37.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಮದ್ದಡ್ಕದಲ್ಲಿ 14ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ

ಕುವೆಟ್ಟು: ಸಾರ್ವಜನಿಕ ಶ್ರೀ ಗಣೇಶೋತ್ಸವ ಸೇವಾ ಸಮಿತಿ ಮದ್ದಡ್ಕ 14ನೇ ವರ್ಷದ ಗಣೇಶೋತ್ಸವ ಕಾರ್ಯಕ್ರಮ ಆ. 26 ಮತ್ತು 27 ರಂದು ಮದ್ದಡ್ಕ ವೆಲ್ಕಮ್ ಯೂತ್ ಕ್ಲಬ್ ನ ಬಯಲು ರಂಗ ಮಂದಿರದಲ್ಲಿ ಜರಗಿತು.

ಆ. 26 ರoದು ಗೌರಿ ಪೂಜೆಯೊoದಿಗೆ ಪ್ರಾರoಭಗೊoಡಿತು ಚೌತಿ ಹಬ್ಬದ ಕಾರ್ಯಕ್ರಮ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವನ್ನು ಸಮಿತಿಯ ಅಧ್ಯಕ್ಷ ಗೋಪಿನಾಥ್ ನಾಯಕ್ ಉದ್ಘಾಟಿಸಿದರು. ಸಮಿತಿಯ ಮಹಿಳಾ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಗಣೇಶೋತ್ಸವ ಕಾರ್ಯಕ್ರಮದ ಪ್ರೋತ್ಸಾಹಕರಾದ ಫರೆoಗಿಪೇಟೆ ಸೇವಾಂಜಲಿ ಪ್ರತಿಷ್ಠಾನದ ಅಧ್ಯಕ್ಷ ಕೃಷ್ಣ ಕುಮಾರ್ ಇವರನ್ನು ಹಾಗೂ ತಾಂಬೂಲ‌‌ ಕಲಾವಿದರು ನಾಟಕ ತoಡದ ಕಲಾವಿದ ರತ್ನದೇವು ಪುoಜಾಲಕಟ್ಟೆ. ನಾಟಕ ಪ್ರದರ್ಶನದ ಪ್ರಯೋಜಕರು ರಫೀಕ್ ಅಲಾದಿ ಕೊಟ್ಟಿಗೆ ಇವರನ್ನು ಸನ್ಮಾನಿಸಲಾಯಿತು.

ಆ. 27 ರಂದು ಗಣಹೋಮ , ಗಣಪತಿ ದೇವರ ಪ್ರತಿಷ್ಠೆ , ರoಗಪೂಜೆ, ಮಹಾ ಪೂಜೆ ಜರಗಿತು. ಸಾರ್ವಜನಿಕರ ಕ್ರೀಡಾ ಕೂಟದ ಉದ್ಘಾಟನಾ ಕಾರ್ಯಕ್ರಮ ಜರಗಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಗೋಪಿನಾಥ್ ನಾಯಕ್ ಗುರುವಾಯನಕೆರೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸುಜಿತಾ ವಿ ಬಂಗೇರ ಬೆಳ್ತಂಗಡಿ, ಮಡಂತ್ಯಾರು ಸೇಕ್ರೆಡ್ ಹಾರ್ಟ್ ಚರ್ಚಿನ ಧರ್ಮ ಗುರುಗಳು ಡಾ| ಸ್ಟೇನಿ ಗೋವಿಯಸ್, ಹೃಷಿಕೇಶ್ ಜೈನ್ ಪಡಂಗಡಿ, ಬೆಳ್ತಂಗಡಿ ತಾಲೂಕು ಸುನ್ನಿ ಕೋ ಆರ್ಡಿನೇಷನ್ ಸಮಿತಿಯ ಕಾರ್ಯಧ್ಯಕ್ಷರು ಉಮ್ಮರ್ ಜಿಕೆ. , ಓಡೀಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ದಿನೇಶ್ ಮೂಲ್ಯ ಕೊಂಡೆಮಾರು ಆಗಮಿಸಿದ್ದರು.

ವೇದಿಕೆಯಲ್ಲಿ ಸಮಿತಿಯ ಗೌರವ ಸoಚಾಲಕರು ಜಯರಾಮ್ ಶೆಟ್ಟಿ ಮುoಡಾಡಿಗುತ್ತು, ಪ್ರಧಾನ ಕಾರ್ಯದರ್ಶಿ ಯತೀಶ್ ಪ್ರಭು ಮದ್ದಡ್ಕ, ಕೋಶಾಧಿಕಾರಿ ಅನೂಪ್ ಬಂಗೇರ ಮದ್ದಡ್ಕ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಕಾರ್ಯಕ್ರಮದ ಮಹಾ ಪೋಷಕರನ್ನು ಅನ್ನ‌ದಾನದ ಸೇವಾಕರ್ತರನ್ನು ಗೌರವಿಸಲಾಯಿತು. ಕಾರ್ಯಕ್ರಮವನ್ನು ವೃಷಭ ಆರಿಗ ಪರಾರಿ ಗುತ್ತು, ಶಾoತಾ ಜೆ ಬಂಗೇರ ಹಾಗೂ ಶಿಕ್ಷಕರಾದ ಯುವರಾಜ್ ಕಾರ್ಯಕ್ರಮವನ್ನು ನಿರೂಪಿಸಿದರು‌. ದ್ರಿತಿ ಆಚಾರ್ಯ ಪ್ರಾರ್ಥನೆ ಗೈದರು. ಉಮೇಶ್ ಮದ್ದಡ್ಕ ಸ್ವಾಗತಿಸಿ, ಅನೂಪ್ ಬಂಗೇರ ಧನ್ಯವಾದವಿತ್ತರು.

