24.6 C
ಪುತ್ತೂರು, ಬೆಳ್ತಂಗಡಿ
March 6, 2026
ತಾಲೂಕು ಸುದ್ದಿವರದಿ

ಉಜಿರೆ 35 ನೇ ವರ್ಷದ ಮೊಸರು ಕುಡಿಕೆ ಉತ್ಸವ ; ಸರ್ವಧರ್ಮ ಸಮನ್ವಯ ಸಭೆ

ಬೆಳ್ತಂಗಡಿ; ಶ್ರೀ ಕೃಷ್ಣ ಜನ್ಮಾಷ್ಟಮಿ ಸಮಿತಿ ಉಜಿರೆ ಇದರ ವತಿಯಿಂದ 35 ನೇ ವರ್ಷದ ಮೊಸರು ಕುಡಿಕೆ ಉತ್ಸವ ಹಾಗೂ ಸರ್ವ ಧರ್ಮ ಸಮನ್ವಯ ಸಭೆ ಇತ್ತೀಚೆಗೆ ಉಜಿರೆ ಶ್ರೀ ಶಾರದಾ ಮಂಡಪದಲ್ಲಿ ಜರುಗಿತು.


ಉದ್ಘಾಟನೆಯನ್ನು ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಆನುವಂಶಿಕ ಆಡಳಿತ ಮೊಕ್ತೇಸರ ಶರತ್‌ಕೃಷ್ಣ ಪಡುವೆಟ್ನಾಯ ನೆರವೇರಿಸಿದರು.‌ಉಜಿರೆಯ ಹಿರಿಯ ಉದ್ಯಮಿ ಕೆ ಮೋಹನ ಶೆಟ್ಟಿಗಾರ್ ಶುಭಾಶಂಸನೆ ಗೈದರು. ಉಜಿರೆ ಗ್ರಾಮ ಪಂಚಾಯತ್ ಕಾರ್ಯದರ್ಶಿ ಶ್ರವಣ ಕುಮಾರ್ ಮುಖ್ಯ ಅತಿಥಿಗಳಾಗಿದ್ದರು. ಇಡೀದಿನ ವಿವಿಧ ವಿಭಾಗಗಳಲ್ಲಿ ಮಡಿಕೆ ಒಡೆಯುವುದು ಸೇರಿದಂತೆ ವಿವಿಧ ಆಟೋಟ ಸ್ಪರ್ಧೆಗಳು ಜರುಗಿದವು.


ಸಂಜೆ ಸಮಾರೋಪ ಸಮಾರಂಭ, ಬಹುಮಾನ ವಿತರಣೆ ಹಾಗೂ ಸರ್ವ ಧರ್ಮ ಸೌಹಾರ್ದ ಸಭಾ ಕಾರ್ಯಕ್ರಮ ಸಂಪನ್ನಗೊಂಡಿತು.
ಉಜಿರೆ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕೇರಿಮಾರ್ ಬಾಲಕೃಷ್ಣ ಗೌಡ, ಉಜಿರೆ ಅನುಗ್ರಹ ಪ.ಪೂ ಕಾಲೇಜು ಪ್ರಾಂಶುಪಾಲ ಫಾ. ವಿಜಯ್ ಲೋಬೋ, ಹಿರಿಯ ಪತ್ರಕರ್ತ ಅಶ್ರಫ್ ಆಲಿಕುಂಞಿ ಮುಂಡಾಜೆ ಇವರು ಸರ್ವಧರ್ಮ ಸೌಹಾರ್ದ ಸಂದೇಶ ನೀಡಿದರು. ಅಧ್ಯಕ್ಷತೆಯನ್ನು ಶ್ರೀ ಕೃಷ್ಣ ಜನ್ಮಾಷ್ಟಮಿ ಸಮಿತಿ ಅಧ್ಯಕ್ಷ ಸಂಘಟಕ ಶ್ರೀನಿವಾಸ ಗೌಡ ಪಟ್ರಮೆ ವಹಿಸಿದ್ದರು.


