37.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಗುರುವಾಯನಕೆರೆ: ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯಿಂದ ನಮ್ಮ ಮನೆ ಶಾಖೆಯ ವಾರ್ಷಿಕೋತ್ಸವ

ಗುರುವಾಯನಕೆರೆ: ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯ ಬೆಳ್ತಂಗಡಿ ತಾಲೂಕಿನ ಮೊದಲ ಯೋಗ ತರಗತಿ; ‘ನಮ್ಮ ಮನೆ’ ಶಾಖೆ ಗುರುವಾಯನಕೆರೆ ಇದರ ಮೊದಲನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ನಮ್ಮ ಮನೆ ಹವ್ಯಕ ಭವನ ಗುರುವಾಯನಕೆರೆ ಇಲ್ಲಿ, ಆ.೨೪ ರಂದು ಹಮ್ಮಿಕೊಳ್ಳಲಾಗಿತ್ತು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಖೆಯ ಸಂಚಾಲಕಿ ಸುಮಲತಾರವರು ವಹಿಸಿದರು.
ಮುಖ್ಯ ಅತಿಥಿಗಳಾಗಿ ನಮ್ಮ ಮನೆ, ಹವ್ಯಕ ಭವನ ಅಧ್ಯಕ್ಷ ಪರಮೇಶ್ವರ ಭಟ್ ಶುಭ ಹಾರೈಸಿದರು. ನಿಕಟಪೂರ್ವ ಅಧ್ಯಕ್ಷ ಕೃಷ್ಣ ಭಟ್ ಕಾಂತಜೆ, ಅವರು ಶಾಖೆಯಲ್ಲಿ ನಿರಂತರ ಯೋಗ ನಡೆಸುತ್ತಾ ಇರುವ ಕಾರ್ಯವನ್ನು ಶ್ಲಾಘಿಸಿದರು. ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಮಂಗಳೂರು ಮಹಾನಗರ ಪ್ರಮುಖರು ಗೀತಾ ಪ್ರಾಸ್ತಾವಿಕ ನುಡಿಗಳನ್ನು ನುಡಿದರು.
ಶಾಖೆಯ ಯೋಗಬಂಧುವಾದ ಶ್ರೀಮತಿ ಜಯಂತಿ ಮಾತನಾಡುತ್ತ ನಿರಂತರವಾಗಿ ಶಿಕ್ಷಕರಾಗಿ ಯೋಗ ಶಿಕ್ಷಣ ನೀಡುತ್ತಿರುವ ಶಿಕ್ಷಕರ ನಿಸ್ವಾರ್ಥ ಮನೋಭಾವವನ್ನು ಸ್ಮರಿಸುತ್ತಾ ಸದ್ಯದ ಶಿಕ್ಷಣ ವ್ಯವಸ್ಥೆಯಲ್ಲಿ ಗುರು-ಶಿಷ್ಯ ಸಂಬAಧದ ಬಗ್ಗೆ ಮಾತನಾಡಿದರು. ಸಂತೋಷ್ ಕುಮಾರ್, ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಇದರ ಉಪ್ಪಿನಂಗಡಿ ನಗರ ಸಂಚಾಲಕರು ಇವರು ಮಾರ್ಗದರ್ಶನ ನೀಡುತ್ತಾ ಸಮಿತಿಯಿಂದ ಪಡೆದ ಸಂಸ್ಕಾರ ಮರೆಯದೆ ಹೇಗೆ ನಾವು ವಿನಯವಂತರಾಗಿ ನಡೆದುಕೊಳ್ಳಬೇಕೆಂಬ ಸೂಚನೆ ನೀಡಿದರು.
ಯೋಗಬಂಧುಗಳು ಹಾಗೂ ಯೋಗೇತರ ಬಂಧುಗಳಿಗಾಗಿ ಚಟುವಟಿಕೆಯುಕ್ತ ಆಟಗಳನ್ನು ಶಾಖೆಯ ಯೋಗ ಬಂಧುಗಳಾದ ಪ್ರೀತೇಶ್ ಹಾಗೂ ನಿತೇಶ್ ನಡೆಸಿಕೊಟ್ಟರು.


