28.1 C
ಪುತ್ತೂರು, ಬೆಳ್ತಂಗಡಿ
September 10, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಕೊಕ್ಕಡ ಸಂತ ಜೋನ್ ಬ್ಯಾಪ್ಟಿಸ್ಟ್ ಚರ್ಚ್ ನಲ್ಲಿ ಯುವದಿನಾಚರಣೆ ಪ್ರಯುಕ್ತ ಸ್ವ ಉದ್ಯೋಗ ಮಾಹಿತಿ ತರಬೇತಿ

ಕೊಕ್ಕಡ: ಕೊಕ್ಕಡ ಸಂತ ಜೋನ್ ಬ್ಯಾಪ್ಟಿಸ್ಟ್ ಚರ್ಚಿನಲ್ಲಿ ಆ. 24 ರಂದು ಯುವದಿನ ಆಚರಿಸಲಾಯಿತು.

ಯುವಜನರಲ್ಲಿ ಸ್ವಾವಲಂಬನೆಯನ್ನು ಬೆಳೆಸಲು ಸ್ವ ಉದ್ಯೋಗ ಮಾಹಿತಿ ತರಬೇತಿ ನೀಡಲಾಯಿತು. ಚರ್ಚಿನ ಧರ್ಮಗುರುಗಳಾದ ವಂ. ಅನಿಲ್ ಪ್ರಕಾಶ್ ಡಿ ಸಿಲ್ವ ಕಾರ್ಯಕ್ರಮ ಉದ್ಘಾಟಿಸಿದರು.
ಉಜಿರೆ ರುಡಸೆಟ್ ಸಂಸ್ಥೆಯ ಪ್ರಾಧ್ಯಾಪಕ ಅಬ್ರಹಾಂ ಜೇಮ್ಸ್ ಪಿ.ವಿ. ಅವರು ಸ್ವಾವಲಂಬನೆಯ ಜೀವನ ಸಾಗಿಸಲು ಅಗತ್ಯ ಇರುವ ವಿವಿಧ ಸ್ವ ಉದ್ಯೋಗದ ತರಬೇತಿ ನೀಡಿದರು.

ರಿತೇಶ್ ಯಂ. ಸ್ಟ್ರೆಲ್ಲ ಪ್ರಾಸ್ತಾವಿಕ ಭಾಷಣ ಮಾಡಿದರು. ವಿಕ್ಟರ್ ಸುವಾರಿಸ್ ಸಂಪನ್ಮೂಲ ವ್ಯಕ್ತಿಯ ಪರಿಚಯ ಮಾಡಿದರು.
ವೇದಿಕೆಯಲ್ಲಿ ಚರ್ಚ್ ಪಾಲನಾ ಮಂಡಲಿಯ ಉಪಾಧ್ಯಕ್ಷ ಪ್ರವೀಣ್ ನೋಯೆಲ್ ಮೊಂತೆರೋ, ಕಾರ್ಯದರ್ಶಿ ವೀಣಾ ಮಸ್ಕರೇನ್ಹಸ್, ಸರ್ವ ಆಯೋಗಗಳ ಸಂಚಾಲಕಿ ಶ್ರೀಮತಿ ವಿನಿಫ್ರೆಡ್ ಡಿ ಸೋಜ ಉಪಸ್ಥಿತರಿದ್ದರು.

ಯುವದಿನದ ಪ್ರಯುಕ್ತ ಶಿಬಿರಾರ್ಥಿ ಯುವಕ, ಯುವತಿಯರನ್ನು ಸನ್ಮಾನಿಸಲಾಯಿತು. ಜೆಸಿಂತಾ ಡಿ ಸೋಜಾ ಸ್ವಾಗತಿಸಿ, ಪ್ರೀತಿ ಮರಿಯಾ ವಂದಿಸಿದರು.

ಪ್ರಜ್ವಲ್ ಲೋಬೊ ಕಾರ್ಯಕ್ರಮ ನಿರೂಪಿಸಿದರು. ಮೌರಿಸ್ ಡಿ ಸೋಜಾ, ವಿನ್ಸೆಂಟ್ ಮಿನೇಜಸ್, ವಿನ್ಸೆಂಟ್ ಸುವಾರಿಸ್, ದೀಪ ವಿ, ವಂ. ಅಶೋಕ ಡಿ ಸೋಜಾ ಸಹರಿಸಿದರು.

Related posts

ಕೊಲ್ಲಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಭೇಟಿ

Suddi Udaya

ಕಲ್ಮಂಜ : ಬೆರ್ಕೆಯಲ್ಲಿ ಒಂಟಿ ಸಲಗ ದಾಳಿ: ಅಪಾರ ಕೃಷಿ ಹಾನಿ

Suddi Udaya

ಶ್ರೀ ಕಾರಿಂಜೇಶ್ವರ ದೇವಸ್ಥಾನ ಕ್ಕೆ ಸಿಡಿಲು ಬಡಿದು ಹಾನಿ

Suddi Udaya

ಅರಸಿನಮಕ್ಕಿ ವಲಯದ ಶ್ರೀ ಕ್ಷೇ.ಧ. ಗ್ರಾ. ಯೋಜನೆಯ ಟೈಲರಿಂಗ್ ತರಬೇತಿಯ ಸಮಾರೋಪ ಸಮಾರಂಭ

Suddi Udaya

ಅಳದಂಗಡಿ: ನಿವೃತ್ತ ಶಿಕ್ಷಕ ಅಶೋಕ್ ರಾವ್ ನಿಧನ

Suddi Udaya

ಉಜಿರೆ ಟೌನ್ ಬದ್ರಿಯಾ ಜುಮ್ಮಾ ಮಸೀದಿಯಲ್ಲಿ ಬಕ್ರೀದ್ ಆಚರಣೆ

Suddi Udaya
error: Content is protected !!