24.8 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಕರ್ನಾಟಕ ಮುಸ್ಲಿಂ ಜಮಾಅತ್ ಉಜಿರೆ ಸರ್ಕಲ್ ವತಿಯಿಂದ “ಸ್ವಾತಂತ್ರ್ಯ ಸಂಗಮ” ಕಾರ್ಯಕ್ರಮ

ಬೆಳ್ತಂಗಡಿ; ಕರ್ನಾಟಕ ಮುಸ್ಲಿಂ ಜಮಾಅತ್ ಕೆಎಂಜೆ ಉಜಿರೆ ಸರ್ಕಲ್ ಸಮಿತಿ ವತಿಯಿಂದ ಎಸ್ಸೆಸ್ಸೆಫ್‌ ಉಜಿರೆ ಸೆಂಟರ್ ಹಾಗೂ ಎಸ್‌ವೈಎಸ್ ಉಜಿರೆ ಸರ್ಕಲ್ ಸಹಭಾಗಿತ್ವದಲ್ಲಿ ಉಜಿರೆ ಹಳೆಪೇಟೆ ಮದರಸ ಸಭಾಂಗಣದಲ್ಲಿ “ಸ್ವಾತಂತ್ರ್ಯ ಸಂಗಮ” ಕಾರ್ಯಕ್ರಮ ಆ.23 ರಂದು ಜರುಗಿತು.

ಅಧ್ಯಕ್ಷತೆಯನ್ನು ಕೆಎಂಜೆ ಉಜಿರೆ ಸರ್ಕಲ್ ಅಧ್ಯಕ್ಷ ಹಾಜಿ ಹೈದರ್ ಮದನಿ ವಹಿಸಿದ್ದರು.
ಉದ್ಘಾಟನೆಯನ್ನು ಕೆಎಮ್‌ಜೆ ಬೆಳ್ತಂಗಡಿ ಝೋನ್ ಸಮಿತಿ ಅಧ್ಯಕ್ಷ ಎಸ್ ಎಂ ತಂಙಳ್ ನೆರವೇರಿಸಿದರು.
ಪ್ರಸ್ತಾವನೆಯನ್ನು ಉಜಿರೆ ಮುಹ್ಯುದ್ದೀನ್ ಜುಮ್ಮಾ ಮಸ್ಜಿದ್ ಮುದರ್ರಿಸ್ ಯಾಸಿರ್ ಫಾಳಿಲಿ ಅಲ್ ಫುರ್ಕಾನಿ ನಡೆಸಿದರು. ಸ್ವಾತಂತ್ರ್ಯ ಸಂಗಮದ ಬಗ್ಗೆ ಹಿರಿಯ ಪತ್ರಕರ್ತ ಅಶ್ರಫ್ ಆಲಿಕುಂಞಿ ಮುಂಡಾಜೆ ಹಾಗೂ ಉಮರ್‌ಕುಂಞಿ ನಾಡ್ಜೆ ಉಪನ್ಯಾಸ ನೀಡಿದರು.

ಕೆಎಮ್‌ಜೆ ಉಜಿರೆ ಸರ್ಕಲ್ ಪ್ರಧಾನ ಕಾರ್ಯದರ್ಶಿ ಖಾಲಿದ್ ಮುಸ್ಲಿಯಾರ್ ಕುಂಟಿನಿ ಕಾರ್ಯಕ್ರಮ ಸಂಯೋಜಿಸಿದರ
ಈ ಸಂದರ್ಭದಲ್ಲಿ ಕೆಎಮ್‌ಜೆ ಉಪಾಧ್ಯಕ್ಷ ಮುಹ್ಯುದ್ದೀನ್ ಉಜಿರೆ, ಜಿಲ್ಲಾ ಸದಸ್ಯ ಇಬ್ರಾಹಿಂ ಕಕ್ಕಿಂಜೆ, ಕೋಶಾಧಿಕಾರಿ‌‌‌ ಹಂಝ ಮಾಚಾರ್, ದ‌ಅವಾ ಸೆಕ್ರೆಟರಿ ಹನೀಫ್ ಮುಸ್ಲಿಯಾರ್ ನಿಡಿಗಲ್, ಮೀಡಿಯಾ ಸೆಕ್ರೆಟರಿ ಅಬ್ದುರ್ರಝಾಕ್ ಫುರ್ಕಾನಿ ನಿಡಿಗಲ್, ಸಹಾಯ್ ಸೆಕ್ರೆಟರಿ ರಝಾಕ್ ಮಾಚಾರ್, ಪಬ್ಲಿಕ್ ರಿಲೇಶನ್ ಸೆಕ್ರೆಟರಿ ಹಮೀದ್ ಗಾಂಧಿನಗರ, ಆರ್ಗನೈಸೇಶನ್ ಸೆಕ್ರೆಟರಿ ಅಬೂಬಕ್ಕರ್ ಕಕ್ಕೇನ, ಉಪಾಧ್ಯಕ್ಷ ಹುಸೈನ್ ಮೊದಲಾದವರು ಉಪಸ್ಥಿತರಿದ್ದರು. ಸರ್ಕಲ್ ವ್ಯಾಪ್ತಿಯ ಸೆಂಟರ್ ಗಳ ಪದಾಧಿಕಾರಿಗಳು, ಸಮೂಹ ಸಂಘಟನೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು. ಮುಂದಿನ ಕಾರ್ಯಯೋಜನೆಗಳ ಸರ್ಕುಲರ್ ವಾಚಿಸಿ ನಿರ್ದೇಶನ ನೀಡಲಾಯಿತು.

Related posts

ಧರ್ಮಸ್ಥಳ ಅಶೋಕನಗರದಲ್ಲಿ 75 ನೇ ಗಣರಾಜ್ಯೋತ್ಸವ ಆಚರಣೆ

Suddi Udaya

ಬೆಳ್ತಂಗಡಿ ಬಸ್ಸು ನಿಲ್ದಾಣದಲ್ಲಿ ಎಲ್ಇಡಿ ಮೂಲಕ ಅಯೋಧ್ಯೆ ಶ್ರೀರಾಮ ಲಲ್ಲಾನ ಪ್ರಾಣ ಪ್ರತಿಷ್ಠೆ ಲೋಕಾರ್ಪಣಾ ಕಾರ್ಯಕ್ರಮ ವೀಕ್ಷಣೆ

Suddi Udaya

ತಲೆಮರೆಸಿಕೊಂಡಿದ್ದ ಜ್ಯೋತಿಷಿಯನ್ನು ಹಿಡಿದು ನ್ಯಾಯಾಲಯಕ್ಕೆ ಹಾಜರುಪಡಿಸಿದ ಧರ್ಮಸ್ಥಳ ಪೊಲೀಸರು

Suddi Udaya

ಶಿಶಿಲ ಗ್ರಾಮ ಪಂಚಾಯತ್ ನಲ್ಲಿ ವಿಕಸಿತ ಭಾರತ ಸಂಕಲ್ಪ ಯಾತ್ರೆ ಕಾರ್ಯಕ್ರಮ

Suddi Udaya

ಕಳಿಯ: ಪೇರಾಜೆ ನಿವಾಸಿ ನಾಗಮ್ಮ ನಿಧನ

Suddi Udaya

ರೈತರ ಕೃಷಿ ಪಂಪು ಸೆಟ್ ಸ್ಥಾವರಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ಶಾಸಕ ಹರೀಶ್ ಪೂಂಜರಿಗೆ ಮನವಿ

Suddi Udaya
error: Content is protected !!