ವೇಣೂರು: ನವೀಕೃತ ಶ್ರೀ ಬಾಹುಬಲಿ ಸಭಾಭವನದ ಉದ್ಘಾಟನೆ 2000ನೇ ಇಸವಿಯಲ್ಲಿ ಭಗವಾನ್ ಶ್ರೀ ಬಾಹುಬಲಿ ಸ್ವಾಮಿ ಮಹಾಮಸ್ತಕಾಭಿಷೇಕದ ಸಂದಭ೯ದಲ್ಲಿ ಶ್ರೀ ಬಾಹುಬಲಿ ಸಭಾಭವನವನ್ನು ನಿಮಾ೯ಣ ಮಾಡಿ ಲೋಕಾಪ೯ಣೆ ಮಾಡಲಾಗಿತ್ತು. ಈಗ ಈ ಸಭಾಭವನದ ವ್ಯವಸ್ಥೆಯನ್ನು ಇನ್ನಷ್ಟು ಉನ್ನತೀಕರಿಸಿ ಆಧುನಿಕವಾಗಿ ನವೀಕರಿಸಲಾಗಿದೆ.
ಶ್ರೀ ಬಾಹುಬಲಿ ಸಭಾಭವನದ ಉದ್ಘಾಟನೆಯನ್ನು ಮೂಡುಬಿದ್ರಿ ಶ್ರೀ ಜೈನ ಮಠದ ಪರಮ ಪೂಜ್ಯ ,”ಭಾರತಭೂಷಣ” ಡಾ|ಸ್ವಸ್ತಿಶ್ರೀ ಚಾರುಕೀತಿ೯ ಪಂಡಿತಾಚಾಯ೯ವಯ೯ ಮಹಾಸ್ವಾಮೀಜಿಯವರ ಪಾವನ ಸಾನ್ನಿಧ್ಯದಲ್ಲಿ, ಶ್ರೀ ದಿಗಂಬರ ಜೈನ ತೀಥ೯ಕ್ಷೇತ್ರ ಸಮಿತಿಯ ಉಪಾಧ್ಯಕ್ಷ ಅಳದಂಗಡಿ ಅರಮನೆ ತಿಮ್ಮಣ್ಣರಸರಾದ ಡಾ|ಪದ್ಮಪ್ರಸಾದ್ ಅಜಿಲರ ಉಪಸ್ಥಿತಿಯಲ್ಲಿ, ಕನಾ೯ಟಕ ಸರಕಾರದ ಮಾಜಿ ಸಚಿವ ಕೆ.ಅಭಯಚಂದ್ರ ಜೈನ್ ದೀಪ ಪ್ರಜ್ವಲನೆ ಮಾಡಿ ಉದ್ಘಾಟಿಸಿದರು.
ಈ ಸಂದಭ೯ದಲ್ಲಿ ಬೆಳ್ಳಿಬೀಡು ಬಸದಿಯ ಅನುವಂಶಿಕ ಆಡಳಿತ ಮೊಕ್ತೇಸರರಾದ ಕೆ ಹೇಮರಾಜ್ ಬೆಳ್ಳಿಬೀಡು , ಶ್ರೀ ದಿಗಂಬರ ಜೈನ ತೀಥ೯ಕ್ಷೇತ್ರ ಸಮಿತಿಯ ಕಾಯ೯ದಶಿ೯ ವಿ.ಪ್ರವೀಣ್ ಕುಮಾರ್ ಇಂದ್ರ, ಕೋಶಾಧಿಕಾರಿ ಪಿ.ಜಯರಾಜ್ ಕಂಬ್ಳಿ , ಜತೆ ಕಾಯ೯ದಶಿ೯ ಮಹಾವೀರ್ ಜೈನ್ ಮೂಡುಕೋಡಿ, ಕಾಯ೯ಕಾರಿ ಸಮಿತಿಯ ಸದಸ್ಯರುಗಳಾದ ಬಿ.ರತ್ನವಮ೯ ಇಂದ್ರ, ಪ್ರವೀಣ್ ಅಜ್ರಿ, ಸುರೇಶ್ ಕುಮಾರ್ ಆರಿಗ, ಭರತ್ ಕುಮಾರ್ ಆರಿಗ , ಶಮಿ೯ತ್ ಕುಮಾರ್ ಹಾಗೂ ಹಿರಿಯ ಶ್ರಾವಕಿಯಾದ ಗುಣವತಿ ಎ. ಆಳ್ವ ಮತ್ತು ರಾಜ್ಯ ಜೈನ ಮಹಿಳಾ ಒಕ್ಕೂಟದ ನಿದೇ೯ಶಕಿಯಾದ ಸರೋಜಾ ಜಿ.ಜೈನ್ ,ಪುರೋಹಿತ ಸಚಿನ್ ಇಂದ್ರ ಮತ್ತಿತರರು ಉಪಸ್ಥಿತರಿದ್ದರು.