ದೇವರಿಗೆ ಮಹಾ ಪೂಜೆ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು. ಸಾಯoಕಾಲ ಆಟೋ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣಾ ಕಾರ್ಯಕ್ರಮ ಜರಗಿತು. ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಬೆಳ್ತಂಗಡಿ ಬೆಸ್ಟ್ ಫೌಂಡೇಶನ್ ಅಧ್ಯಕ್ಷ ರಕ್ಷಿತ್ ಶಿವರಾಮ್, ವಿಜಯರತ್ನ ಪ್ರಶಸ್ತಿ ಪುರಸ್ಕೃತರು ಎಕ್ಸೆಲ್ ಪಿಯು ಕಾಲೇಜು ಇದರ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ಬಿ, ಬೆಳ್ತಂಗಡಿ ಮಂಜುಶ್ರೀ ಸೀನಿಯರ್ ಚೇಂಬರ್ ಅಧ್ಯಕ್ಷ ಮಂಜುನಾಥ್ ರೈ ಉಪಸಿತರಿದ್ದರು.

ನಂತರ ದೇವರಿಗೆ ವಿಸರ್ಜನೆ ಪೂಜೆ ಗಣಪತಿ ದೇವರ ಶೋಭಾ ಯಾತ್ರೆ ಜರಗಿತು. ಶೋಭಾ ಯಾತ್ರೆಯು ಮದ್ದಡ್ಕದಿಂದ ಕಿನ್ನಿಗೋಳಿಯವರೆಗೆ ಸಾಗಿ ಅಲ್ಲಿಂದ ಹಿಂತಿರುಗಿ ಸಬರಬೈಲು ಜಯವರ್ಮರಾಜ್ ಬಲ್ಲಾಳ್ ರವರ ಮನೆಯ ಕೆರೆಯಲ್ಲಿ ಜಲ ಸ್ತಂಭನಗೊಂಡಿತು. ಕಾರ್ಯಕ್ರಮದ ಯಶಸ್ಸಿಗೆ ಸಮಿತಿಯ ಪದಾಧಿಕಾರಿಗಳು ಸಹಕರಿಸಿದರು.

ವರದಿ: ಮನು ಮದ್ದಡ್ಕ

Related posts

ಇಳಂತಿಲ: ಡೇನಿತ್ ಸಾಲ್ಯಾನ್ ತೋಟದಲ್ಲಿ ಕಾಳಿಂಗ ಸರ್ಪ ಪತ್ತೆ

Suddi Udaya

ಧರ್ಮಸ್ಥಳ: ಎಸ್.ಕೆ. ಗೋಲ್ಡ್ ಸ್ಮಿತ್ ಇಂಡಸ್ಟ್ರಿಯಲ್ ಕೋ ಆಪರೇಟಿವ್ ಸೊಸೈಟಿಯಿಂದ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಭೇಟಿ

Suddi Udaya

ಪ್ರಿಕೆಜಿ ವಿದ್ಯಾರ್ಥಿ ಸಮಕ್ಷ್ ನ ಹುಟ್ಟು ಹಬ್ಬದ ಆಚರಣೆಯ ಪ್ರಯುಕ್ತ ಕುಂಭಶ್ರೀ ಆಂ.ಮಾ. ಶಾಲಾ ಕಾಲೇಜಿಗೆ ಗಡಿಯಾರ ಕೊಡುಗೆ

Suddi Udaya

ಮುಂಡಾಜೆ ಶ್ರೀ ಮೂರ್ತಿಲ್ಲಾಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾಗಿ ರಾಘವ ಶೆಟ್ಟಿ, ಕಾರ್ಯದರ್ಶಿಯಾಗಿ ಬಾಬು ಪೂಜಾರಿ ಆಯ್ಕೆ

Suddi Udaya

ಪ್ರೊ. ನಾವುಜಿರೆ ನಿಧನಕ್ಕೆ ಬೆಳ್ತಂಗಡಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಿ. ಯದುಪತಿ ಗೌಡರಿಂದ ಸಂತಾಪ

Suddi Udaya

ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ: ಡಾ| ಡಿ. ವೀರೇಂದ್ರ ಹೆಗ್ಗಡೆಯವರಿಂದ ಆಮಂತ್ರಣ ಪತ್ರ ಬಿಡುಗಡೆ

Suddi Udaya
error: Content is protected !!