ಶಾಖೆಯ ಯೋಗ ಬಂಧುವಾದ ಶ್ರೀಮತಿ ಜಯಮಣಿ ಸ್ವಾಗತಿಸಿ, ಶಾಖಾ ಯೋಗ ಬಂಧುವಾದ ಗಿರೀಶ್ ವಾರ್ಷಿಕ ವರದಿಯನ್ನು ಮಂಡಿಸಿದರು, ಯೋಗ ಬಂಧುಗಳಾದ ವಿಜಯ್, ಸುಚಿತ್ರ, ವಿನಯ್, ಜಯಂತಿ ಹಾಗೂ ಪುರಂದರ ಇವರು ಅನಿಸಿಕೆಯನ್ನು ಹಂಚಿಕೊಂಡರು. ಶಾಖಾ ಶಿಕ್ಷಕರಾದ ದಯಾನಂದ ಪ್ರಾರ್ಥಿಸಿ, ಯೋಗಬಂಧು ಪ್ರಿಯ ವಂದಿಸಿದರು. ಶಿವಕುಮಾರ್ ಹಾಗೂ ಭಾರತಿ ನಿರೂಪಿಸಿದರು.
ಶಾಖೆಯ ಹಾಗೂ ನಗರದ ಇತರ ಶಾಖೆಗಳ ಯೋಗಬಂಧುಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲಾಯಿತು. ಶಾಖಾ ಯೋಗ ಬಂಧುಗಳಾದ ಗಿರೀಶ್ ಹಾಗೂ ದಮಯಂತಿಯವರ ನಿರೂಪಣೆಯಲ್ಲಿ ನೃತ್ಯ, ನಾಟಕ ಹಾಗೂ ಇತರ ಮನರಂಜನಾ ಕಾರ್ಯಕ್ರಮಗಳು ಮೂಡಿ ಬಂತು.
ಕಾರ್ಯಕ್ರಮದಲ್ಲಿ ಉಪ್ಪಿನಂಗಡಿ ಹಾಗೂ ಮಂಗಳೂರು ಭಾಗದ ೮೮ ಯೋಗ ಬಂಧುಗಳು ಹಾಗೂ ೪೫ ಯೋಗೇತರ ಬಂಧುಗಳು ಸೇರಿ 133 ಮಂದಿ ಭಾಗವಹಿಸಿದ್ದರು.

Related posts

ಕಳಿಯ ಗ್ರಾಮ ಪಂಚಾಯತ್ ನಲ್ಲಿ ಗ್ರಂಥಾಲಯ ಸಲಹಾ ಸಮಿತಿಯ ಸಭೆ

Suddi Udaya

ಬೆಳ್ತಂಗಡಿ: ಮುಗುಳಿ ವಸತಿ ನಿಲಯದ ಬಳಿ ಅಡಿಕೆ ತೋಟದಲ್ಲಿ ಚಿರತೆ ಪತ್ತೆ

Suddi Udaya

ಉಜಿರೆ ಶ್ರೀ ಧ.ಮಂ. ಪ.ಪೂ. ಕಾಲೇಜಿನಲ್ಲಿ ಕಾರ್ಗಿಲ್ ವಿಜಯ ದಿನಾಚರಣೆ

Suddi Udaya

ಧರ್ಮಸ್ಥಳ ಠಾಣೆಯಲ್ಲಿ ದಾಖಲಾದ ಎರಡು ಪ್ರಕರಣ : ಎಸ್.ಐ.ಟಿಗೆ ಹಸ್ತಾಂತರಿಸುವಂತೆ ಆದೇಶ

Suddi Udaya

ಬಂದಾರು: ಮುರ್ತಾಜೆ ಎಂಬಲ್ಲಿ ರಸ್ತೆಗೆ ಉರುಳಿ ಬಿದ್ದ ಮರ

Suddi Udaya

ಆರಂಬೋಡಿ: ಪಾಲ್ಯ ನಿವಾಸಿ ಓಡಿ ಕೊರಗ ನಿಧನ

Suddi Udaya
error: Content is protected !!