
ಬೆಳ್ತಂಗಡಿ: ಅಖಿಲ ಕರ್ನಾಟಕ ಸರ್ಕಾರಿ ಪರವಾನಿಗೆ ಭೂಮಾಪಕರ ಸಂಘ ಬೆಂಗಳೂರು ಇದರ ದಕ್ಷಿಣ ಕನ್ನಡ ಜಿಲ್ಲಾ ಪರವಾನಿಗೆ ಭೂಮಾಪಕರ ಸಂಘದ ನೂತನ ಅಧ್ಯಕ್ಷರು ಮತ್ತು ತಂಡದ ಪದಪ್ರದಾನ ಸಮಾರಂಭವು ಆ.23ರಂದು ಪುತ್ತೂರು ತೆಂಕಿಲ ದರ್ಶನ್ ಕಲಾ ಮಂದಿರದಲ್ಲಿ ನಡೆಯಿತು.

ದ.ಕ ಜಿಲ್ಲಾ ಜಿಲ್ಲಾಧಿಕಾರಿಗಳ ತಾಂತ್ರಿಕ ಸಹಾಯಕರು,ಪದನಿಮಿತ್ತ ಭೂ ದಾಖಲೆಗಳ ಉಪನಿರ್ದೇಶಕರಾದ ಪ್ರಸಾದಿನಿ ಕೆ ಮಾತನಾಡಿ ಸಂಘದ ಧ್ಯೇಯ ಉದ್ದೇಶವನ್ನು ಈಡೇರಿಸುವ ಜೊತೆಗೆ ಸಾಮಾಜಿಕವಾಗಿ ತೊಡಗಿಸಿಕೊಳ್ಳಬೇಕು ಎಂದರು.
ಅಖಿಲ ಕರ್ನಾಟಕ ಸರ್ಕಾರಿ ಪರವಾನಗಿ ಭೂ ಮಾಪಕರ ಸಂಘದ ರಾಜ್ಯಾಧ್ಯಕ್ಷ ತಿರುಮಲೇ ಗೌಡ್ರು ಮಾತನಾಡಿ ಸಂಘವು ಸದೃಢವಾದಗ ನಮ್ಮ ಬೇಡಿಕೆ ಈಡೇರಿಸಲು ಸಾಧ್ಯವಿದೆ ಎಂದರು.

ವೇದಿಕೆಯಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿ ಕೋದಂಡರಾಮು,ಮಂಗಳೂರು ತಾಲೂಕು ಭೂ ದಾಖಲೆಗಳ ಸಹಾಯಕ ನಿರ್ದೇಶಕ ರಾಜು ಕೆ,ಬಂಟ್ವಾಳ ಭೂ ದಾಖಲೆಗಳ ಅಧೀಕ್ಷಕರಾದ ಮಹೇಶ್ ಕುಮಾರ್,ಭೂ ದಾಖಲೆಗಳ ಸಹಾಯಕ ನಿರ್ದೇಶಕರಾದ ನಿಸಾರ್ ಅಹಮ್ಮದ್ ಉಪಸ್ಥಿತರಿದ್ದರು.
ಜಿಲ್ಲಾಧ್ಯಕ್ಷ ನಾಗ ವಿ ಹಾಗೂ ಭೂ ಮಾಪಕರ ಸಂಘದ ನೂತನ ಪದಾಧಿಕಾರಿಗಳು ಪ್ರಮಾಣ ವಚನ ಸ್ವೀಕರಿಸಿದರು.

ಕಾರ್ಯಕ್ರಮದಲ್ಲಿ ದ.ಕ ಜಿಲ್ಲಾ ಭೂ ಮಾಪಕರ ಸಂಘದ ಉಪಾಧ್ಯಕ್ಷ ಪ್ರಶಾಂತ್ ಕೆ. ಪೂಜಾರಿ ಕೊಡಂಗೆ ಅಳದಂಗಡಿ,ಕಾರ್ಯದರ್ಶಿ ಬಸವಲಿಂಗೇಗೌಡ ಹೆಚ್.ಜೆ.,ಖಜಾಂಜಿ ಮಣಿಪ್ರಸಾದ್, ಬೆಳ್ತಂಗಡಿ ತಾಲೂಕು ಅಧ್ಯಕ್ಷ ಗಣೇಶ್ ಬಿ.ಜೆ,ಕಾರ್ಯದರ್ಶಿ ದಿವಾಕರ್ ರೆಡ್ಡಿ,ಉಳ್ಳಾಳ ತಾಲೂಕು ಅಧ್ಯಕ್ಷ ಲೋಹಿತ್ ಎನ್,ಕಾರ್ಯದರ್ಶಿ ರಕ್ಷಿತ್ ಎಂ.ಕೆ,ಬಂಟ್ವಾಳ ತಾಲೂಕು ಅಧ್ಯಕ್ಷ ಲೋಕೇಶಪ್ಪ,ಕಾರ್ಯದರ್ಶಿ ಯಶವಂತ,ಮೂಲ್ಕಿ ಅಧ್ಯಕ್ಷ ಅಭಿಷೇಕ್ ಶೆಟ್ಟಿ, ಕಾರ್ಯದರ್ಶಿ ಮನೋಹರ್ ದೇವಾಡಿಗ,ಪುತ್ತೂರು ಅಧ್ಯಕ್ಷ ಪೂರ್ಣೇಶ್ ಡಿ.ಎಂ,ಕಾರ್ಯದರ್ಶಿ ಮಧು ಬಿ.ಎಂ,ಮಂಗಳೂರು ಅಧ್ಯಕ್ಷ ಪುಟ್ಟೆ ಗೌಡ, ಕಾರ್ಯದರ್ಶಿ ಮಾನಸ,ಕಡಬ ತಾಲೂಕು ಅಧ್ಯಕ್ಷ ಮಂಜುನಾಥ್ ಡಿ.ಬಿ, ಕಾರ್ಯದರ್ಶಿ ಪ್ರಭಾಕರ್,ಸುಳ್ಯ ವಿಕ್ರಾಂತ್ ಶಿರಾಜೆ ಅಧ್ಯಕ್ಷ, ತೇಜಸ್ ಕಾರ್ಯದರ್ಶಿ, ಮೂಡಬಿದಿರೆಯ ಅಧ್ಯಕ್ಷ ವಾಸುದೇವ್, ಕಾರ್ಯದರ್ಶಿ ಲೋಕೇಶ್ ಬಿ.ಎನ್, ಸಲಹೆಗಾರರಾದ ಮೋಹನ್ ಪುತ್ತೂರು, ಕೆ.ಶೋಧನ್ ಬೆಳ್ತಂಗಡಿ, ಶೋಭಾ ಪಿ ಬಂಟ್ವಾಳ, ರೂಪವತಿ ಕೆ. ಉಳ್ಳಾಲ ಉಪಸ್ಥಿತರಿದ್ದರು.
ಗೌರವ ಸಲಹೆಗಾರ ಮೋಹನ್ ಎ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಖ್ಯಾತ ನಿರೂಪಕಿ ಸೌಜನ್ಯ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು.











