23.5 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿ

ಸರ್ಕಾರಿ ಪದವಿ ಪೂರ್ವ ಕಾಲೇಜು, ಕೊಯ್ಯೂ ರು:ಪೋಷಕರ ಸಭೆ

ಕೊಯ್ಯೂರು :ಮಕ್ಕಳ ಶೈಕ್ಷಣಿಕ ಅಭಿವೃದ್ಧಿಯಲ್ಲಿ ಪೋಷಕರ ಪಾತ್ರ ಮಹತ್ತರವಾದದ್ದು. ಇಂದಿನ ಡಿಜಿಟಲ್ ಯುಗದಲ್ಲಿ ಮಕ್ಕಳು ಸಾಮಾಜಿಕ ಜಾಲತಾಣ ಹಾಗೂ ದುಶ್ಚಟ ಗಳಿಂದ ಪ್ರಭಾವಿತರಾ ಗದಂತೆ ಪೋಷಕರು ಮತ್ತು ಶಿಕ್ಷಕರು ಗಮನ ಹರಿಸಬೇಕು ” ಎಂದು ಕೊಯ್ಯೂರು ಸರ್ಕಾರಿ ಪ್ರೌಢ ಶಾಲೆಯ ಸಹಶಿಕ್ಷಕರಾದ ಶ್ರೀ ರಾಮಚಂದ್ರ ದೊಡ್ಡಮನಿ ಅಭಿಪ್ರಾಯ ಪಟ್ಟರು. ಅವರು ಕೊಯ್ಯೂರು ಸರ್ಕಾರಿ ಪದವಿ ಪೂರ್ವ ಕಾಲೇಜ್ ನಲ್ಲಿವಿದ್ಯಾರ್ಥಿಗಳ ಪೋಷಕರನ್ನು ಉದ್ದೇಶಿಸಿ ಆ. 25ರಂದು ಮಾತನಾಡಿದರು.

ಸಭೆಯ ಅಧ್ಯಕ್ಷ ತೆಯನ್ನು ಸಂಸ್ಥೆಯ ಪ್ರಾಂಶುಪಾಲರಾದ ಶ್ರೀ ಮೋಹನ ಗೌಡ ವಹಿಸಿ ವೇದಿಕೆಯಲ್ಲಿ ಸಂಸ್ಥೆಯ ಎಲ್ಲಾ ಉಪನ್ಯಾಸಕರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳ ಪ್ರಗತಿ ಪತ್ರ ವಿತರಿಸಿ ಸಲಹೆ -ಸೂಚನೆ ಗಳನ್ನು ನೀಡಲಾಯಿತು. ವಿದ್ಯಾರ್ಥಿನಿಯರಾದ ವಿನಯ, ಐಶ್ವರ್ಯ, ಚಿರಸ್ವಿ, ಸಹಲಾ, ವಿದ್ಯಾ ಪ್ರಾರ್ಥನೆ ಗೈದರು. ಕನ್ನಡ ಉಪನ್ಯಾಸಕಿ ಶ್ರೀ ಮತಿ ರಶ್ಮಿದೇವಿ ಸ್ವಾಗತಿಸಿ, ವಾಣಿಜ್ಯ ಶಾಸ್ತ್ರ ಉಪನ್ಯಾಸಕಿ ಶ್ರೀಮತಿ ಭವ್ಯ ಎಂ. ವಂದಿಸಿದರು.ಇತಿಹಾಸ ಉಪನ್ಯಾಸಕ ಶ್ರೀ ಲಕ್ಷ್ಮಣ ಗೌಡ ಕಾರ್ಯಕ್ರಮ ನಿರ್ವಹಣೆ ಗೈದರು. ಉಪನ್ಯಾಸಕರು ಗಳಾದ ಶ್ರೀ ಸಂತೋಷ್ ಕುಮಾರ್, ಶ್ರೀ ಮಾಯಿಲ, ಶ್ರೀಮತಿ ಪವಿತ್ರ, ಶ್ರೀ ಮತಿ ತೃಪ್ತಿ ಕಾರ್ಯಕ್ರಮ ದ ಯಶಸ್ಸಿಗೆ ಸಹಕರಿಸಿ ದರು.

Related posts

ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆ: ವೇಣೂರು ಸರ್ಕಾರಿ ಪ.ಪೂ. ಕಾಲೇಜು (ಪ್ರೌಢಶಾಲಾ ವಿಭಾಗ) ವಿದ್ಯಾರ್ಥಿಗಳ ಅಮೋಘ ಸಾಧನೆ

Suddi Udaya

ನಾವೂರು ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಡಾ| ವೀಣಾ ಬನ್ನಂಜೆ ರವರಿಂದ ನಾಲ್ಕನೇ ದಿನದ ಶ್ರೀ ಕೃಷ್ಣ ಕಥಾಮೃತ ಪ್ರವಚನ ಮಾಲಿಕೆ

Suddi Udaya

ಮುಂಡಾಜೆ ಪ.ಪೂ. ಕಾಲೇಜಿನಲ್ಲಿ ವೃತ್ತಿ ಮಾರ್ಗದರ್ಶನ ಕಾರ್ಯಕ್ರಮ

Suddi Udaya

ನಕ್ಸಲ್ ನಾಯಕ ರೂಪೇಶ್ 3 ದಿನ ಬೆಳ್ತಂಗಡಿ ಪೊಲೀಸ್ ಕಸ್ಟಡಿಗೆ

Suddi Udaya

ಉಜಿರೆ- ಬೆಳಾಲು ರಸ್ತೆಯ ಕಿರಿಯಾಡಿ ಕ್ರಾಸ್ ಬಳಿ ಧರೆಗುರುಳಿದ 33 ಕೆವಿ ವಿದ್ಯುತ್ ಟವರ್ ದೊಂಡೋಲೆ ಪವರ್ ಪ್ರಾಜೆಕ್ಟ್ ನವರಿಗೆ ಸೇರಿದ ಕಾರು – ಬೈಕ್ ಜಖಂ: ಕಾರಿನೊಳಗೆ ಇದ್ದ ‌ಪವರ್ ಪ್ರಾಜೆಕ್ಟ್ ನ ಸಿಬ್ಬಂದಿ ಗಣೇಶ್ ಅಪಾಯದಿಂದ ಪಾರು

Suddi Udaya

ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ವಾರ್ಷಿಕ ಕ್ರೀಡಾಕೂಟ

Suddi Udaya
error: Content is protected !!