ಸಮಾರಂಭದಲ್ಲಿ ಉಪಾಧ್ಯಕ್ಷರಾದ ಅಶ್ವಥ್ ಗೌಡ ಇಚ್ಚಿಲ, ಅರುಣ ಬನೆಸಿರಿ ಉಜಿರೆ, ಪ್ರಧಾನ ಕಾರ್ಯದರ್ಶಿ ಗುರುರಾಜ್ ಅಂತರ, ಜೊತೆ ಕಾರ್ಯದರ್ಶಿ ಗಳಾದ ರಜತ್ ಗೌಡ ಮಲೆಬೆಟ್ಟು ಮತ್ತು ವಿಜಯ ಪೂಜಾರಿ ಶಿವಗಿರಿ, ಖಜಾಂಜಿ ಸತೀಶ ಗೌಡ ಎ ಕಕ್ಕರಬೆಟ್ಟು, ಗೌರವ ಸಲಹೆಗಾರರುಗಳಾದ ಯು.ಎ ಹೆಚ್ ಇಬ್ರಾಹಿಂ, ಶ್ರೀನಿವಾಸ ಗಾಂಧಿನಗರ, ಯು.ಎ ಹಮೀದ್, ಅಪ್ಪು ನಾಯರ್, ಪ್ರವೀಣ್ ಫರ್ನಾಂಡೀಸ್, ಶ್ರೀಧರ ಪೂಜಾರಿ, ಚಿನ್ನಪ್ಪ ನಾಯ್ಕ, ನಾಗರಾಜ ಹೆಚ್ ಎನ್, ಶಶಿಧರ ಬೆಡಿಗುತ್ತು, ಜಯರಾಮ ಗೌಡ, ಅನಿಲ್ ಡಿಸೋಜಾ, ಶಿವಪ್ರಸಾದ್, ಬಿ.ಎಮ್ ಇಲ್ಯಾಸ್ ಮಾಚಾರ್, ಮೋಹನ್ ಗೌಡ, ಸೇಸಪ್ಪ ಟಿ ನಿಡಿಗಲ್, ಸುಮಂಗಲ ಬೊಟ್ಟುದಗುಡ್ಡೆ, ಮಮತ ಗುರಿಪಳ್ಳ, ಆಶಾ ಸಂತೋಷ ಮೊದಲಾದವರು ಸಹಕರಿಸಿದರು.
ಉಜಿರೆ ಗ್ರಾ.ಪಂ ಮಾಜಿ ಅಧ್ಯಕ್ಷ ಬಾಲಕೃಷ್ಣ ಗೌಡ ಉಜಿರೆ ಕಾರ್ಯಕ್ರಮ ಸಂಯೋಜಿಸಿದರು. ನೂರರು ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿ ಕಾರ್ಯಕ್ರಮ ಸುಸಂಪನ್ನಗೊಂಡಿತು.

Related posts

ಜೂ.21: ಸೂಳಬೆಟ್ಟು ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡ ‘ಕ್ಷೀರಾಮೃತ’ ಉದ್ಘಾಟನೆ

Suddi Udaya

ಬಾಜಾರು – ಜೋಡುಕಟ್ಟೆ ರಸ್ತೆ ಕೆಸರುಮಯ ಓಡಾಟ ಶೋಚನೀಯ ! : ಹಲವು ವರ್ಷಗಳಿಂದ ದೊರೆಯದ ಕಾಯಕಲ್ಪ

Suddi Udaya

ಎಸ್‌ಎಸ್‌ಎಲ್‌ಸಿ ಫಲಿತಾಂಶ: ನಿಟ್ಟಡೆ ಕುಂಭಶ್ರೀ ಆಂಗ್ಲ ಮಾಧ್ಯಮ ಪ್ರೌಢ ಶಾಲೆಗೆ ಶೇ.100 ಫಲಿತಾಂಶ

Suddi Udaya

ಸೌಜನ್ಯ ಅತ್ಯಾಚಾರ ಪ್ರಕರಣ: ನೈಜ ಆರೋಪಿಗಳ ಪತ್ತೆಗಾಗಿ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳದ ಬಗ್ಗೆ ಅವಮಾನ ಮಾಡದಂತೆ ಪಜಿರಡ್ಕ ಸಂಗಮ ಕ್ಷೇತ್ರ ಶ್ರೀ ಸದಾಶಿವೇಶ್ವರ ದೇವಸ್ಥಾನದಲ್ಲಿ ವಿಶೇಷ ಪ್ರಾರ್ಥನೆ

Suddi Udaya

ಬೆಳ್ತಂಗಡಿ : ಯುವ ವಕೀಲರ ವೇದಿಕೆ ಇವರ ಸಂಯುಕ್ತ ಆಶ್ರಯದಲ್ಲಿ ಕಾನೂನು ಕಟ್ಟೆ ಕಾರ್ಯಕ್ರಮ

Suddi Udaya

ಮದ್ದಡ್ಕ ಪಲ್ಕೆ ಎಂಬಲ್ಲಿ ಮಾರಿ ಪೂಜೆ ಹಾಗೂ ಗುಳಿಗ ದೈವದ ಗಗ್ಗರ ಸೇವೆ

Suddi Udaya
error: Content is protected !!