ಉರುವಾಲು: ಪೆರ್ಲ ಬೈಪಾಡಿ ಶಾಲೆಯಲ್ಲಿ ನಡೆದ ಪ್ರೌಢ ಶಾಲಾ ವಿಭಾಗದ ಬಾಲಕಿಯರ ವಲಯ ಮಟ್ಟದ ಥ್ರೋಬಾಲ್ ಪಂದ್ಯಾಟದಲ್ಲಿ ಶ್ರೀ ಭಾರತೀ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ಬಾಲಕಿಯರ ತಂಡ ಪ್ರಥಮ ಸ್ಥಾನ ಗಳಿಸಿ ತಾಲೂಕು ಮಟ್ಟಕ್ಕೆ ಆಯ್ಕೆಗೊಂಡಿರುತ್ತಾರೆ.
ತಂಡದಲ್ಲಿ ಭಾಗವಹಿಸಿದ ವಿದ್ಯಾರ್ಥಿನಿಯರಾದ ಸಹನಾ 10ನೇ ತರಗತಿ, ಕೃತಿ 10ನೇ ತರಗತಿ, ನಿಧಿ ಬಿ.10ನೇ ತರಗತಿ, ನೇಹಾ 10ನೇ ತರಗತಿ, ಫಾತಿಮಾ ಸಝನ 10ನೇ ತರಗತಿ, ಇಂಚರ 10ನೇ ತರಗತಿ, ಪವೀಕ್ಷ ರೈ 9ನೇ ತರಗತಿ, ಕನಿಷ್ಕ ಪೂಜಾರಿ 9ನೇ ತರಗತಿ, ಫಾತಿಮಾ ಅನ್ಸೀಫ 9ನೇ ತರಗತಿ, ದೀಕ್ಷಿತ 8ನೇ ತರಗತಿ, ಕಾವ್ಯಶ್ರೀ 8ನೇ ತರಗತಿ, ಸಾದ್ವಿ ಶೆಟ್ಟಿ 8ನೇ ತರಗತಿ.
ದೈಹಿಕ ಶಿಕ್ಷಣ ಶಿಕ್ಷಕಿ ಶ್ರೀಮತಿ ವಿಂಧ್ಯಾ ತರಬೇತಿ ನೀಡಿರುತ್ತಾರೆ.











