25.7 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಸೆ.7: ಪ್ರವಾದಿ ಮುಹಮ್ಮದ್ ಸೀರತ್ ಅಭಿಯಾನದ ಪ್ರಯುಕ್ತ ಧಾರ್ಮಿಕ ಸೌಹಾರ್ದ ಕಾರ್ಯಕ್ರಮ: ಸವಾಲುಗಳು ಮತ್ತು ಅವಕಾಶಗಳು ಎಂಬ ವಿಷಯದಡಿ ಸಾರ್ವಜನಿಕ ಸಮಾವೇಶ

ಬೆಳ್ತಂಗಡಿ: ವಿವಿಧತೆಯಲ್ಲಿ ಏಕತೆಯನ್ನು ಪ್ರತಿಪಾದಿಸುವ ನಮ್ಮ ದೇಶದಲ್ಲಿ ಹಲವಾರು ಧರ್ಮ, ಜಾತಿ, ಭಾಷೆ, ಸಂಸ್ಕೃತಿಗಳು ಮೇಲೈಸಿವೆ.ಆದರೆ ಇತ್ತೀಚಿನ ವರ್ಷಗಳಲ್ಲಿ ದೇಶದ ಧಾರ್ಮಿಕ ಸೌಹಾರ್ದವನ್ನು ಕೆಡಿಸುವ, ಪರಸ್ಪರ ದ್ವೇಷ ಬಿತ್ತುವ ಕೆಲಸ ನಿರಂತರವಾಗಿ ನಡೆಯುತ್ತಿದೆ. ಪ್ರಸಕ್ತ ಪರಿಸ್ಥಿತಿಯಲ್ಲಿ ಧಾರ್ಮಿಕ ಸೌಹಾರ್ದವನ್ನು ಕಾಪಾಡಿಕೊಳ್ಳುವುದೇ ಒಂದು ಸವಾಲಾಗಿ ಪರಿಣಮಿಸಿದೆ. ಪ್ರಸ್ತುತ ಸವಾಲುಗಳನ್ನು ಎದುರಿಸಿ ಅವಕಾಶಗಳನ್ನು ಸದುಪಯೋಗಪಡಿಸುವ ನಿಟ್ಟಿನಲ್ಲಿ ವ್ಯಾಪಕ ಚರ್ಚೆಗಳು ನಡೆಯಬೇಕಾದ ಅಗತ್ಯ ಇಂದು ಬಹಳಷ್ಟಿದೆ. ಇದನ್ನು ಮನಗಂಡು ಜಮಾಅತೆ ಇಸ್ಲಾಮೀ ಹಿಂದ್ ಭಾರತದಾದ್ಯಂತ ಧಾರ್ಮಿಕ ಸೌಹಾರ್ದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬರುತ್ತಿದೆ. ಈ ಬಾರಿ ಕರ್ನಾಟಕದಲ್ಲಿ ಪ್ರವಾದಿ ಮುಹಮ್ಮದ್(ಸ)ರ ಜನ್ಮ ತಿಂಗಳ ಪ್ರಯುಕ್ತ ಅವರ ಜೀವನಚರ್ಯೆಯನ್ನು ಪರಿಚಯಿಸುವ ಅಭಿಯಾನವನ್ನು ಆಚರಿಸಲಾಗುತ್ತಿದೆ. ಸೆ 07 ರಂದು ಅಪರಾಹ್ನ 2.30ಕ್ಕೆ ‘ಧಾರ್ಮಿಕ ಸೌಹಾರ್ದ ಕಾಲ್ನಡಿಗೆ ಜಾಥಾ’ವನ್ನು ಹಾಗೂ ಸಂಜೆ 4.00ಕ್ಕೆ ಬೆಳ್ತಂಗಡಿ ಸಂತೆಕಟ್ಟೆ ಬಳಿಯ ಎಸ್.ಡಿ.ಎಂ. ಹಾಲ್‌ನಲ್ಲಿ ಸಾರ್ವಜನಿಕ ಸಮಾವೇಶ ಕಾರ್ಯಕ್ರಮವನ್ನು ಜರುಗಲಿದೆ ಎಂದು ಜ.ಇ. ಹಿಂದ್, ಮಂಗಳೂರು ಉತ್ತರ ಅಧ್ಯಕ್ಷ ಸಿಎ ಮುಹಮ್ಮದ್ ಇಸ್ಹಾಕ್ ಹೇಳಿದರು.

ಅವರು ಸೆ. 1 ರಂದು ಬೆಳ್ತಂಗಡಿ ಲೋಬೋ ಟವರ್ಸ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಸಮಾಜದಲ್ಲಿ ಶಾಂತಿ ಸಾಮರಸ್ಯದ ಸಂದೇಶಗಳನ್ನು ಪಸರಿಸುವ ದೃಷ್ಟಿಯಿಂದ ಈ ಅಭಿಯಾನದ ಭಾಗವಾಗಿ ರಾಜ್ಯಾದ್ಯಂತ ವಿವಿಧ ಸಮಾಜ ಸೇವಾ ಚಟುವಟಿಕೆಗಳು, ಸಂವಾದ, ವಿಚಾರಗೋಷ್ಠಿ, ಸಾರ್ವಜನಿಕ ಸಭೆಗಳು, ಪ್ರಬಂಧ ಸ್ಪರ್ಧೆ ಮುಂತಾದ ಹಲವು ಕಾರ್ಯಕ್ರಮಗಳು ನಡೆಯಲಿವೆ ಎಂದರು.

