23.5 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಬೆಳ್ತಂಗಡಿ ರಾಜಕೇಸರಿ ಸೇವಾ ಟ್ರಸ್ಟ್ ವತಿಯಿಂದ ಹುಣ್ಸೆಕಟ್ಟೆ ಶಾಲೆಯ ಶೌಚಾಲಯ ಸ್ವಚ್ಛತೆ

ಬೆಳ್ತಂಗಡಿ: ರಾಜಕೇಸರಿ ಸೇವಾ ಟ್ರಸ್ಟ್ ಬೆಳ್ತಂಗಡಿ ತಾಲೂಕು ಇದರ ಸೇವಾ ಅಂಗವಾಗಿ ರಾಜಕೇಸರಿ ಸೇವಾ ಟ್ರಸ್ಟ್ ಕರ್ನಾಟಕ ಇದರ ಸಂಸ್ಥಾಪಕ ದೀಪಕ್ ಜಿ ಬೆಳ್ತಂಗಡಿ ಇವರ ನೇತೃತ್ವದಲ್ಲಿ 579 ಸೇವಾ ಯೋಜನೆ ಅಂಗವಾಗಿ ಬೆಳ್ತಂಗಡಿ ವ್ಯಾಪ್ತಿಯ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಹುಣ್ಸೆಕಟ್ಟೆ ಶಾಲೆಯ ಶೌಚಾಲಯವನ್ನು ಸ್ವಚ್ಛಾಲಯವಾಗಿ ಪರಿವರ್ತಿಸಲಾಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಬೆಳ್ತಂಗಡಿ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪ್ರಸಾದ್ ಶೆಟ್ಟಿ ಏಣಿಂಜೆ ನೆರವೇರಿಸಿ ಶೌಚಾಲಯ ಸ್ವಚ್ಚಾಲಯ ಸೇರಿದಂತೆ ಹಲವಾರು ಸಮಾಜ ಮುಖಿ ಸೇವಾ ಕಾರ್ಯಗಳನ್ನು ಮಾಡುತ್ತಿರುವ ರಾಜಕೇಸರಿ ಮಾದರಿ ಸಂಘಟನೆಯಾಗಿ ಬೆಳೆಯುತ್ತಿದೆ. ಸರ್ಕಾರಿ ಶಾಲೆಯ ಶೌಚಾಲಯ ಸ್ವಚ್ಚವಾಗಿರಬೇಕು ಎಂಬ ಕಲ್ಪನೆಯಲ್ಲಿ ಸಂಸ್ಥಾಪಕ ದೀಪಕ್ ಜಿ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಕೆಲಸ ಶ್ಲಾಘನೀಯ, ಇಂತಹ ಸೇವಾ ಯೋಜನೆಗಳಲ್ಲಿ ಗುರುತಿಸಿಕೊಂಡಿರುವ ರಾಜಕೇಸರಿ ಸಂಘಟನೆಗೆ ಆರ್ಥಿಕ ಹಾಗೂ ನೈತಿಕ ಬೆಂಬಲ ,ಪ್ರೋತ್ಸಾಹ ನೀಡಿ ಬಲ ತುಂಬುವ ಕೆಲಸ ನಾವೆಲ್ಲರೂ ಸೇರಿ ಮಾಡಬೇಕಾಗಿದೆ ಎಂದರು.

ಈ ಸಂದರ್ಭದಲ್ಲಿ ರಾಜ ಕೇಸರಿ ಟ್ರಸ್ಟ್ ಸಂಸ್ಥಾಪಕರಾದ ದೀಪಕ್ ಜಿ ಬೆಳ್ತಂಗಡಿ, ಬೆಳ್ತಂಗಡಿ ತಾಲೂಕು ಅಧ್ಯಕ್ಷ ಸತೀಶ್ ಕಂಗಿತ್ತಿಲ್, ನಿಕಟ ಪೂರ್ವ ಅಧ್ಯಕ್ಷ ಸಂದೀಪ್ ಬೆಳ್ತಂಗಡಿ, ಸಂಚಾಲಕರಾದ ಜಗದೀಶ್ ಲಾಯಿಲ, ಸಹ ಸಂಚಾಲಕರಾದ ಶರತ್ ಕರಾಯ, ಸಾಂಸ್ಕೃತಿಕ ಕಾರ್ಯದರ್ಶಿಯಾದ ದೇವರಾಜ್ ಪೂಜಾರಿ, ಸಾಮಾಜಿಕ ಜಾಲತಾಣದ ಸಂಪತ್, ವಿದ್ಯಾರ್ಥಿ ಪ್ರಮುಖ ‌ ಸಂದೇಶ್, ಸದಸ್ಯರುಗಳಾದ ಪ್ರವೀಣ್ ಆಚಾರ್ಯ, ಲೋಹಿತ್ ಇವರುಗಳೆಲ್ಲ ಸೇರಿ ಶ್ರಮದಾನ ಮೂಲಕ ರಾಜ ಕೇಸರಿ ಸಚ್ಚಾಲೆಯನ್ನು ಶ್ರಮದಾನದ ಮೂಲಕ ನೆರವೇರಿಸಿದರು .

ಶಾಲೆಯ ಮುಖ್ಯ ಶಿಕ್ಷಕ ಕರಿಯಪ್ಪ ಎ.ಕೆ ಸ್ವಾಗತಿಸಿ ವಂದಿಸಿದರು.

Related posts

ಪಡ್ಡ೦ದಡ್ಕ ನುರುಲ್ ಹುದಾ ಮಸೀದಿ ಆದೀನದಲ್ಲಿರುವ ಮುನವಿರುಲ್ ಇಸ್ಲಾಂ ಮದರಸದ ರಕ್ಷಕರ ಸಭೆ

Suddi Udaya

ಬೆಳ್ತಂಗಡಿ ತಾಲೂಕು ಮಟ್ಟದ ಭಗವದ್ಗೀತಾ ಅಭಿಯಾನ: ಶ್ರೀ ಮಂ. ಅ.ಪ್ರೌ. ಶಾಲೆಯ ವಿದ್ಯಾರ್ಥಿಗಳು ಜಿಲ್ಲಾಮಟ್ಟಕ್ಕೆ ಆಯ್ಕೆ

Suddi Udaya

ಮುಂಡಾಜೆ ದೇವಸ್ಥಾನದ ದೀಪೋತ್ಸವ ಸಂಪನ್ನ

Suddi Udaya

ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆಯಲ್ಲಿ ಐಕ್ಸ್ ದ್ವಿಮಾಸಿಕ ಸಭೆ

Suddi Udaya

ಫೆ.22: ಟೀಂ ಅಭಯಹಸ್ತ ಕಾರ್ಯಕ್ರಮದ ಸಮಾಲೋಚನಾಸಭೆ: ಸಂದೀಪ್ ಸುಂದರ್ ನೀರಲ್ಕೆ

Suddi Udaya

ಡಿ.21-22: ಬದನಾಜೆ ಶಾಲೆಯ ಅಮೃತ ಮಹೋತ್ಸವ ಸಂಭ್ರಮ: ಸುಜ್ಞಾನ ಸಭಾಂಗಣ ಲೋಕಾರ್ಪಣೆ

Suddi Udaya
error: Content is protected !!