ಪಡಂಗಡಿ: ಓಡೀಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ 35 ನೇ ವರ್ಷದ ಗಣೇಶೋತ್ಸವದಲ್ಲಿ ಸುಮಾರು 500 ಭಜಕರಿಂದ ಶ್ರೀ ದೇವರ ಸನ್ನಿಧಾನದಲ್ಲಿ ಭಜನೋತ್ಸವ ಜರುಗಿತು.


ಭಜನೋತ್ಸವದ ಉದ್ಘಾಟನೆಯನ್ನು ವಿಮಲಾ ಸೀತಾರಾಮ್ ಪೂಜಾರಿ ಅನಿಲ , ಗಣೇಶೋತ್ಸವ ಸಮಿತಿ ಅಧ್ಯಕ್ಷ ಚಿದಾನಂದ ಇಡ್ಯ ಹಾಗೂ ಪಾದಾಧಿಕಾರಿಗಳು , ಪ್ರಭಾಕರ ಶೆಟ್ಟಿ ಉಪ್ಪಡ್ಕ ರಾಜ್‌ಪ್ರಕಾಶ್ ಶೆಟ್ಟಿ ಪಡ್ಡಾಯಿಲು ನೆರವೇರಿಸಿದರು.

ರಾಜ್ಯ ಮಟ್ಟದ ಕುಣಿತ ಭಜನಾ ತರಬೇತಿ ಗುರುಗಳಾದ ಸಂದೇಶ್ ಮದ್ದಡ್ಕ ಹಾಗೂ ನಾಗೇಶ್ ಬಿ ನೆರಿಯ ಇವರನ್ನು ಶ್ರೀ ಮಹಾಲಿಂಗೇಶ್ವರ ಭಜನಾ ಮಂಡಳಿ ಓಡೀಲು ಇಲ್ಲಿನ ಸದಸ್ಯರು ಹಾಗೂ ಪೋಷಕರು ಸನ್ಮಾನಿಸಿದರು.
ಬೆಳ್ತಂಗಡಿ ತರಬೇತುದಾರರ ತಂಡದ ಸದಸ್ಯರು ಕಾರ್ಯಕ್ರಮದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದರು.











