
ಬೆಳ್ತಂಗಡಿ: ಯೂಟ್ಯೂಬ್ ನಲ್ಲಿ ಬಿಜೆಪಿಯ ಸಂತೋಷ್ ಜಿ ಬಗ್ಗೆ ಅವ್ಯಾಚ ಶಬ್ದಗಳಿಂದ ಬೈದು ವಿಡಿಯೋ ಪ್ರಸಾರವಾದ ಬಗ್ಗೆ ಪ್ರಕರಣ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಪ್ರಕರಣದಲ್ಲಿ ಆ.21 ರಂದು ಉಜಿರೆ ನಿವಾಸದಿಂದ ಮಹೇಶ್ ಶೆಟ್ಟಿ ತಿಮರೋಡಿಯನ್ನು ವಶಕ್ಕೆ ಪಡೆಯಲು ಬಂದಾಗ ಕರ್ತವ್ಯಕ್ಕೆ ಅಡ್ಡಿಪಡಿಸಿದ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಬ್ರಹ್ಮವಾರ ಪೊಲೀಸರು ಆ.22 ರಂದು ಪ್ರಕರಣ ದಾಖಲಿಸಿದ್ದರು. ಈ ಪ್ರಕರದಲ್ಲಿ ವಿಚಾರಣೆಗಾಗಿ ತಿಮರೋಡಿ ಮಹೇಶ್ ಶೆಟ್ಟಿ ತಿಮರೋಡಿ ಆ.29 ರಂದು ಬೆಳಗ್ಗೆ 11:20 ಕ್ಕೆ ವಿಚಾರಣೆಗಾಗಿ ಬೆಳ್ತಂಗಡಿ ಪೊಲೀಸ್ ಠಾಣೆಗೆ ಹಾಜರಾಗಿದ್ದಾರೆ.











