ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಮುಂಡಾಜೆ ಸಹಕಾರ ಸಂಘದ ಚಾರ್ಮಾಡಿ ಪೂರ್ಣಾವಧಿ ಶಾಖೆಯ ಉದ್ಘಾಟನೆ ಸಮಾರಂಭ

ಮುಂಡಾಜೆ: ಮುಂಡಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಚಾರ್ಮಾಡಿ ಪೂರ್ಣಾವಧಿ ಶಾಖೆಯ ಉದ್ಘಾಟನೆ ಸಮಾರಂಭವು ಚಾರ್ಮಾಡಿ ಶಾಖಾ ಕಟ್ಟಡದ ಸಮೀಪದ ಪಂಚಶ್ರೀ ಸಭಾಭವನದಲ್ಲಿ ಆ.25 ರಂದು ನಡೆಯಿತು.

ಶಾಖೆಯ ಉದ್ಘಾಟನೆಯನ್ನು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ನೆರವೇರಿಸಿ ಶುಭ ಕೋರಿದರು.

ಅಧ್ಯಕ್ಷತೆಯನ್ನು ಮುಂಡಾಜೆ ಪ್ರಾ.ಕೃ.ಪ.ಸಹಕಾರಿ ಸಂಘದ ಅಧ್ಯಕ್ಷ ಕೆ.ಪ್ರಕಾಶ್ ನಾರಾಯಣ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಚಾರ್ಮಾಡಿ ಗ್ರಾ.ಪಂ ಅಧ್ಯಕ್ಷೆ ಶಾರದಾ, ಬೆಳ್ತಂಗಡಿ ಸಹಕಾರ ಅಭಿವೃದ್ಧಿ ಅಧಿಕಾರಿ ಪ್ರತಿಮಾ ಬಿ.ವಿ, ಚಾರ್ಮಾಡಿ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಕೇಶವ ಮೂಲ್ಯ,ಚಾರ್ಮಾಡಿ ಮತ್ತೂರು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಅಡಳಿತ ಮೊಕ್ತೇಸರಾದ ಪ್ರಕಾಶ್ ಹೊಸಮಠ, ಚಾರ್ಮಾಡಿಯ ಹಿರಿಯ ಸದಸ್ಯ ಅನಂತ ರಾವ್, ಕಾಂತಪ್ಪ ಗೌಡ ಅಡಿಮಾರು, ಮುಂಡಾಜೆ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರಾದ ಎಂ.ಶಶಿಧರ ಕಲ್ಮಂಜ, ರಾಘವ ಕಲ್ಮಂಜ, ಶಿವಪ್ರಸಾದ್ ಗೌಡ ದೇವಸ್ಯ, ರವಿ ಪೂಜಾರಿ, ಅಜಯ್ ಕೆ.ಎ, ಅಶ್ವಿನಿ ಎ.ಹೆಬ್ಬಾರ್, ಸುಮಾ ಎಂ ಗೋಖಲೆ, ಮೋಹಿನಿ, ನಾರಾಯಣ ಪಡ್ಕೆ , ಬಾಬು ಗೌಡ, ಬ್ಯಾಂಕಿನ ಮುಖ್ಯಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಪರಾಂಜಪೆ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಆನೆ ಹಾವಳಿಯಿಂದ ತೊದರೆಗೊಳಗಾದ ಕುಟುಂಬಗಳಿಗೆ ಪರಿಹಾರ ಮೊತ್ತ ಹಸ್ತಾಂತರಿಸಲಾಯಿತು.

ಸಂಘದ ನಿರ್ದೇಶಕ ವೆಂಕಟೇಶ್ವರ ಭಟ್ ಕಜೆ ಸ್ವಾಗತಿಸಿ, ನಿರ್ದೇಶಕ ಚೆನ್ನಕೇಶವ ನಾಯ್ಕ ಕಾರ್ಯಕ್ರಮ ನಿರೂಪಿಸಿದರು.ಉಪಾಧ್ಯಕ್ಷ ರಾಘವ ಗೌಡ ಕುಡುಮಡ್ಕ ವಂದಿಸಿದರು.

Related posts

ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ: ಅಪ್ರಾಪ್ತ ಬಾಲಕರ ಮೇಲೆ ಪ್ರಕರಣ ದಾಖಲು

Suddi Udaya

ಹಲವು ಸಮಯದ ಹಿಂದೆ ಮನೆ ತೊರೆದಿದ್ದ ಕಾಯರ್ತಡ್ಕ ಮಾಣಿಂಗೇರಿ ರಾಜು ಅವರ ಶವ ಪುದುವೆಟ್ಟು ಪದವು ಬಸ್ಸ್ಟ್ಯಾಂಡ್ ಬಳಿಯ ಕಾಡಿನಲ್ಲಿ ಪತ್ತೆ

Suddi Udaya

ಬಳಂಜ ಅಭಿಮಾನಿ ಬಳಗದಿಂದ ಮಾಜಿ ಶಾಸಕ ವಸಂತ ಬಂಗೇರರಿಗೆ ಸಾರ್ವಜನಿಕ ನುಡಿನಮನ

Suddi Udaya

ಹೊಸಂಗಡಿ: ಪೆರಿಂಜೆ ನಿವಾಸಿ ಸುಂದರ ನೇಣು ಬಿಗಿದು ಆತ್ಮಹತ್ಯೆ

Suddi Udaya

ಸುರತ್ಕಲ್ ಮುಕ್ಕದಲ್ಲಿ ಕಾರು ಡಿಕ್ಕಿ: ಧರ್ಮಸ್ಥಳ ಯಕ್ಷಗಾನ ಮೇಳದ ಸಿಬ್ಬಂದಿ ಜೀವನ್ ಕುಮಾರ್ ಸಾವು

Suddi Udaya

ಕುಕ್ಕೇಡಿ : ಪಡ್ಯೋಡಿ ಬೈಲು ನಿವಾಸಿ ಗೋಪಿ ನಿಧನ

Suddi Udaya
error: Content is protected !!