
ಬೆಳ್ತಂಗಡಿ: ರಾಜ್ಯ ಸರಕಾರಿ ಅಧಿಕಾರಿಗಳ ವಿವಿಧೋದ್ದೇಶ ಸಹಕಾರಿ ಸಂಘ (ನಿ) ಬೆಳ್ತಂಗಡಿ ಇದರ ಮಹಾಸಭೆ ಆ. 24 ರಂದು ಕರ್ನಾಟಕ ರಾಜ್ಯ ಸರಕಾರಿ ಅಧಿಕಾರಿಗಳ ವಿವಿಧೋದ್ದೇಶ ಸಹಕಾರಿ ಸಂಘ (ನಿ)ಬೆಳ್ತಂಗಡಿ ಇದರ ಮಹಾಸಭೆಯು ಸುವರ್ಣ ಆರ್ಕೇಡ್ ಬೆಳ್ತಂಗಡಿಯಲ್ಲಿ ನಡೆಯಿತು.
ಸಂಘದ ಅಧ್ಯಕರಾದ ಡಾ. ಕೆ. ಜಯಕೀರ್ತಿ ಜೈನ್ ಅಧ್ಯಕ್ಷತೆ ವಹಿಸಿದ್ದು ಮುಖ್ಯ ಕಾರ್ಯ (ನಿರ್ವಹಣಾಧಿಕಾರಿ ಶ್ರೀಮತಿ ವತ್ಸಲಾ ಜ್ಯೋತಿರಾಜ್ ಸಹಕಾರಿ ಸಂಘದ ಗತ ವರ್ಷದ ವರದಿಯನ್ನು ಸಭೆಗೆ ಮಂಡಿಸಿ 2025-26 ನೇ ಸಾಲಿನ ಬಜೆಟ್ ಮಂಡಿಸಿ ಅನುಮೋದಿ
ಸಲಾಯಿತು.

ಈ ಸಂದರ್ಭ ದಲ್ಲಿ ಕ್ಲಪ್ತ ಸಮಯದಲ್ಲಿ ದಂಡನೆ ಬಡ್ಡಿ ಇಲ್ಲದೆ ಸಾಲ ಮರುಪಾವತಿ ಮಾಡಿದ ಗ್ರಾಹಕರನ್ನು ಸ್ಮರಣಿಕೆ ನೀಡಿ ಅಭಿನಂದಿಸಲಾಯಿತು. ಸರಕಾರಿ ನೌಕರರ ಮಕ್ಕಳಿಗೆ ನೀಡುವ ಪ್ರೋತ್ಸಾಹಕ ಬಹುಮಾನ ವಾಗಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 584 (ಶೇಕಡಾ 90%) ಅಂಕ ಪಡೆದ ಶ್ರೀ ದುರ್ಗಾದಾಸ್ A.S.! ಬೆಳ್ತಂಗಡಿ ಇವರ ಸುಪುತ್ರಿ ಸಂಜನಾ ಎಂ.ಡಿ. ಇವರಿಗೆ ಸ್ಮರಣಿಕೆ ನೀಡಿ ಅಭಿನಂದಿಸಲಾಯಿತು.
ಇದೇ ಸಂದರ್ಭ ನಿರ್ದೇಶಕ
ರಾದ ಅಬ್ದುಲ್ ರಜಾಕ್ (ಆರೋಗ್ಯ ಇಲಾಖೆ) ಹಾಗೂ ಶ್ರೀಮತಿ ರತ್ನಾವತಿ(ಸಿ.ಡಿ.ಪಿ.ಓ) ಇಲಾಖೆ ಇವರನ್ನು ಗೌರವಿಸಲಾಯಿತು.
ಕಳೆದ ಆರ್ಥಿಕ ವರ್ಷದಲ್ಲಿ ಸಂಘವು ಗಳಿಸಿದ ಲಾಭಾಂಶದಲ್ಲಿ ಸದಸ್ಯರಿಗೆ ಶೇಕಡಾ 20 ರಷ್ಟು ಲಾಭಾಂಶವನ್ನು ಅಧ್ಯಕ್ಷರು ಘೋಷಿಸಿದರು.
