September 6, 2026
ಅಪರಾಧ ಸುದ್ದಿ

ರೆಖ್ಯ: ಆಕಸ್ಮಿಕವಾಗಿ ರಸ್ತೆ ಕಾಂಕ್ರಿಟ್ ಚರಂಡಿಯ ಒಳಗೆ ಬಿದ್ದು ಚಾಲಕ ಮೃತ್ಯು

ಬೆಳ್ತಂಗಡಿ: ರೆಖ್ಯಾ ಗ್ರಾಮ ನೇಲ್ಯಡ್ಕ ಎಂಬಲ್ಲಿಯ ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿ ಲಾರಿಯನ್ನು ನಿಲ್ಲಿಸಿ ಮೂತ್ರ ವಿಸರ್ಜನೆಗೆಂದು ರಸ್ತೆ ಬದಿಗೆ ಹೋಗುವ ಸಮಯ ಆಕಸ್ಮಿಕವಾಗಿ ರಸ್ತೆ ಕಾಮಗಾರಿಯಲ್ಲಿರುವ ಕಾಂಕ್ರಿಟ್ ಚರಂಡಿಯ ಒಳಗೆ ಬಿದ್ದು ಚಾಲಕ ಸಾವನ್ನಪ್ಪಿದ ದುರ್ಘಟನೆ ಆ.28ರಂದು ವರದಿಯಾಗಿದೆ.


ಈ ಬಗ್ಗೆ ಬೆಂಗಳೂರು ನೆಲಮಂಗಲ ನಿವಾಸಿ ರಾಜಶೇಖರ ಎಂಬವರು ದೂರು ನೀಡಿ, ನನ್ನ ತಂದೆ ಹುನಮಂತರಾಯಪ್ಪ (60ವ) ರವರು ಲಾರಿಯಲ್ಲಿ ಚಾಲಕರಾಗಿದ್ದು, ಆ.27ರಂದು ರಾತ್ರಿ ಸಮಯ ಮಂಗಳೂರಿನಿಂದ ಬೆಂಗಳೂರು ಕಡೆಗೆ ಲಾರಿಯನ್ನು ಚಲಾಯಿಸಿಕೊಂಡು ಬಂದು, ಆ.28 ರಂದು ಮುಂಜಾನೆ 1 ಗಂಟೆ ಸುಮಾರಿಗೆ ಬೆಳ್ತಂಗಡಿ ತಾಲೂಕು ರೆಖ್ಯಾ ಗ್ರಾಮ ನೇಲ್ಯಡ್ಕ ಎಂಬಲ್ಲಿಯ ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿ ಲಾರಿಯನ್ನು ನಿಲ್ಲಿಸಿ ಮೂತ್ರ ವಿಸರ್ಜನೆ ಅಥವಾ ಇನ್ಯಾವುದೋ ಕಾರಣಕ್ಕೆ ಲಾರಿಯಿಂದ ಇಳಿದು ರಸ್ತೆ ಬದಿಗೆ ಹೋಗುವ ಸಮಯ ಆಕಸ್ಮಿಕವಾಗಿ ರಸ್ತೆ ಕಾಮಗಾರಿಯಲ್ಲಿರುವ ಕಾಂಕ್ರೀಟ್ ಚರಂಡಿಯ ಒಳಗೆ ಬಿದ್ದು ಅಸ್ವಸ್ಥರಾದವರನ್ನು ಚಿಕಿತ್ಸೆಯ ಬಗ್ಗೆ ಆಸ್ಪತ್ರೆಗೆ ಸಾಗಿಸುವ ಸಮಯ ದಾರಿ ಮಧ್ಯೆ ಮೃತಪಟ್ಟಿದ್ದಾರೆ ಎಂದು ನೀಡಿದ ದೂರಿನಂತೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಸಂಖ್ಯೆ: 43/2025 ಕಲಂ: 194 ಭಾ.ನಾ.ಸು.ಸಂ ರಂತೆ ಪ್ರಕರಣ ದಾಖಲಿಸಲಾಗಿದೆ.

Related posts

ಪೆಟ್ರೋಲ್ ಸುರಿದು ಆತ್ಮಹತ್ಯೆಗೆ ಯತ್ನಿಸಿದ್ದ ವ್ಯಕ್ತಿ ಸಾವು

Suddi Udaya

ಗ್ಯಾಸ್ ಸಿಲಿಂಡ‌ರ್ ನೀಡಲು ನಿರಾಕರಣೆ ಮಾಡಿದ ವಿತರಕನ ಮೇಲೆ ಹಲ್ಲೆ: ಪ್ರಕರಣ ದಾಖಲು

Suddi Udaya

ಚಿನ್ನ ಪಾಲಿಶ್ ಮಾಡುವ ನೆಪದಲ್ಲಿ ವಂಚನೆ ಪ್ರಕರಣ: ಬಿಹಾರದ ಆರೋಪಿಯನ್ನು ಹೆಡೆಮುರಿ ಕಟ್ಟಿದ ವೇಣೂರು ಪೊಲೀಸರು

Suddi Udaya

ಪೆರ್ನೆಯ ಯುವಕ ಯತೀಶ್ ಗೌಡ ಕೊಲೆ ಪ್ರಕರಣ: ಮೂವರು ಆರೋಪಿಗಳಿಗೆ ನ್ಯಾಯಾಂಗ ಬಂಧನ

Suddi Udaya

ಧರ್ಮಸ್ಥಳ: ಯೂಟ್ಯೂಬರ್ಸ್‌ ಮೇಲೆ ಹಲ್ಲೆ ಪ್ರಕರಣ ಧರ್ಮಸ್ಥಳ ಪೊಲೀಸರಿಂದ ಓರ್ವನ ಬಂಧನ

Suddi Udaya

ಪಿಲ್ಯ: ಕೋಳಿ ಅಂಕಕ್ಕೆ ವೇಣೂರು ಪೊಲೀಸರ ದಾಳಿ : ಆರೋಪಿಗಳ ಸಹಿತ ನಗದು ಹಾಗೂ ಇತರ ಸೊತ್ತುಗಳ ವಶ

Suddi Udaya
error: Content is protected !!