ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಹಚ್ಚಾಡಿ ಶಾಲೆಯಲ್ಲಿ ರೂ. 1.75 ಲಕ್ಷದ ಸ್ಮಾರ್ಟ್ ಕ್ಲಾಸ್ ಉದ್ಘಾಟನೆ

ಪಡಂಗಡಿ: ಸ್ಮಾರ್ಟ್ ಕ್ಲಾಸ್ ಗಾಗಿ ನಾನು ನೀಡಿರುವ ಹಣ ಸದುಪಯೋಗವಾಗಿದ್ದು ನನಗೆ ಖುಷಿ ತಂದಿದೆ. ಮುಂದಿನ ದಿನಗಳಲ್ಲಿ ಶಾಲೆಯ ಮೂಲಭೂತ ಅಗತ್ಯಗಳನ್ನು ಪೂರೈಸುವಲ್ಲಿ ಸಹಕಾರ ನೀಡಲಾಗುವುದು. ಮಕ್ಕಳು ಗುರು ಹಿರಿಯರನ್ನು ಗೌರವಿಸಬೇಕು. ಶೈಕ್ಷಣಿಕವಾಗಿ ಎಲ್ಲರೂ ಬೆಳೆಯಬೇಕೆಂಬ ನಿಟ್ಟಿನಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದ್ದೇನೆ ಎಂದು ಉದ್ಯಮಿ ಶಶಿಧರ ಶೆಟ್ಟಿ ನವಶಕ್ತಿ ಹೇಳಿದರು.

ಅವರು ಹಚ್ಛಾಡಿ ಶಾಲೆಗೆ ರೂ 1.75 ಲಕ್ಷ ವೆಚ್ಚದಲ್ಲಿ ನಿರ್ಮಿಸಿಕೊಟ್ಟಿರುವ ಸ್ಮಾರ್ಟ್ ಕ್ಲಾಸ್ ಉದ್ಘಾಟಿಸಿ ಮಾತನಾಡಿದರು

ದಾನಿ ಹರ್ಷ ಹೆಗ್ಡೆ ಮಾತನಾಡಿ ಸರಕಾರಿ ಶಾಲೆಯ ಉಳಿವಿಗಾಗಿ ನನ್ನ ಮನಸ್ಸು ಮಿಡಿಯುತ್ತಿದೆ. ಈ ನಿಟ್ಟಿನಲ್ಲಿ ಹಲವಾರು ಸರಕಾರಿ ಶಾಲೆಗಳಿಗೆ ಸಹಾಯ ಮಾಡುತ್ತಿದ್ದೇನೆ. ಸಮಾಜಕ್ಕಾಗಿ ನಾವು ಒಳ್ಳೆಯ ಕೆಲಸವನ್ನು ಮಾಡಬೇಕು ಎಂದರು.

ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದವರನ್ನು ಮತ್ತು ದಾನಿಗಳನ್ನು ಗೌರವಿಸಲಾಯಿತು.

ಪಡಂಗಡಿ ಗ್ರಾಮ ಪಂಚಾಯತ್ ಅಧ್ಯಕ್ಷ ವಸಂತ ಪೂಜಾರಿ ಕಾರ್ಯಕ್ರಮದ ಸಭಾಧ್ಯಕ್ಷೆಯನ್ನು ವಹಿಸಿದ್ದರು.ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷೆ ವಿನೋಧ ಶುಭ ಹಾರೈಸಿದರು. ಶಾಲಾಭಿವೃದ್ದಿ ಸಮಿತಿ ಉಪಾಧ್ಯಕ್ಷ ರಾಮಣ್ಣ, ಗ್ರಾಮ ಪಂಚಾಯಿತಿ ಸದಸ್ಯ ಸುಮತಿ,ವಿಶ್ರಾಂತ ಶಿಕ್ಷಕ ರಮೇಶ ರಾವ್,ನಿಕಟ ಪೂರ್ವಾಧ್ಯಕ್ಷ ಡಾ. ಕೃಷ್ಣಾನಂದ,ಅಧಿಕಾರಿ ಜಗದೀಶ್, ಚಿತ್ರ ಕಲಾವಿದ ಧನುಷ್ ಹೆಗ್ಡೆ, ಸ್ಥಳೀಯ ಶಾಲೆಗಳ ಮುಖ್ಯ ಶಿಕ್ಷಕರು, ಎಸ್ ಡಿಎಂಸಿ ಸರ್ವ ಸದಸ್ಯರು ಮತ್ತು ಪೋಷಕರು, ವಿದ್ಯಾರ್ಥಿ ವೃoದ,ಹಿರಿಯ ವಿದ್ಯಾರ್ಥಿ ಸಂಘದ ಸರ್ವ ಸದಸ್ಯರು ಉಪಸ್ಥಿತರಿದ್ದರು.

ಮುಖ್ಯ ಶಿಕ್ಷಕಿ ಕಮಲಾಕ್ಷಿ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಹಿರಿಯ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಗುಲಾಬಿ ವಂದಿಸಿದರು. ಶಿಕ್ಷಕಿ ಬೇಬಿಂದ್ರ ಮತ್ತು ದಿವ್ಯಶ್ರೀ ನಿರೂಪಿಸಿದರು.

Related posts

ಪಡ್ಡಂದಡ್ಕದಲ್ಲಿ ಬಕ್ರೀದ್ ಆಚರಣೆ

Suddi Udaya

ಸ್ವಚ್ಛ ಸರ್ವೇಕ್ಷಣ ಗ್ರಾಮೀಣ ಸಮೀಕ್ಷೆ: ಕಾಶಿಪಟ್ಣ ಗ್ರಾಮ ಪಂಚಾಯತು ರಾಜ್ಯ ಮಟ್ಟಕ್ಕೆ ಆಯ್ಕೆ

Suddi Udaya

ಪೆರಾಡಿ : ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಮಹಿಳೆ ನೇಣು ಬಿಗಿದು ಆತ್ಮಹತ್ಯೆ

Suddi Udaya

ತಾಲೂಕಿನ ಪ್ರಸಿದ್ದ ದೈವಪಾತ್ರಿ ರಾಮಣ್ಣ ಪೂಜಾರಿ ಹುಂಬೆಜೆ ನಿಧನ

Suddi Udaya

ಹೊಸಂಗಡಿ ಶ್ರೀಮತಿ ಇಂದಿರಾ ಗಾಂಧಿ ವಸತಿ ಶಾಲೆಯಲ್ಲಿ ವಿಜೃಂಭಣೆಯ ಗಣೇಶೋತ್ಸವ

Suddi Udaya

ಕೊಯ್ಯೂರು ಗ್ರಾ.ಪಂ. ಅಧ್ಯಕ್ಷರಾಗಿ ದಯಾಮಣಿ, ಉಪಾಧ್ಯಕ್ಷರಾಗಿ ಹರೀಶ್ ಗೌಡ ಆಯ್ಕೆ

Suddi Udaya
error: Content is protected !!