ಸಂಘದಲ್ಲಿ ಸಾಲ ಮೊತ್ತ ವಸೂಲಿಗಾಗಿ ನಿರ್ಮಲ್ ಕುಮಾರ್ ನಾರಾವಿ ಎಂಬುವವರನ್ನು ನೇಮಿಸಿದ್ದು ಅವರು ಸಂಘದ ನಿಬಂಧನೆಗೆ ಸರಿಯಾಗಿ ಕರ್ತವ್ಯ ನಿರ್ವಹಿಸದೆ ಇದ್ದುದರಿಂದ ಅವರನ್ನು ಸದ್ರಿ ಹುದ್ದೆಯಿಂದ ಮುಕ್ತ ಗೊಳಿಸಿದ್ದು ಅವರು ಇದೀಗ ಸಂಘದ ಬಗ್ಗೆ ಅಪಪ್ರಚಾರ ಮಾಡುತ್ತಿದ್ದು ಈ ಬಗ್ಗೆ ಸಂಘದ ಗ್ರಾಹಕರು ಎಚ್ಚರಿಕೆಯಿಂದಿರಬೇಕೆಂದು ಅಧ್ಯಕ್ಷರು ವಿನಂತಿಸಿದರು.
ಸಂಘದ ಉಪಾಧ್ಯಕ್ಷರಾದ ಚಿದಾನಂದ ಹೂಗಾರ್, ನಿರ್ದೇಕರಾದ ಅಬ್ದುಲ್ ರಜಾಕ್, ಚಂದ್ರಶೇಖರ್, ಪರಮೇಶ್,ಶ್ರೀಮತಿ ರತ್ನಾವತಿ, ಶ್ರೀಮತಿ ಆರತಿ, ಪ್ರಶಾಂತ್,ಶಯ ಹರಿಪ್ರಸಾದ್
ಶ್ರೀಮತಿ ವಾರಿಜ, ಕೊಕ್ಕಡ ಶಾಖಾ ವ್ಯವಸ್ಥಾಪಕ ಅತಿಶಯ ಜೈನ್ ಉಪಸ್ಥಿತರಿದ್ದರು.
ಸಂಘದ ಸಲಹೆಗಾರರಾದ ವಸಂತ್ ಸುವರ್ಣ ಸ್ವಾಗತಿಸಿ ನಿರೂಪಿಸಿದರು.ಸಂಘದ ಸಿಬ್ಬಂದಿಗಳಾದ ವಿಶಾಲ, ಧಾಮಿನಿ ಸಹಕರಿಸಿದರು. ಪಿಗ್ಮಿ ಸಂಗ್ರಾಹಕರೆಲ್ಲರು ಉಪಸ್ಥಿತರಿದ್ದು ಸಹಕರಿಸಿದರು.
ಇದೇ ಸಂದರ್ಭದಲ್ಲಿ ಸದಸ್ಯರು ಹಾಗೂ ಸಾರ್ವಜನಿಕರ ಉಪಯೋಗಕ್ಕಾಗಿ ಉಚಿತ ಕಣ್ಣಿನ ತಪಾಸಣ ಶಿಬಿರ ಕಾರ್ಯಕ್ರಮ ಹಾಗೂ ಉಚಿತ ಕನ್ನಡಕ ವಿತರಣೆ ಕಾರ್ಯಕ್ರಮ ನಡೆಯಿತು. ಬೆಳ್ತಂಗಡಿ ತಾಲೂಕು ಆಸ್ಪತ್ರೆಯ ನೇತ್ರ ತಜ್ಞರಾದ ಡಾ. ರಮೇಶ್ ಹಾಗೂ ಅವರ ತಂಡ ಶಿಬಿರವನ್ನು ಯಶಸ್ವಿಯಾಗಿ ನಡೆಸಿದರು. ಈ ಶಿಬಿರದಲ್ಲಿ 100 ಕ್ಕು ಮಿಕ್ಕಿ ಶಿಬಿರಾರ್ಥಿಗಳು ಬಾಗವಹಿಸಿದರು.











