ಬೆಳ್ತಂಗಡಿ: ಅಡಿಕೆ ಮರವೇರಿ ಜಾಷಧ ಸಿಂಪಡಿಸುತ್ತಿದ್ದ ವ್ಯಕ್ತಿಯೋರ್ವ ಕಾಲು ಜಾರಿ ಬಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಆ.22ರಂದು ಸಲ್ಕೇರಿಮೊಗ್ರುನಲ್ಲಿ ಸಂಭವಿಸಿದೆ.
ಸುಲ್ಕೇರಿ ಮೊಗ್ರು ಗ್ರಾಮದ ಹಿತ್ತಿಲು ಮನೆ ಗಂಗಯ್ಯ ನಾಯ್ಕ(62ವ), ಮೃತ ಪಟ್ಟವರು.ಗಂಗಯ್ಯ ನಾಯ್ಕ ಎಂಬವರು ಆ. 22ರಂದು 12.45ಕ್ಕೆ ತಮ್ಮ ಅಡಿಕೆ ತೋಟದಲ್ಲಿ ಪುತ್ರ ಪ್ರದೀಪ್ ಜೊತೆ ಜಾಷಧಿ ಸಿಂಪಡಣೆಗೆ ತಯಾರಿ ನಡೆಸಿ, ಗಂಗಯ್ಯ ನಾಯ್ಕ ಅವರು ಅಡಿಕೆ ತೋಟದಲ್ಲಿ ಅಡಿಕೆ ಮರಕ್ಕೆ ಹತ್ತಿ ಮದ್ದು ಸಿಂಪಡಿಸುತ್ತಿರುವ ಸಮಯ ಆಕಸ್ಮಿಕವಾಗಿ ಕಾಲು ಜಾರಿ ಸುಮಾರು 30 ಅಡಿ ಎತ್ತರದಿಂದ ಕೆಳಗೆ ಕವುಚಿ ಬಿದ್ದರೆನ್ನಲಾಗಿದೆ. ಪ್ರಜ್ಞಾಹೀನರಾಗಿದ್ದವರನ್ನು ಪುತ್ರ ಪ್ರದೀಪ್ ಮತ್ತಿತರರು ಸೇರಿ ಎತ್ತಿ ಉಪಚರಿಸಿ, ಅಂಬುಲೆನ್ಸ್ ವಾಹನವೊಂದರಲ್ಲಿ ಉಜಿರೆಯ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರುಸಂಜೆ ಮೃತಪಟ್ಟದ್ದಾರೆ. ಈ ಬಗ್ಗೆ ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.











