September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಬಾರ್ಯ, ತೆಕ್ಕಾರು, ಪುತ್ತಿಲ ಬಿಜೆಪಿ ಶಕ್ತಿ ಕೇಂದ್ರ ಅಭ್ಯಾಸ ವರ್ಗ ಕಾರ್ಯಕ್ರಮ

ಬಾರ್ಯ :ಭಾರತೀಯ ಜನತಾ ಪಾರ್ಟಿ ಬೆಳ್ತಂಗಡಿ ಮಂಡಲ ವತಿಯಿಂದ ಪಕ್ಷ ಸಂಘಟನಾ ದೃಷ್ಟಿಯಿಂದ ಆ 29 ರಂದು ನಡೆದ ಬಾರ್ಯ, ತೆಕ್ಕಾರು, ಪುತ್ತಿಲ ಶಕ್ತಿ ಕೇಂದ್ರ ಪಂಚಾಯತ್ ಮಟ್ಟದ ಅಭ್ಯಾಸ ವರ್ಗ ಸಭೆ ಬಾರ್ಯ ವಿಷ್ಣುಮೂರ್ತಿ ದೇವಸ್ಥಾನದ ವಠಾರದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಹಿರಿಯ ಕಾರ್ಯಕರ್ತರಾದ ಗೋಪಾಲಕೃಷ್ಣ ಅಯ್ಯರ್ ರವರು ದೀಪ ಬೆಳಗಿಸಿ ಉದ್ಘಾಟಿಸಿದರು. ಜಿಲ್ಲಾ ಮಹಿಳಾ ಮೋರ್ಚಾ ಸದಸ್ಯರಾದ ಶ್ರೀಮತಿ ಅನಿತಾ ಕುಶಾಲಪ್ಪ ಗೌಡ ಉದ್ಘಾಟನಾ ಭಾಷಣ ಮಾಡಿದರು. ಪಕ್ಷದ ಪ್ರಮುಖರಾದ ರಾಜೇಶ್ ಪೆರ್ಮುಡ, ಗೋಪಾಲಕೃಷ್ಣ , ಜೋಯಲ್ ಮೆಂಡೋನ್ಸ ರವರು ಬೈಠಕ್ ನೀಡಿದರು. ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ರವರು ಸಮಾರೋಪ ಭಾಷಣ ಮಾಡಿ, ಪಕ್ಷ ಸಂಘಟನೆ ಮತ್ತು ಕಾರ್ಯಚಟುವಟಿಕೆಯ ಕುರಿತು ವಿಸ್ತ್ರುತವಾಗಿ ಸಮಾಲೋಚನೆ ನಡೆಸಿದರು.

ಈ ಸಂದರ್ಭದಲ್ಲಿ ಬಾರ್ಯ ಕೃಷಿ ಪತ್ತಿನ ಅಧ್ಯಕ್ಷ ಪ್ರವೀಣ್ ರೈ , ತಣ್ಣೀರುಪಂಥ ಕೃಷಿ ಪತ್ತಿನ ಅಧ್ಯಕ್ಷ ಜಯಾನಂದ ಕಲ್ಲಾಪು, ಕಣಿಯೂರು ಮಹಾಶಕ್ತಿ ಕೇಂದ್ರ ಪ್ರಧಾನ ಕಾರ್ಯದರ್ಶಿ ಮಹೇಶ್ ಜೆಂಕ್ಯಾರ್,ಶಕ್ತಿ ಕೇಂದ್ರ ಅಧ್ಯಕ್ಷರಾದ ನವೀನ್ ರೈ, ರಾಜೇಶ್ ರೈ, ಪ್ರವೀಣ್ ಬೇಂಗಿಲ , ಪ್ರಶಾಂತ್ ಪೈ, ಬಾರ್ಯ ಕೃಷಿ ಪತ್ತಿನ ನಿರ್ದೇಶಕರು, ಪಂಚಾಯತ್ ಸದಸ್ಯರು ಹಾಗೂ ಅನನ್ಯ ಜವಾಬ್ದಾರಿಯ ಪಕ್ಷದ ಪ್ರಮುಖರು, ಕಾರ್ಯಕರ್ತರು ಉಪಸ್ಥಿತರಿದ್ದರು.

Related posts

ಬೆಳ್ತಂಗಡಿ: ಸಹಾಯಕ ಪ್ರಾಧ್ಯಾಪಕಿ ಸೌಮ್ಯಲತಾ ರವರಿಗೆ ಪಿಹೆಚ್ ಡಿ ಪದವಿ

Suddi Udaya

ಪಜಿರಡ್ಕ ಸಂಗಮ ಕ್ಷೇತ್ರ ಶ್ರೀ ಸದಾಶಿವೇಶ್ವರ ದೇವಸ್ಥಾನಕ್ಕೆ ನೂತನ ಶಿಲಾಮಯ ಧ್ವಜಸ್ತಂಭದ ಶೋಭಾಯಾತ್ರೆಗೆ ಉಜಿರೆಯಲ್ಲಿ ಗಣ್ಯರಿಂದ ಚಾಲನೆ

Suddi Udaya

ಗುರುವಾಯನಕೆರೆ ಸ.ಹಿ.ಪ್ರಾ, ಶಾಲೆಯಲ್ಲಿ ಮಾನವ ಹಕ್ಕುಗಳ ಮಹತ್ವದ ಬಗ್ಗೆ ಮಾಹಿತಿ ಕಾರ್ಯಕ್ರಮ

Suddi Udaya

ರಾಜ್ಯ ಮಟ್ಟದ ಸ್ಕೌಟ್ಸ್‌ & ಗೈಡ್ಸ್‌ ಜಾಂಬೋರೇಟ್‌ ಗೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಅಕ್ಕಿ ಕೊಡುಗೆ

Suddi Udaya

ಗುರುವಾಯನಕೆರೆ ಎಕ್ಸೆಲ್ ಕಾಲೇಜಿನಲ್ಲಿ ಪ್ರಥಮ ಪಿಯುಸಿ ತರಗತಿಗಳ ಪ್ರಾರಂಭೋತ್ಸವ ಕಾರ್ಯಕ್ರಮ

Suddi Udaya

ಬೆಳ್ತಂಗಡಿಯಲ್ಲಿ ಬಿ.ಎಂ.ಎಸ್ ಸಮನ್ವಯ ಸಭೆ

Suddi Udaya
error: Content is protected !!