25.7 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಆ. 31: ತಾಲೂಕು ಜೈನ ಸಮಾಜದವರಿಂದ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಧರ್ಮ ಸಂರಕ್ಷಣಾ ವಾಹನ ಜಾಥಾ

ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಬೆಳ್ತಂಗಡಿ ತಾಲೂಕಿನ 81 ಗ್ರಾಮಗಳಿಂದ ಸಮಸ್ತ ಜೈನ ಧರ್ಮೀಯ ಶ್ರಾವಕ ಶ್ರಾವಿಕೆಯರು ವಾಹನದ ಮೂಲಕ ಜಾಥಾವನ್ನು ಆ.31ರಂದು ಹಮ್ಮಿಕೊಂಡಿರುತ್ತಾರೆ.

ಈ ಜಾಥಾದಲ್ಲಿ ತಾಲೂಕಿನ ಮೂಲೆ ಮೂಲೆಗಳಿಂದ ಎಲ್ಲ ಶ್ರಾವಕರು ಪಾಲ್ಗೊಳ್ಳಲಿದ್ದಾರೆ. ಶ್ರೀ ಕ್ಷೇತ್ರ ಧರ್ಮಸ್ಥಳದೊಂದಿಗೆ ಹಾಗೂ ಡಾ. ಡಿ. ವೀರೇಂದ್ರ ಹೆಗ್ಗಡೆಯವ ರೊಂದಿಗೆ ನಾವಿದ್ದೇವೆ. ಹಾಗೂ ಪುಣ್ಯ ಕ್ಷೇತ್ರ ಸಂರಕ್ಷಣೆ ನಮ್ಮ ನಿಮ್ಮೆಲ್ಲರ ಹೊಣೆ ಎಂದು ಸಂದೇಶ ಸಾರುವ ಮೂಲ ಉದ್ದೇಶದೊಂದಿಗೆ ಈ ವಾಹನ ಜಾಥಾವನ್ನು ಹಮ್ಮಿಕೊಳ್ಳಲಾಗಿದೆ.

ಸದ್ರಿ ಜಾಥಾವು ಬೆಳ್ತಂಗಡಿಯ ಇತಿಹಾಸ ಪ್ರಸಿದ್ದ ಶ್ರೀ ರತ್ನತ್ರಯ ಜೈನ ತೀರ್ಥಕ್ಷೇತ್ರ ಬಸದಿಯಿಂದ ಬೆಳಗ್ಗೆ 8:30 ಕ್ಕೆ 3 ಬಸದಿಗಳಲ್ಲಿ ವಿಶೇಷ ಪೂಜೆಯನ್ನು ನೆರವೇರಿಸಿ ವಾಹನ ಜಾಥಾ ಆರಂಭಗೊಳ್ಳಲಿದೆ. ವಿಶ್ವದ ಎಲ್ಲಾ ಕಡೆ ಶಾಂತಿ ನೆಲೆಸಿ ಪ್ರತಿಯೊಬ್ಬರ ಬದುಕು ಸುಂದರವಾಗಿರಲಿ ಎಂದು ಭಗವಂತನಲ್ಲಿ ಪ್ರಾರ್ಥಿಸಿ ಜಾಥಾ ಮುನ್ನಡೆಯಲಿದೆ. ವಿಶೇಷವಾಗಿ ಈ ಜಾಥಾದಲ್ಲಿ ಸಂಘಟಕರು ಯಾರೆಂದರೆ ಪ್ರತಿಯೊಬ್ಬ ಶ್ರಾವಕ ಮತ್ತು ಶ್ರಾವಕಿಯರು ಈ ರೀತಿಯ ಹೊಸ ಯೋಚನೆ ಮತ್ತು ಯೋಜನೆಯೊಂದಿಗೆ ಜಾಥಾವನ್ನು ಹಮ್ಮಿಕೊಳ್ಳಲಾಗಿದೆ ಎಂದು ಶ್ರಾವಕ -ಶ್ರಾವಿಕಯರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿರುತ್ತಾರೆ.

Related posts

ಕೊರಂಜ ಸ.ಉ.ಪ್ರಾ. ಶಾಲಾ ಕೊಠಡಿ ನಿರ್ಮಾಣಕ್ಕೆ ಶ್ರೀ ಕ್ಷೇ.ಧ.ಗ್ರಾ.ಯೋಜನೆಯಿಂದ ಸಹಾಯಧನ ವಿತರಣೆ

Suddi Udaya

ಪಡಂಗಡಿ: ಸಂಪರ್ಕ ಕಡಿತಗೊಂಡ ಕುದ್ರೆಂಜ ರಸ್ತೆಗೆ ಗ್ರಾ.ಪಂ.ನಿಂದ ತಾತ್ಕಲಿಕ ಸೇತುವೆ ನಿರ್ಮಾಣ

Suddi Udaya

ಬಳಂಜ: ತಾರಿದೊಟ್ಟುವಿನಲ್ಲಿ ಚಿಪ್ಪುಹಂದಿ ಪ್ರತ್ಯಕ್ಷ: ಸುರಕ್ಷಿತವಾಗಿ ಹಿಡಿದು ಅರಣ್ಯಕ್ಕೆ ಬಿಟ್ಟ ಅರಣ್ಯಾಧಿಕಾರಿಗಳು

Suddi Udaya

ಕುದುರೆಮುಖ ರಾಷ್ಟ್ರೀಯ ಉದ್ಯಾನವನದಿಂದ ಪುನರ್ವಸತಿ ಹೊಂದಿರುವ ಅರ್ಹ ಕುಟುಂಬಗಳಿಗೆ ಕೃಷಿಗೆ ಸಂಬಂಧಪಟ್ಟ ಉಪಕರಣ ವಿತರಣೆ

Suddi Udaya

ಉಜಿರೆ ಶ್ರೀ ಧ.ಮಂ. ಪ.ಪೂ. ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವತಿಯಿಂದ ರಾ.ಸೇ. ಯೋಜನೆಯ ಬಗ್ಗೆ ವಿಶೇಷ ಕಾರ್ಯಾಗಾರ

Suddi Udaya

ಯಕ್ಷಧ್ರುವ ಪಟ್ಲ ಫೌಂಡೇಶನ್‌ ಟ್ರಸ್ಟ್ ನಿಂದ ಕನ್ಯಾನ ಸದಾಶಿವ ಶೆಟ್ಟಿ ರವರಿಗೆ ಸನ್ಮಾನ

Suddi Udaya
error: Content is protected !!