25.7 C
ಪುತ್ತೂರು, ಬೆಳ್ತಂಗಡಿ
March 7, 2026
ಅಪರಾಧ ಸುದ್ದಿ

ಜೈನ ಧರ್ಮಕ್ಕೆ ಮತ್ತು ಜೈನ ಧರ್ಮೀಯರ ಭಾವನೆಗಳಿಗೆ ಅವಮಾನ ದೂರು : ಗಿರೀಶ್ ಮಟ್ಟಣ್ಣನವರ್ ಹಾಗೂ ಕುಡ್ಲ ರಾಂಪೇಜ್ ಮಾಲೀಕರು ಮೇಲೆ ಪ್ರಕರಣ ದಾಖಲು

ಬೆಳ್ತಂಗಡಿ: ಜೈನ ಧರ್ಮಕ್ಕೆ ಮತ್ತು ಜೈನ ಧರ್ಮೀಯರ ಭಾವನೆಗಳಿಗೆ ಅವಮಾನ ಪಡಿಸಲಾಗಿದೆ ಎಂಬ ದೂರಿನಂತೆ ಗಿರೀಶ್ ಮಟ್ಟಣ್ಣನವರ್ ಹಾಗೂ ಕುಡ್ಲ ರಾಂಪೇಜ್ ಯೂಟ್ಯೂಬ್ ಚಾನೆಲ್ ಮೇಲೆ ಪ್ರಕರಣ ದಾಖಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಉಜಿರೆಯಲ್ಲಿ ಗಿರೀಶ ಮಟ್ಟಣ್ಣವರ್‌ ಇವರು ಜೈನ ಧರ್ಮಕ್ಕೆ ಮತ್ತು ಜೈನ ಧರ್ಮೀಯರ ಭಾವನೆಗಳಿಗೆ ಅವಮಾನಪಡಿಸುವ ಉದ್ದೇಶದಿಂದ ಕುಡ್ಲ ರಾಂಪೇಜ್ ಯೂಟ್ಯೂಬ್ ಚಾನೆಲ್ ಸಂದರ್ಶನದಲ್ಲಿ ಜೈನ ಧರ್ಮಕ್ಕೆ ಅಪಮಾನವಾಗುವ ರೀತಿಯಲ್ಲಿ ಸಂದರ್ಶನ ನೀಡಿದ್ದು, ಅಲ್ಲದೇ ಕುಡ್ಲ ರಾಂಪೇಜ್ ಚಾನೆಲ್ ಮಾಲೀಕರು ಇದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು, ಆಪಾಧಿತರಿಬ್ಬರೂ ಜೈನ ಧರ್ಮೀಯರ ಧಾರ್ಮೀಕ ಭಾವನೆಗಳಿಗೆ ಅಪಮಾನಪಡಿ
ಸಿದಾರೆಂದು ಅಜಿತ್ ನಾಗಪ್ಪ ಬಸಾಪುರ್ ಹುಬ್ಬಳ್ಳಿ ರವರು ನೀಡಿದ ದೂರಿನಂತೆ ಹುಬ್ಬಳ್ಳಿ ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ನೀಡಿದ ದೂರನ್ನು ಸರಹದ್ದಿನ ಆಧಾರದ ಮೇಲೆ ಬೆಳ್ತಂಗಡಿ ಪೊಲೀಸ್‌ ಠಾಣೆಗೆ ಕಳುಹಿಸಿಕೊಟ್ಟಿದ್ದನ್ನು ಮತ್ತು ಮಂಜುನಾಥ ಜಕ್ಕಣ್ಣವರ ಧಾರವಾಡ ರವರು ಧಾರವಾಡ ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ನೀಡಿದ ದೂರಿನ ಘಟನೆಯು ಒಂದೇ ಆಗಿರುತ್ತದೆ, ಈ ಬಗ್ಗೆ ದೂರುದಾರರು ನೀಡಿದ ಹೇಳಿಕೆಯನ್ನು ದಾಖಾಲಿಸಿಕೊಂಡು ಆ 12 ರಂದು ಬೆಳ್ತಂಗಡಿ ಠಾಣಾ ಅಕ್ರ: 86/2025 ಕಲಂ.196(1) (ಎ) 299 ಬಿ.ಎನ್.ಎಸ್. 2023 ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

Related posts

ಪುಂಜಾಲಕಟ್ಟೆ: ಅಕ್ರಮ ಗೋಸಾಗಾಟ ಪ್ರಕರಣ ದಾಖಲು:ಜಾನುವಾರು ನೀಡಿದ ಮಾಲೀಕನ ಮನೆ ಮತ್ತು ಕೊಟ್ಟಿಗೆ ಒಪ್ತಿ

Suddi Udaya

ಕಡಿರುದ್ಯಾವರ: ಅಕ್ರಮ ಮರಳು ಸಂಗ್ರಹ ಪತ್ತೆ: ಪ್ರಕರಣ ದಾಖಲು

Suddi Udaya

ಕುಡಿದ ಮತ್ತಿನಲ್ಲಿ ವಾಹನ ಚಲಾವಣೆ: ಬೆಳ್ತಂಗಡಿಯಲ್ಲಿ ಸರಣಿ ಅಪಘಾತ

Suddi Udaya

ಯೂಟ್ಯೂಬರ್ಸ್ ಹಾಗೂ ಖಾಸಗಿ ಚಾನೆಲ್ ವರದಿಗಾರನ ಮೇಲೆ ಹಲ್ಲೆ ಆರೋಪ: ಸ್ಥಳದಲ್ಲಿ ಜನ ಜಮಾಯಿಸಿ ಉದ್ವಿಗ್ನ ಸ್ಥಿತಿ- ಪೊಲೀಸರಿಂದ ಲಾಠಿ ಚಾರ್ಜ್. ಸ್ಥಳದಲ್ಲಿ ಪರಿಸ್ಥಿತಿ ಪ್ರಸ್ತುತ ಶಾಂತವಾಗಿದ್ದು, ಪ್ರಕರಣ ದಾಖಲಿಸಲಾಗುತ್ತಿದೆ: ಎಸ್.ಪಿ

Suddi Udaya

ನಿಷೇಧಿತ ಅರಣ್ಯದಲ್ಲಿ ಟ್ರಕ್ಕಿಂಗ್: 103 ಪ್ರವಾಸಿಗರು ಪೊಲೀಸರ ವಶಕ್ಕೆ

Suddi Udaya

ಬಾರ್ಯ: ಬನ್ನೆoಗಳ ಸೇತುವೆ ಮೇಲೆ ಪ್ರಾಣಿ ತ್ಯಾಜ್ಯ ಎಸೆದು ವಿಕೃತಿ ಮೆರೆದ ಕಿಡಿಗೇಡಿಗಳು

Suddi Udaya
error: Content is protected !!