25.8 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿ

ಪೆರಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ ಸಂಘವು ವರದಿ ಸಾಲಿನಲ್ಲಿ ರೂ.359 ಕೋಟಿ ವ್ಯವಹಾರ ನಡೆಸಿ,ರೂ.1.00 ಕೋಟಿ ಲಾಭ ಗಳಿಸಿದೆ,ಸದಸ್ಯರಿಗೆ ಶೇ.20 ನೀಡಲಾಗುವುದು:ಸತೀಶ್ ಕಾಶಿಪಟ್ಣ

ಪೆರಾಡಿ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಪೆರಾಡಿ ಇದರ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷ ಸತೀಶ್ ಕೆ ಕಾಶಿಪಟ್ಣ ಇವರ ಅಧ್ಯಕ್ಷತೆಯಲ್ಲಿ ಸಂಘದ ವಠಾರದಲ್ಲಿ ಆ. 24 ರಂದು ನಡೆಯಿತು.ಸಂಘದ ಸದಸ್ಯರ ಸಹಕಾರ ಮತ್ತು ಸಕಾಲದಲ್ಲಿ ಸಾಲ ಮರುಪಾವತಿ ಮಾಡಿದ ಫಲವಾಗಿ 2024-25 ನೇ ಸಾಲಿನಲ್ಲಿ ಸಂಘವು ರೂ.359 ಕೋಟಿ ವಾರ್ಷಿಕ ವ್ಯವಹಾರ ನಡೆಸಿ,ರೂ1.00 ಕೋಟಿ ಲಾಭ ಗಳಿಸಿದೆ. ಸದಸ್ಯರಿಗೆ ಶೇ. 20 ಡಿವಿಡೆಂಟ್ ಘೋಷಣೆ ನೀಡಲಾಗುವುದು ಎಂದು ಸಂಘದ ಅಧ್ಯಕ್ಷ ಸತೀಶ್ ಕೆ.ಕಾಶಿಪಟ್ಣ ಹೇಳಿದರು.

ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ಶ್ರೀಪತಿ ಉಪಾಧ್ಯಾಯ, ನಿರ್ದೇಶಕರಾದ ಎನ್.ಆರ್ ಸೀತರಾಮ ರೈ,ಪ್ರವೀಣ್ ಗಿಲ್ಬರ್ಟ್ ಪಿಂಟೋ,ದೇವಕಿ ಡಿ ಶೆಟ್ಟಿ, ಸುಜಾತ,ಕೃಷ್ಣಪ್ಪ, ರಾಜೇಶ್ ಎನ್ ಶೆಟ್ಟಿ, ಸುರೇಶ್ ಅಂಚನ್,ಅಕ್ಷಯ ಕುಮಾರ್,ವಿಜಯ ನಾಯ್ಕ,ದ.ಕ ಜಿ.ಕೇಂದ್ರ ಬ್ಯಾಂಕ್ ಪ್ರತಿನಿಥಿ ಸುದರ್ಶನ್ ಕೋಟ್ಯಾನ್,ನಿವೃತ್ತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶೇಖ್ ಲತೀಫ್ ಉಪಸ್ಥಿತರಿದ್ದರು.

ಸಂಘದ ನಿರ್ದೇಶಕರಾಗಿದ್ದ ಹರಿಪ್ರಸಾದ್ ಹಾಗೂ ಪುತ್ತು ನಾಯ್ಕ ಮತ್ತು 32 ಸದಸ್ಯರು ನಿಧನರಾಗಿದ್ದು ಅವರಿಗೆ ಮೌನ ಪ್ರಾರ್ಥನೆ ಮೂಲಕ ಶ್ರದ್ಧಾಂಜಲಿ ಅರ್ಪಿಸಲಾಯಿತು.ರೈತ ಸದಸ್ಯರು ಸಂಘದ ಪ್ರಗತಿ ಹಾಗೂ ಸಹಕಾರದ ಬಗ್ಗೆ ಸೂಕ್ತ ಸಲಹೆ ಸೂಚನೆ ನೀಡಿದರು.

ಪೆರಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹೇಮಾ ಅವರು ಕಾರ್ಯಕ್ರಮ ನಿರೂಪಿಸಿದರು. ಉಪಾಧ್ಯಕ್ಷರಾದ ಶ್ರೀಪತಿ ಉಪಾಧ್ಯಾಯ ಸ್ವಾಗತಿಸಿದರು. ಸಿಬ್ಬಂದಿಗಳಾದ ಕವಿತಾ,ಅಕ್ಷತಾ ಪ್ರಾರ್ಥನೆಗೈದರು.

Related posts

ವಾಣಿ ಆಂ.ಮಾ. ಶಾಲೆಯಲ್ಲಿ ನೂತನ ಕಬ್ & ಬುಲ್ ಬುಲ್ ದಳಗಳ ಉದ್ಘಾಟನಾ ಸಮಾರಂಭ

Suddi Udaya

ನ್ಯಾಯತರ್ಪು : ಪಾಂಡಿಬೆಟ್ಟು ಎಂಬಲ್ಲಿ ಮೂವರಿಗೆ ಹೆಜ್ಜೇನು ಕಡಿತ

Suddi Udaya

ನಾವೂರು ಸರ್ವೋದಯ ಟ್ರಸ್ಟ್ ನೇತೃತ್ವದಲ್ಲಿ ಬೃಹತ್ ರಕ್ತದಾನ ಶಿಬಿರ

Suddi Udaya

ಧರ್ಮಸ್ಥಳ: ಉಚಿತ ಫೂಟ್ ಫಲ್ ಥೆರಪಿ ಶಿಬಿರ: ಮಾಹಿತಿ ಕಾರ್ಯಗಾರ

Suddi Udaya

ವಿದ್ಯಾರ್ಥಿಗೆ ಬೆತ್ತದಿಂದ ಥಳಿಸಿದ ಶಿಕ್ಷಕನ ವಿರುದ್ದ ದೂರು ದಾಖಲು

Suddi Udaya

ಸುಲ್ಕೇರಿ: ಶ್ರೀ ನೇಮಿನಾಥಸ್ವಾಮಿ ಸಭಾಭವನ ಉದ್ಘಾಟನೆ

Suddi Udaya
error: Content is protected !!