ ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

ನಾರಾವಿ: ಮಂಜುನಗರದಲ್ಲಿ ಗೋವುವಿಗೆ ಅಪರಿಚಿತ ವಾಹನ ಡಿಕ್ಕಿ, ಗಾಯಗೊಂಡು ರಸ್ತೆ ಬದಿಯಲ್ಲಿ ನರಳಾಡುತ್ತಿರುವ ಗೋವು

Suddi Udaya

ಮಡಂತ್ಯಾರು ಸೇಕ್ರೆಡ್ ಹಾರ್ಟ್ ಪ.ಪೂ ಕಾಲೇಜಿನಲ್ಲಿ ತಾ| ಮಟ್ಟದ ಪುಟ್ ಬಾಲ್ ಪಂದ್ಯಾಟ

Suddi Udaya

ಗುರುವಾಯನಕೆರೆ: ಇನೋವಾ ಕಾರಿನಲ್ಲಿ ಹಿಂಸಾತ್ಮಕವಾಗಿ ಗೋವುಗಳ ಸಾಗಾಟ: ಊರವರು ಹಾಗೂ ಪೋಲಿಸರಿಂದ ತಡೆಹಿಡಿದು ಚಾಲಕನ ಸೆರೆ, ಇಬ್ಬರು ಆರೋಪಿಗಳು ಪರಾರಿ:

Suddi Udaya

ಧರ್ಮಸಂರಕ್ಷಣ ಯಾತ್ರೆಗೆ ಮುತ್ತಿಗೆ ಹಾಕಲು ಕಾಂಗ್ರೆಸ್ ಕಾರ್ಯಕರ್ತರು ಪ್ಲಾನ್” : : ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಈ ಸುದ್ದಿಗೂ ಕಾಂಗ್ರೆಸ್ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ ಬ್ಲಾಕ್ ಕಾಂಗ್ರೆಸ್ ಉಭಯ ಸಮಿತಿ ಅಧ್ಯಕ್ಷರುಗಳ ಸ್ಪಷ್ಟನೆ

Suddi Udaya

ಕಸ್ತೂರಿ ರಂಗನ್ ವರದಿ ವಿರುದ್ಧದ ಬೃಹತ್ ಪ್ರತಿಭಟನೆಯ ಪೂರ್ವಭಾವಿ ಸಭೆ

Suddi Udaya

ಕಲ್ಮಂಜ: ಮಾಣಿಂಜೆ ಅಣೆಕಟ್ಟುವಿನಲ್ಲಿ ಸಿಕ್ಕಿಹಾಕಿಕೊಂಡ ಮರದ ದಿಮ್ಮಿಗಳು : ತೆರವುಗೊಳಿಸುವಂತೆ ಸ್ಥಳೀಯರ ಒತ್ತಾಯ

Suddi Udaya
error: Content is protected !!