ಕಾಯರ್ತಡ್ಕ: ಗ್ರಾಮೀಣ ಭಾಗದ ಜನರಿಗೆ ಶೀಘ್ರವಾಗಿ ಆರೋಗ್ಯ ಸೇವೆ ಸಿಗಬೇಕೆಂಬ ಹಂಬಲದೊAದಿಗೆ ಕಾಯರ್ತಡ್ಕ ಪರಿಸರದಲ್ಲಿ ಶ್ರೀ ಕೃಷ್ಣ ಹೆಲ್ತ್ ಸೆಂಟರ್ ಪ್ರಾರಂಭವಾಗಿದೆ. 6 ಬೆಡ್ ನಿಂದ 50 ಬೆಡ್‌ನ ದೊಡ್ಡ ಆಸ್ಪತ್ರೆಯಾಗಿ ಪರಿವರ್ತನೆಯ ಹಿಂದೆ ಡಾ| ಮುರುಳಿಕೃಷ್ಣ ಅವರ ತಪಸ್ಸು, ಸೇವೆಯನ್ನು ನಾನು ಗೌರವಿಸುತ್ತೇನೆಂದು ಕೆಎಂಸಿ ಆಸ್ಪತ್ರೆಯ ಸಮುದಾಯ ವೈದ್ಯಕೀಯ ವಿಭಾಗದ ಮುಖ್ಯಸ್ಥರಾದ ಡಾ. ಪ್ರಸನ್ನ ಮಿತ್ರ ಹೇಳಿದರು.
ಅವರು ಸೆ.3 ರಂದು ಜನರ ಸೇವೆಗಾಗಿ ಕಾಯರ್ತಡ್ಕದಲ್ಲಿ ಪ್ರಾರಂಭಗೊAಡ ಶ್ರೀ ಕೃಷ್ಣ ಹೆಲ್ತ್ ಸೆಂಟರನ್ನು ಉದ್ಘಾಟಿಸಿ ಮಾತನಾಡಿದರು.
ಸಮುದಾಯದೊಂದಿಗೆ ಆರೋಗ್ಯ ಕ್ಷೇತ್ರದ ಒಡನಾಟ ಹೇಗಿರಬೇಕೆಂದು ಶ್ರೀ ಕೃಷ್ಣ ಆಸ್ಪತ್ರೆ ತೋರಿಸಿಕೊಟ್ಟಿದೆ. ಆರೋಗ್ಯ ಸೇವೆಗಾಗಿ ಹಳ್ಳಿಗಾಡಿನಲ್ಲಿ ಜನರು ಪರದಾಡುವುದನ್ನು ನಾನು ನೋಡಿದವ. ಈ ಹೆಲ್ತ್ ಸೆಂಟರಿನಿಂದ ಊರಿನ ಜನರಿಗೆ ಉತ್ತಮ ಸೇವೆ ದೊರಕುವಂತಾಗಲಿ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಕೃಷ್ಣ ಹೆಲ್ತ್ ಸೆಂಟರ್ ಇದರ ಆಡಳಿತ ನಿರ್ದೇಶಕ ಡಾ. ಮುರಳಿಕೃಷ್ಣ ವಹಿಸಿ ಮಾತನಾಡಿ ಕಾಯರ್ತಡ್ಕ ದೊಡ್ಡ ವ್ಯಾಪ್ತಿಯನ್ನು ಹೊಂದಿದ್ದು ಜನಸಂಖ್ಯೆ ಹೇರಳವಾಗಿದೆ. ಇಲ್ಲಿಗೆ ಗುಣಮಟ್ಟದ ವೈದ್ಯಕೀಯ ಸೇವೆ ಅಗತ್ಯವಿದೆಯೆಂದು ಮನಗಂಡು ಈ ಭಾಗದಲ್ಲಿ ಹೆಲ್ತ್ ಸೆಂಟರ್ ಪ್ರಾರಂಭಿಸಿದ್ದೇವೆ. ಸಂಸ್ಥೆ ನಡೆಯುವುದು ಹೆಸರಿನಿಂದಲ್ಲಾ, ಬದಲಾಗಿ ಸಿಬ್ಬಂದಿಗಳ ಶ್ರಮ ಹಾಗೂ ಪರಿಪೂರ್ಣ ಸೇವೆಯಿಂದ ಎಂದು ನಾನು ನಂಬಿದ್ದೇನೆ ಎಂದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಿವೃತ್ತ ಪ್ರಾದೇಶಿಕ ನಿರ್ದೇಶಕ ಜಯರಾಮ ನೆಲ್ಲಿತ್ತಾಯ ಮಾತನಾಡಿ ಇರ್ವತ್ರಾಯ ಕುಟುಂಬ ಹಿಂದಿನಿಂದಲೂ ಸಮಾಜ ಸೇವೆಗೆ ಹೆಚ್ಚಿನ ಆಧ್ಯತೆ ನೀಡಿದ ಕುಟುಂಬ. ಆಸ್ಪತ್ರೆ ಕಟ್ಟುವ ಹಿಂದೆ ಇವರ ಪ್ರಯತ್ನ, ಕಷ್ಟ ಅರಿವಿದೆ. ನನಗೆ ಮತ್ತು ಶ್ರೀ ಕೃಷ್ಣ ಆಸ್ಪತ್ರೆಗೆ ೧೫ ವರ್ಷದ ಸಂಪರ್ಕವಿದ್ದು ಇಲ್ಲಿ ಜನರಿಗೆ ಬೇಕಾದಾಗೆ ಸೇವೆ ಸಿಗುತ್ತಿದೆ. ಕಳೆಂಜ ದೊಡ್ಡ ಗ್ರಾಮವಾಗಿದ್ದು ಇಲ್ಲಿ ಆಸ್ಪತ್ರೆಯ ಅಗತ್ಯವಿದ್ದು ಊರಿಗೆ ಒಳ್ಳೆಯ ಸೇವೆ ಸಿಗಲಿ ಎಂದರು.
