
ಧರ್ಮಸ್ಥಳ: ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನದ ಜಗದ್ಗುರು ಪೀಠಾಧೀಶ ಮಹಾ ಮಂಡಲೇಶ್ವರ 1008 ಶ್ರೀ ಸ್ವಾಮಿ ಶ್ರೀ ಬ್ರಹ್ಮಾನಂದ ಸರಸ್ವತಿ ಮಹಾರಾಜ್ ಇವರ 17ನೇ ವಷ೯ದ ಪಟ್ಟಾಭಿಷೇಕ ವರ್ಧಂತ್ಯುತ್ಸವ ವೈದಿಕ ವಿಧಿ ವಿಧಾನಗಳೊಂದಿಗೆ ಶ್ರೀ ರಾಮ ಮಹಾಸಂಸ್ಥಾನದಲ್ಲಿ ಸೆ. 3ರಂದು ಜರುಗಿತು.

ದಕ್ಷಿಣದ ಅಯೋಧ್ಯೆ ಎಂದೇ ಖ್ಯಾತಿ ಪಡೆದ ಶ್ರೀ ರಾಮ ನಿರ್ಮಾತೃ ಆತ್ಮಾನಂದ ಸರಸ್ವತಿ ಸ್ವಾಮೀಜಿಯವರ ಶಿಷ್ಯರಾದ ಸದ್ಗುರು ಶ್ರೀ ಬ್ರಹ್ಮಾನಂದ ಸ್ವಾಮೀಜಿಯವರು ವಿವಿಧ ಮಠಗಳನ್ನು ಸ್ಥಾಪಿಸಿ ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ ತೊಡಗಿಸಿಕೊಂಡಿದ್ದಾರೆ. ರಾಮ ಜನ್ಮ ಭೂಮಿ ಅಯೋ ಶಾಖಾ ಮಠ ನಿರ್ಮಾಣದ ಕಾಮಗಾರಿ ಆರಂಭ ಗೊಂಡು ತಮ್ಮ ಪಟ್ಟಾಭಿಷೇಕದ ದಶಮಾನೋತ್ಸವ ಸಂದರ್ಭದ ಯಶಸ್ವಿಯಾಗಿ ರಾಷ್ಟ್ರೀಯ ಧರ್ಮ ಸಂಸದ್ ಆಯೋಜಿಸಿ ಜನಮಾನಸದಲ್ಲಿ ಉಳಿಯುವಂತೆ ಮಾಡಿದ್ದಾರೆ.


ಕಳೆದ 6 ವರ್ಷಗಳಿಂದ ಚಾತುರ್ಮಾಸ್ಯ ವ್ರತಾಚರಣೆ ಕೈಗೊಂಡು ಈ ವರ್ಷ ಉತ್ತರ ಕನ್ನಡ ಜಿಲ್ಲೆಯ ಕುಮುಟಾ ತಾಲೂಕು ವನದುರ್ಗಾ ದೇವಸ್ಥಾನದಲ್ಲಿ ಜು.10ರಿಂದ ಆ.20ರವರೆಗೆ ಚಾತುರ್ಮಾಸ್ಯ ವ್ರತಾಚಾರಣೆ ಕೈಗೊಂಡಿದ್ದರು.
ಸೆ.3ರಂದು ಬೆಳಿಗ್ಗೆ ಭಕ್ತರಿಂದ ಪಾದಪೂಜೆಯನ್ನು ವೈದಿಕ ವೃಂದದವರು ನೆರವೇರಿಸಿ, ಕಿರೀಟ ಧಾರಣೆ ಮಾಡಲಾಯಿತು.

ಕಾಯ೯ಕ್ರಮದಲ್ಲಿ ಸಚಿವ ಮಂಕಾಲ್ ವೈದ್ಯ, ಎಂ ಎಲ್ಸಿ ಪ್ರತಾಪಸಿಂಹ ನಾಯಕ್, ಚಿತ್ತರಂಜನ್ ಮಂಗಳೂರು, ಮಾಜಿ ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್, ಪೀತಾಂಬರ ಹೇರಾಜೆ, ಬೆಸ್ಟ್ ಪೌಂಡೇಶನ್ ಬೆಳ್ತಂಗಡಿ ಅಧ್ಯಕ್ಷ ರಕ್ಷಿತ್ ಶಿವರಾಂ, ಪಿ.ಕೆ ರಾಜು ಪೂಜಾರಿ, ಹರಿಕೃಷ್ಣ ಬಂಟ್ವಾಳ್, ಜಯಂತ್ ಕೋಟ್ಯಾನ್, ವಿಠಲ ಸಿ.ಪೂಜಾರಿ, ಸದಾನಂದ ಪೂಜಾರಿ ಉಂಗಿಲಬೈಲು, ರಾಜೇಶ್ ಪೂಜಾರಿ ಮುಡುಕೋಡಿ, ಪ್ರಶಾಂತ್ ನಾಯ್ಕ ಕುಮಟಾ, ಯೋಗೀಶ್ ಚಂದ್ರ, ಜಿ.ಪಂ ಮಾಜಿ ಸದಸ್ಯೆ ನಮಿತಾ ಪೂಜಾರಿ, ಜಯವಿಕ್ರಮ, ಈಶ್ವರ ನಾಯ್ಕ, ಹರೀಶ್ ಶಿವಮೊಗ್ಗ, ಬೆಳಾಲು ತಿಮ್ಮಪ್ಪ ಗೌಡ,ಪ್ರಮೋಳ್ ಕುಮಾರ್ ಸೇರಿದಂತೆ ಗಣ್ಯರು, ಕ್ಷೇತ್ರ ಭಕ್ತರು ಉಪಸ್ಥಿತರಿದ್ದರು.











