September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಆ.26-28: ರಾ.ಹಿಂ.ಜಾ.ವೇದಿಕೆ ಮತ್ತು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಆಶ್ರಯದಲ್ಲಿ 28ನೇ ವರ್ಷದ ಸಾಮೂಹಿಕ ಗೌರಿ ಪೂಜೆ ಮತ್ತು ಶ್ರೀ ಗಣೇಶೋತ್ಸವ

ಉಜಿರೆ: ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆ, ಬೆಳ್ತಂಗಡಿ ತಾಲೂಕು ಹಾಗೂ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಇದರ ಆಶ್ರಯದಲ್ಲಿ ಬ್ರಹ್ಮಶ್ರೀ ಶಿರೋಮಣಿ ಶ್ರೀ ಕೆ.ಎಸ್. ನಿತ್ಯಾನಂದ ಗುರುಗಳ ಮಾರ್ಗದರ್ಶನದಲ್ಲಿ ಮತ್ತು ಮಹೇಶ್ ಶೆಟ್ಟಿ ತಿಮರೋಡಿಯವರ ನೇತೃತ್ವದಲ್ಲಿ 28ನೇ ವರ್ಷದ ಸಾಮೂಹಿಕ ಗೌರಿ ಪೂಜೆ ಮತ್ತು
ಶ್ರೀ ಗಣೇಶೋತ್ಸವವು ಉಜಿರೆಯ ಕುಂಜರ್ಪದಲ್ಲಿ ಆ.26 ರಿಂದ 28ರವರೆಗೆ ಜರುಗಲಿದೆ.

ಆ.26ರಂದು ಬೆಳಿಗ್ಗೆ ಸಾಮೂಹಿಕ ಗೌರಿ ಪೂಜೆ ಪ್ರಾರಂಭಗೊಂಡು ಮಧ್ಯಾಹ್ನ ಮಹಾಪೂಜೆ ನೆರವೇರಿತು. ಸಂಜೆ ಸಾಮ ಪಾರಾಯಣ, ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಮಣಿ ಕೋಟೆಬಾಗಿಲು ನಿರ್ದೇಶನದ ಪಿಂಗಾರ ಕಲಾವಿದೆರ್ ಬೆದ್ರ ಅಭಿನಯಿಸುವ “ಕದಂಬ” ತುಳು ಹಾಸ್ಯಮಯ ನಾಟಕ ಜರುಗಲಿರುವುದು.

ಆ.27ರಂದು ಬೆಳಿಗ್ಗೆ ಗಣಪತಿ ಮೂರ್ತಿ ಪ್ರತಿಷ್ಠೆ, ಗಣಹೋಮ, ತಾಲೂಕಿನ ವಿವಿಧ ಭಜನಾ ಮಂಡಳಿಗಳಿಂದ ಭಜನಾ ಕಾರ್ಯಕ್ರಮ, ಮಧ್ಯಾಹ್ನ ಮಹಾಪೂಜೆ, ಸಾರ್ವಜನಿಕ ಅನ್ನಸಂತರ್ಪಣೆ, ಗಾನ ನೃತ್ಯ ಅಕಾಡೆಮಿ ತಂಡ ಮಂಗಳೂರು ಇವರಿಂದ ಗುರು ವಿಧ್ಯಾಶ್ರೀ ರಾಧಾಕೃಷ್ಣ ನಿರ್ದೇಶನದ ನೃತ್ಯ ಸಂಗಮ, ಸಂಜೆ ಭಜನಾ ಕಾರ್ಯಕ್ರಮ, ಮಹಾಪೂಜೆ, ಭಜನಾ ಕಾರ್ಯಕ್ರಮ, ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಭಾಸ್ಕರ್ ಕೋಟ್ಯಾನ್ ಸಸಿಹಿತ್ತು ಸಾರಥ್ಯದ ನರೇಶ್ ಕುಮಾ‌ರ್ ಸಸಿಹಿತ್ತು ನಿರ್ದೇಶನದ ತ್ರಿನೇತ್ರ ಕಲಾವಿದರು ಕುಡ್ಲ ಅರ್ಪಿಸುವ ಎಲ್.ಇ.ಡಿ ತಂತ್ರಜ್ಞಾನದ ಕ್ಷುದ್ರ ಶಕ್ತಿಯೊಂದರ ಭಯಾನಕ ಕತೆ ತುಳುರಂಗಭೂಮಿಯಲ್ಲಿ ವಿನೂತನ ಪ್ರಯೋಗದ ಅದ್ಧೂರಿ ತುಳು ನಾಟಕ ಬ್ರಹ್ಮರಕ್ಷಣೆ ಪ್ರದರ್ಶನ ಜರಗಲಿರುವುದು.

