ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಜೆಸಿಐ ಕೊಕ್ಕಡ ಕಪಿಲಾ ಘಟಕ ಹಾಗೂ ಗ್ರಾಮಾಭ್ಯುದಯ ಅನುಷ್ಠಾನ ಸಮಿತಿಯಿಂದ ಧರ್ಮಾಧ್ಯಕ್ಷ ಜೇಮ್ಸ್ ಪಟ್ಟೆರಿಯಲ್ ರವರಿಗೆ ಗೌರವಾರ್ಪಣೆ

ಕಳೆಂಜ : ಕಳೆಂಜ ಗ್ರಾಮದ ಪಟ್ಟೆರಿ ಮನೆಯಿಂದ ಆಯ್ಕೆಯಾಗಿರುವ ಬೆಳ್ತಂಗಡಿ ಧರ್ಮ ಪ್ರಾಂತ್ಯದ ನೂತನ ಧರ್ಮಾಧ್ಯಕ್ಷ ವಂದನೀಯ ಜೇಮ್ಸ್ ಪಟ್ಟೆರಿಯಲ್ ರವರು ಆ.31ರಂದು ತಮ್ಮ ಸ್ವಗ್ರಾಮದ ಪಟ್ಟೆರಿ ಮನೆಗೆ ಆಗಮಿಸಿದರು. ಈ ಸಂದರ್ಭದಲ್ಲಿ ಜೆಸಿಐ ಕೊಕ್ಕಡ ಕಪಿಲಾ ಘಟಕ ಹಾಗೂ ಗ್ರಾಮಾಭ್ಯುದಯ ಕಾರ್ಯಕ್ರಮ ಅನುಷ್ಠಾನ ಸಮಿತಿಯ ವತಿಯಿಂದ ವಿಜೃಂಭಣೆಯಿಂದ ಗೌರವಾರ್ಪಣೆ ನಡೆಯಿತು.

ಗೌರವ ಸ್ವೀಕರಿಸಿ ಧರ್ಮಧ್ಯಕ್ಷರು ಮಾತನಾಡುತ್ತಾ, “ದೇವರ ಅನುಗ್ರಹದಿಂದ ಈ ಸ್ಥಾನಕ್ಕೆ ಆಯ್ಕೆಯಾಗಿದ್ದು, ದೇವರ ಸೇವೆ ಮಾಡಲು ಅವಕಾಶ ಸಿಕ್ಕಿದೆ ಎಂಬುದು ಸಂತೋಷದ ಸಂಗತಿ. ನಾವು ಎಲ್ಲರೂ ವಿಭಿನ್ನ ಜಾತಿಗಳವರಾಗಿದ್ದರೂ, ನೀವು ಎಲ್ಲರೂ ಬಂದು ಗೌರವಿಸಿದಿದ್ದು ಹೃದಯಂಗಮವಾಗಿದೆ. ನಿಮ್ಮೆಲ್ಲರಿಗೂ ಧನ್ಯವಾದಗಳು” ಎಂದು ತಮ್ಮ ಆಶೀರ್ವಾದಗಳನ್ನು ನೀಡಿದರು.

ಈ ಸಂದರ್ಭದಲ್ಲಿ ಸಂತೋಷ್ ಜೈನ್, ಟಿ.ಎಸ್. ನಿತ್ಯಾನಂದ ರೈ, ಧನಂಜಯ ಗೌಡ, ಶ್ರೀಧರ್ ರಾವ್, ಅಕ್ಷತ್ ರೈ, ಜೈಸನ್ ಪಟ್ಟೆರಿ, ರಾಜೇಶ್ ಶೆಟ್ಟಿ, ವೀರೇಂದ್ರ ಜೈನ್, ಸಂಜೀವ ದೇವಾಡಿಗ, ವಿನೋದ್ ಎಸ್, ಪ್ರೇಮ ಬಿ ಎಸ್, ಗಂಗಾಧರ ಗೌಡ, ಸೀನಪ್ಪ ಗೌಡ ಸೇರಿದಂತೆ ಹಲವರು ಜೆ ಸಿ ಸದಸ್ಯರು ಸಮಿತಿಯ ಸದಸ್ಯರು ಹಾಗೂ ಅವರ ಕುಟುಂಬಸ್ಥರು ಉಪಸ್ಥಿತರಿದ್ದರು.

Related posts

ರಾಜ್ಯ ಮಟ್ಟದ ವಿಜ್ಞಾನ ರಸಪ್ರಶ್ನೆ ಸ್ಪರ್ಧೆ: ಎಸ್.ಡಿ.ಎಂ. ವಿದ್ಯಾರ್ಥಿಗೆ ಪ್ರಶಂಸಾ ಪ್ರಮಾಣಪತ್ರ

Suddi Udaya

ಮಚ್ಚಿನ ಸ.ಪ್ರೌ. ಶಾಲೆಯಲ್ಲಿ ವಲಯ ಮಟ್ಟದ ಪ್ರೌಢಶಾಲಾ ವಿಭಾಗದ ಪ್ರತಿಭಾ ಕಾರಂಜಿ ಸ್ಪರ್ಧೆ

Suddi Udaya

ಮಾ.10: ಬಿಲ್ಲವರ ಮಹಾಮಂಡಲದ ರಜತ ಮಹೋತ್ಸವ: ಹುಣ್ಸೆಕಟ್ಟೆಯಲ್ಲಿ ಪೂರ್ವಭಾವಿ ಸಭೆ

Suddi Udaya

ಸೌಜನ್ಯಳ ಅತ್ಯಾಚಾರ, ಕೊಲೆ ಪ್ರಕರಣದ ನೈಜ ಆರೋಪಿಗಳ ಪತ್ತೆಗೆ ಆಗ್ರಹ: ಆ.28 ರಂದು ಬೆಳ್ತಂಗಡಿ ತಾಲೂಕು ಕಚೇರಿ ಎದುರು ಮಹಾಧರಣಿ: ನಮ್ಮ ಹೋರಾಟ ಯಾರ ವಿರುದ್ಧವೂ ಅಲ್ಲ. ನ್ಯಾಯಕ್ಕಾಗಿ ನಮ್ಮ ಹೋರಾಟ: ಪತ್ರಿಕಾಗೋಷ್ಠಿಯಲ್ಲಿ ಮಾಜಿ ಶಾಸಕ ವಸಂತ ಬಂಗೇರ ಹೇಳಿಕೆ

Suddi Udaya

ಜೈನ ಬಸದಿಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅರ್ಚಕರುಗಳಿಗೆ ಮಾಸಿಕ ಗೌರವ ಧನ ನೀಡಲು ಅನುದಾನ ಬಿಡುಗಡೆ

Suddi Udaya

ಆಮಂತ್ರಣ ವೇದಿಕೆ ಜಿಲ್ಲಾ ಅಧ್ಯಕ್ಷರಾಗಿ ವಿಂಧ್ಯಾ ಎಸ್.ರೈ ಮತ್ತು ಉಪಾಧ್ಯಕ್ಷರಾಗಿ ಅನಿತಾ ಶೆಟ್ಟಿ ಆಯ್ಕೆ

Suddi Udaya
error: Content is protected !!