ಈ ಸಾರ್ವಜನಿಕ ಸಮಾವೇಶ ಕಾರ್ಯಕ್ರಮದ ಉದ್ಘಾಟನೆಯನ್ನು ಮೂಡಬಿದ್ರೆ ಜೈನ‌ ಮಠದ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯ ಪಟ್ಟಾಚಾರ್ಯವರ್ಯ ಮಹಾ ಸ್ವಾಮೀಜಿ ನೇರವೇರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ವಿಧಾನ‌ಪರಿಷತ್ ಸದಸ್ಯರಾದ ಬಿ.ಕೆ ಹರಿಪ್ರಸಾದ್,ಕೆ.ಪ್ರತಾಪಸಿಂಹ ನಾಯಕ್, ಕೆಪಿಸಿಸಿ ರಾಜ್ಯ ವಕ್ತಾರ ನಿಕೇತ್ ರಾಜ್ ಮೌರ್ಯ, ಬೆಸ್ಟ್ ಪೌಂಢೇಶನ್ ಅಧ್ಯಕ್ಷ ರಕ್ಷಿತ್ ಶಿವರಾಮ್, ದಿಕ್ಸೂಚಿ ಭಾಷಣಕಾರರಾಗಿ ಜ‌.ಇ. ಹಿಂದ್ ರಾಜ್ಯ ಕಾರ್ಯದರ್ಶಿ ಜನಾಬ್ ಮುಹಮ್ಮದ್ ಕುಂಞಿ ಭಾಗವಹಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಗಳೂರು ಬರಕ ಇಂಟರ್ ನ್ಯಾಷನಲ್ ಕಾಲೇಜು ಪ್ರಾಂಶುಪಾಲರಾದ ಜನಾಬ್ ಶರ್ಪುದ್ದೀನ್ ಬಿ.ಎಸ್ ವಹಿಸಲಿದ್ದಾರೆ. ಹಾಗೂ ವಿವಿಧ ಕ್ಷೇತ್ರದ ಗಣ್ಯರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಸಂಚಾಲಕರು ಜ.ಇ.ಹಿಂದ್ ಅಬ್ದುಲ್ ಕರೀಮ್ ಯು,ಜಿಲ್ಲಾ ಅಧ್ಯಕ್ಷ ಎಸ್.ಐ.ಓ ರಿಝ್ವಾನ್ ಅಝ್ಹರಿ, ಸಾಜಿದಾ ಮೂಮಿನ್ ಜಿಲ್ಲಾ ಸಂಚಾಲಕಿ, ಜ.ಇ.ಹಿಂದ್,ಯೂಸುಫ್ ಅಸ್ಲಮ್ ಜಿಲ್ಲಾ ಅಧ್ಯಕ್ಷರು, ಸಾಲಿಡಾರಿಟಿ ಯೂತ್ ಮೂವ್‌ಮೆಂಟ್, ಆಯಿಶಾ ಅಮಾನ ಅಧ್ಯಕ್ಷೆ, ಜಿ.ಐ.ಓ ಮಂಗಳೂರು, ಸಮಾವೇಶ ಸಂಚಾಲಕ ಅಮೀನ್ ಅಕ್ಸನ್ ಉಪಸ್ಥಿತರಿದ್ದರು.

Related posts

ಧರ್ಮಸ್ಥಳ ಡಾ. ಡಿ. ವೀರೇಂದ್ರ ಹೆಗ್ಗಡೆಯವರಿಗೆ ಅಯೋಧ್ಯೆಯ ಶ್ರೀ ರಾಮ ಮಂದಿರದ ಉದ್ಘಾಟನೆಯ ಆಹ್ವಾನ ಪತ್ರಿಕೆ

Suddi Udaya

ಡೇವಿಡ್ ಜೈಮಿ ಕೊಕ್ಕಡ ರವರಿಗೆ ನೋಬೆಲ್ ವರ್ಲ್ಡ್ ರೆಕಾರ್ಡ್ಸ್ ವಿಶ್ವ ದಾಖಲೆ

Suddi Udaya

ಬೈಕ್ ಗೆ ಅಡ್ಡ ಬಂದ ನಾಯಿ:ಪತ್ರಿಕೆ ವಿತರಕನಿಗೆ ಗಾಯ

Suddi Udaya

ಪರೀಕ ಶ್ರೀ ಧ.ಮಂ. ಯೋಗ ಪ್ರಕೃತಿ ಚಿಕಿತ್ಸಾ ಆಸ್ಪತ್ರೆ ಸೌಖ್ಯವನದಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬಿ ಸೀತಾರಾಮ ತೋಳ್ಪಾಡಿತ್ತಾರವರಿಗೆ ಅಭಿನಂದನಾ ಸಮಾರಂಭ

Suddi Udaya

ಎಕ್ಸೆಲ್ ನ ವಿದ್ಯಾರ್ಥಿ ಸಂಜನಾ ಜೆ ಇ ಇ ಅಡ್ವಾನ್ಸ್ ನಲ್ಲಿ ರಾಷ್ಟ್ರಕ್ಕೆ 731 ರಾಂಕ್

Suddi Udaya

ಗೆಳೆಯರ ಬಳಗ ಅಕ್ಷಯನಗರ ಸದಸ್ಯರಿಂದ ಶ್ರಮದಾನ

Suddi Udaya
error: Content is protected !!