September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಕಲ್ಮಂಜ ಗ್ರಾಮ ಪಂಚಾಯತ್ ನ ಗ್ರಾಮಸಭೆ

ಕಲ್ಮಂಜ: ಕಲ್ಮಂಜ ಗ್ರಾಮ ಪಂಚಾಯತ್ ನ 2025-26ನೇ ಸಾಲಿನ ಪ್ರಥಮ ಸುತ್ತಿನ ಗ್ರಾಮಸಭೆಯು ಗ್ರಾ.ಪಂ ಅಧ್ಯಕ್ಷೆ ವಿಮಲಾ ರವರ ಅಧ್ಯಕ್ಷತೆಯಲ್ಲಿ ಆ.25ರಂದು ಗ್ರಾಮ ಪಂಚಾಯತ್ ಸಭಾಭವನದಲ್ಲಿ ಜರುಗಿತು.

ಮಾರ್ಗದರ್ಶಕ ಅಧಿಕಾರಿಯಾಗಿ ಪಿ.ಎಂ. ಪೋಷನ್ ಅಭಿಯಾನ ಬೆಳ್ತಂಗಡಿ ಇದರ ಸಹಾಯಕ ನಿರ್ದೇಶಕ ರಾಜೇಂದ್ರ ಕೃಷ್ಣ ರವರು ಭಾಗವಹಿಸಿ ಗ್ರಾಮಸಭೆಯನ್ನು ಮುನ್ನಡೆಸಿದರು.

ಸಭೆಯಲ್ಲಿ ಇಲಾಖಾ ಅಧಿಕಾರಿಗಳಿಂದ ವಿವಿಧ ಇಲಾಖೆಯಿಂದ ಸಿಗುವ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿ ಹಾಗೂ ಅಭಿವೃದ್ಧಿ ಕಾರ್ಯಗಳ ಬಗ್ಗೆ ಚರ್ಚಿಸಲಾಯಿತು.

ಗ್ರಾಮ ಸಭೆಯಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು, ಗ್ರಾ.ಪಂ. ಉಪಾಧ್ಯಕ್ಷೆ ಪೂರ್ಣಿಮಾ, ಸದಸ್ಯರಾದ ರಾಧಾಕೃಷ್ಣ ಗೌಡ, ಲೀಲಾ, ಎಂ. ಶ್ರೀಧರ, ಸವಿತಾ, ಕೃಷ್ಣಮೂರ್ತಿ, ಪ್ರವೀಣ, ಶೋಭಾವತಿ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಸಿಬ್ಬಂದಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.

ಪಂ. ಅಭಿವೃದ್ಧಿ ಅಧಿಕಾರಿ ಗೀತಾ ಆರ್ ಸಾಲಿಯಾನ್ ಸ್ವಾಗತಿಸಿ, ವರದಿ ವಾಚಿಸಿದರು. ಕಾರ್ಯದರ್ಶಿ ಸರೋಜಿನಿ ನಿರೂಪಿಸಿದರು. ಪಂ. ಸಿಬ್ಬಂದಿ ರಮೇಶ್ ವಂದಿಸಿದರು.

Related posts

ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಜನ್ಮದಿನ ಆಚರಣೆ – ಸಿಯೋನ್ ಆಶ್ರಮಕ್ಕೆ ಆಹಾರ ಸಾಮಾಗ್ರಿ ವಿತರಣೆ

Suddi Udaya

ಬೆಳ್ತಂಗಡಿ ಸಂತ ತೆರೇಸಾ ಪ್ರೌಢಶಾಲೆಯಲ್ಲಿ ತ್ರಿವಳಿ ಸಂಭ್ರಮ

Suddi Udaya

ಸೇವಾಭಾರತಿಗೆ 21ರ ಸಂಭ್ರಮ: ಡಿ.4 ನೂತನ ಕಾರ್ಯಾಲಯ ಸೇವಾನಿಕೇತನ ಉದ್ಘಾಟನಾ ಸಮಾರಂಭ

Suddi Udaya

ಮುಗ್ಗ ಗುತ್ತಿನ ಮನೆತನದ ವಿದ್ಯಾರ್ಥಿಗಳಿಗೆ ಪುರಸ್ಕಾರ

Suddi Udaya

ವೇಣೂರು: ಪಡ್ಡ೦ದಡ್ಕ ನಿವಾಸಿ ಪಿ .ಎಸ್ .ಅಬ್ದುಲ್ ಜಲೀಲ್ ನಿಧನ

Suddi Udaya

ಅಖಿಲ ಭಾರತ ವೃತ್ತಿ ಪರೀಕ್ಷೆ : ಉಜಿರೆ ಶ್ರೀ ಧ.ಮಂ. ಮಹಿಳಾ ಕೈಗಾರಿಕಾ ತರಬೇತಿ ಸಂಸ್ಥೆಗೆ ಶೇ.98.4

Suddi Udaya
error: Content is protected !!