23.5 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಧಾರ್ಮಿಕ

ಮೈರೋಳ್ತಡ್ಕ 30 ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ

ಬಂದಾರು : ಶಿವಗೆಳೆಯರ ಬಳಗ ಮತ್ತು ನವ್ಯಶ್ರೀ ಯುವತಿ ಮಂಡಲ ಮೈರೋಳ್ತಡ್ಕ -ಬಂದಾರು ಇವುಗಳ ಸಂಯುಕ್ತ ಆಶ್ರಯದಲ್ಲಿ 30 ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಮೈರೋಳ್ತಡ್ಕ ವಠಾರದಲ್ಲಿ ಆ. 27 ರಂದು ಅನಂತರಾಮ ಶಬರಾಯರವರ ಪೌರೋಹಿತ್ಯದಲ್ಲಿ ಧಾರ್ಮಿಕ ವಿಧಿ ವಿಧಾನಗಳಿಂದ ಜರುಗಿತು.

ಈ ಸಂದರ್ಭದಲ್ಲಿ ಶಾಸಕ ಹರೀಶ್ ಪೂಂಜ, ಕಿರಣ್ ಚಂದ್ರ ಡಿ ಪುಷ್ಪಗಿರಿ ಉರುವಾಲು, ಇವರುಗಳು ಭೇಟಿ ನೀಡಿ ಪ್ರಸಾದ ಸ್ವೀಕರಿಸಿದರು.

ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಶಿವಗೆಳೆಯರ ಬಳಗದ ಅಧ್ಯಕ್ಷರಾದ ಚಂದಪ್ಪ ಗೌಡ ನಡುಮಜಲು ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕರಾದ ಮಾಧವ ಗೌಡ ಧಾರ್ಮಿಕ ಭಾಷಣ ಮಾಡಿದರು. ಬಂದಾರು ಪಂಚಾಯತ್ ಅಧ್ಯಕ್ಷ ದಿನೇಶ್ ಗೌಡ ಖಂಡಿಗ, ಪ್ರಗತಿ ಪರ ಕೃಷಿಕರಾದ ಚೆನ್ನಪ್ಪ ಗೌಡ ಪಾಂಜಾಳ ಉಪಸ್ಥಿತರಿದ್ದರು.

ಮುಗೇರಡ್ಕ ನೇತ್ರಾವತಿ ನದಿಕಿನಾರೆಗೆ ಮಕ್ಕಳ ಕುಣಿತ ಭಜನಾ ತಂಡ, ಚೆಂಡೆ ಬಳಗ ದೊಂದಿಗೆ ವೈಭವ ಪೂರ್ಣ ಮೆರವಣಿಗೆಯೊಂದಿಗೆ ಗಣಪನ ಮೂರ್ತಿ ವಿಸರ್ಜನೆಗೊಂಡಿತು, ಮೈರೋಳ್ತಡ್ಕ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಜಿಲ್ಲೆಯ ಪ್ರಸಿದ್ದ ಕಲಾವಿದರ ಕೂಡುವಿಕೆಯಿಂದ ಶ್ರೀ ರಾಮದರ್ಶನ ಯಕ್ಷಗಾನ ಬಯಲಾಟ ನಡೆಯಿತು. ಭಕ್ತವೃಂದದ ಸಹಕಾರದಿಂದ ಕಾರ್ಯಕ್ರಮ ಯಶಸ್ವಿಯಾಗಿ ಸಂಪನ್ನಗೊಂಡಿತು.

Related posts

ನಾಳೆ(ಜು.6): ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ ವತಿಯಿಂದ ಪತ್ರಿಕಾ ದಿನಾಚರಣೆ : ಎಸ್.ಎಸ್.ಎಲ್.ಸಿ ಸಾಧಕರಿಗೆ ಸನ್ಮಾನ: ದಿತಿ ಸಾಂತ್ವನ ನಿಧಿ ವಿತರಣೆ

Suddi Udaya

ಧನು ಪೂಜೆಗೆ ಹೋದ ಬಾಲಕನ ಶವ ಕೆರೆಯಲ್ಲಿ ಪತ್ತೆ ಪ್ರಕರಣ: ಕೆರೆಯ ನೀರು ಖಾಲಿ ಮಾಡಿ ತನಿಖೆ – ಟಾರ್ಚ್ ಲೈಟ್ ಪತ್ತೆ: ಪೊಲೀಸರಿಂದ ತೀವ್ರಗೊಂಡ ಶೋಧ ಕಾರ್ಯ

Suddi Udaya

ಆರಂಬೋಡಿ : ಪಿಲ್ಲಂಬುಗೋಳಿ ಕಾಂತರಬೆಟ್ಟು ರಸ್ತೆಯನ್ನು ದುರಸ್ತಿಗೊಳಿಸುವಂತೆ ಗ್ರಾಮ ಪಂಚಾಯತ್ ಗೆ ಮನವಿ

Suddi Udaya

ಬಳಂಜ: ರಾಜ್ಯ ಮಡಿವಾಳರ ಸಂಘದ ವತಿಯಿಂದ ಸನ್ಮಾನ ಹಾಗೂ ವಿದ್ಯಾರ್ಥಿ ವೇತನ ವಿತರಣೆ

Suddi Udaya

ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ಪ್ರಕರಣ: ಆರೋಪಿಗೆ ಶಿಕ್ಷೆ ಪ್ರಕಟ

Suddi Udaya

ವಾಣಿ ಶಿಕ್ಷಣ ಸಂಸ್ಥೆಯಲ್ಲಿ ಗಣರಾಜ್ಯೋತ್ಸವ ಆಚರಣೆ

Suddi Udaya
error: Content is protected !!