ಆ.28ರಂದು ಬೆಳಗ್ಗಿನ ಪೂಜೆ, 108 ತೆಂಗಿನಕಾಯಿ ಗಣಹೋಮ, ಧಾರ್ಮಿಕ ಸಭಾ ಕಾರ್ಯಕ್ರಮ, ಮಧ್ಯಾಹ್ನ ಮಹಾಪೂಜೆ, ಸಾರ್ವಜನಿಕ ಅನ್ನಸಂತರ್ಪಣೆ, ಝೀ ಕನ್ನಡ ಡಾನ್ಸ್ ಕರ್ನಾಟಕ ಡಾನ್ಸ್ ಖ್ಯಾತಿಯ ಜಿತೇಶ್ ಕುಮಾರ್ ನೇತೃತ್ವದ ಬೀಟ್ ರಾಕರ್ಸ್ ಡಾನ್ಸ್ ಅಕಾಡೆಮಿ ತಂಡದಿಂದ ನೃತ್ಯ ವೈಭವ, ಸಂಜೆ ಶ್ರೀ ಶಾರದ ಅಂಧರ ಗೀತ-ಗಾನ ಕಾಲ ಸಂಘ(ರಿ.) ಶೃಂಗೇರಿ ಇವರಿಂದ ರಸಮಂಜರಿ, ಸಂಜೆ ಮಹಾಪೂಜೆ, ವಿಘ್ನ ವಿನಾಶಕನ ವರ್ಣರಂಜಿತ ಶೋಭಾಯಾತ್ರೆ ಪ್ರಾರಂಭವಾಗುವುದು. ರಾತ್ರಿ ಉಜಿರೆಯ ಪೇಟೆಯಲ್ಲಿ ಕಲರ್ಸ್ ಕನ್ನಡ ಎದೆ ತುಂಬಿ ಹಾಡುವೆನು ಖ್ಯಾತಿಯ ಸಂದೇಶ್ ನೀರುಮಾರ್ಗ ಹಾಗೂ ಬಳಗದವರಿಂದ ಭಕ್ತಿ ಗಾನಾಮೃತ ಜರಗುವುದು. ಶೋಭಾಯಾತ್ರೆಯ ಸಮಯದಲ್ಲಿ ಭಜನಾ ತಂಡಗಳಿಂದ ಭಜನೆ, ಚೆಂಡೆ, ನಾಸಿಕ್ ಬ್ಯಾಂಡ್, ಟ್ಯಾಬ್ಲೊ, ಕೀಲುಕುದುರೆ, ಸುಡುಮದ್ದು ಪ್ರದರ್ಶನ ನಡೆಯಲಿದೆ.

Related posts

ಬೆಳ್ತಂಗಡಿ: ಕ್ಯಾಂಪ್ಕೊ ಸಂಸ್ಥೆಯ ‘ಸಾಂತ್ವನ’ ಯೋಜನೆಯಡಿಯಲ್ಲಿ ಸಹಾಯಧನ ವಿತರಣೆ

Suddi Udaya

ತೋಟತ್ತಾಡಿ ಶ್ರೀ ಗುರು ನಾರಾಯಣಸ್ವಾಮಿ ಸೇವಾ ಸಂಘ ಮಹಿಳಾ ಬಿಲ್ಲವ ವೇದಿಕೆಯ ನೂತನ ಸಮಿತಿ ರಚನೆ

Suddi Udaya

ಫೆ.28: ಕ್ಷೇತ್ರ ಶಿಕ್ಷಣಾಧಿಕಾರಿ ತಾರಕೇಸರಿ ಸೇವಾ ನಿವೃತ್ತಿ

Suddi Udaya

ಯುವವಾಹಿನಿ ಬೆಳ್ತಂಗಡಿ ಘಟಕದ ನೂತನ ಪದಾಧಿಕಾರಿಗಳ ಪದಪ್ರದಾನ ಸಮಾರಂಭ

Suddi Udaya

ಮದ್ಯದ ಅಂಗಡಿ ಹೆಚ್ಚಿಸಲು ಮುಂದಾದ ರಾಜ್ಯ ಸರ್ಕಾರದ ನಿರ್ಧಾರ ವಿರೋಧಿಸಿ ಎಸ್‌ಡಿಪಿಐ ವತಿಯಿಂದ ಬೆಳ್ತಂಗಡಿಯಲ್ಲಿ ಪ್ರತಿಭಟನೆ

Suddi Udaya

ಬಂದಾರು: ಸ.ಹಿ.ಪ್ರಾ. ಶಾಲಾ ಶಿಕ್ಷಕಿ ಕು. ದೇವಿಕಾ ರವರಿಗೆ ಬೀಳ್ಕೊಡುಗೆ ಸಮಾರಂಭ

Suddi Udaya
error: Content is protected !!