ಶ್ರೀ ಕೃಷ್ಣ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕಿ ವಂದನಾ ಇರ್ವತ್ರಾಯ ಮಾತನಾಡಿ ವೇದಘೋಷ, ಮಂತ್ರದೊಂದಿಗೆ ಆಸ್ಪತ್ರೆ ಉದ್ಘಾಟನೆಗೊಂಡಿದ್ದು ನಮ್ಮ ಸುಯೋಗ. ಊರಿನ ಜನರು ಹರಸಿ ಸಹಕರಿಸಿದ್ದಾರೆ ಎಂದರು.

ವೇದಿಕೆಯಲ್ಲಿ ಮಂಗಳೂರು ಎಂ.ಆರ್.ಪಿ.ಎಲ್ ವೆಲ್‌ಫೆರ್ ಅಸೋಸಿಯೇಷನ್ ಜನರಲ್ ಕಾರ್ಯದರ್ಶಿ ಬಾಲ ನಾರಾಯಣ್, ಜೊತೆ ಕಾರ್ಯದರ್ಶಿ ವೀರಣ್ಣ, ಕಳೆಂಜ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಮಂಜುನಾಥ, ಕಾಯರ್ತಡ್ಕ ಕೊಂಗುಂಪುಯ ಕಾಂಪ್ಲೆಕ್ಸ್ ಮಾಲಕ ಕೆ.ಎಮ್ ಚಾಕೋ ಉಪಸ್ಥಿತರಿದ್ದರು.
ಆರೋಗ್ಯ ಉತ್ತಮವಾಗಿದ್ದರೆ ಸಮೃದ್ದ ಜೀವನ:
ನನ್ನ ಅಳಿಯ ಮತ್ತು ಮಗಳು ಶ್ರೀ ಕೃಷ್ಣ ಆಸ್ಪತ್ರೆಯ ಮೂಲಕ ಜನರಿಗೆ ಉತ್ತಮ ಸೇವೆ ನೀಡುತ್ತಿರುವುದು ಸಂತೋಷ ತಂದಿದೆ. ಮನುಷ್ಯನಿಗೆ ಮುಖ್ಯವಾಗಿ ಆಹಾರ, ಬಟ್ಟೆಬರೆ, ವಸತಿ, ಆರೋಗ್ಯ ಬೇಕಾಗಿದೆ. ಆರೋಗ್ಯ ಉತ್ತಮವಾಗಿದ್ದರೆ ಮಾತ್ರ ಜೀವನ ಸಮೃದ್ಧವಾಗಿರುತ್ತದೆ. ಕರ್ತವ್ಯ ಪ್ರಜ್ಞೆಯನ್ನು ತಿಳಿದು ಉತ್ತಮ ಸೇವೆ ಮಾಡಿದಾಗ ಸಮಾಜ ಗುರುತಿಸುತ್ತದೆ ಎಂದು ನಿವೃತ್ತ ಶಿಕ್ಷಕ ಶಂಕರನಾರಾಯಣ ಕೊಡಂಚ ಅಭಿಪ್ರಾಯಪಟ್ಟರು.
ಸೇವೆ/ಸೌಲಭ್ಯಗಳು: ಕಳೆದ ಹಲವು ವರ್ಷಗಳಿಂದ ಮನೆ ಬಾಗಿಲಿಗೆ ವೈದ್ಯಕೀಯ ಸೇವೆ ನೀಡುವ ಶ್ರೀ ಕೃಷ್ಣ ಆಸ್ಪತ್ರೆಯಲ್ಲಿ ದೊರೆಯುವ ಸೌಲಭ್ಯಗಳಾದ ಗ್ರಾಮೀಣ ಪ್ರದೇಶದ ಸುಸಜ್ಜಿತ ಆಸ್ಪತ್ರೆ, ಹೊರರೋಗಿ ಮತ್ತು ಒಳರೋಗಿ ವಿಭಾಗ, ತುರ್ತು ಚಿಕಿತ್ಸಾ ಘಟಕ, ತಜ್ಞ ವೈದ್ಯರ ಭೇಟಿ ಹಾಗೂ ಸಲಹೆ, ಸುಸಜ್ಜಿತ ಶಸ್ತ್ರ ಚಿಕಿತ್ಸಾ ಘಟಕ, ಆಧುನಿಕ ಉಪಕರಣಗಳುಳ್ಳ ಕಂಪ್ಯೂಟರೀಕೃತ ಲ್ಯಾಬೋರೇಟರಿ, ಅಲ್ಟಾಸೌಂಡ್ (ಸ್ಕಾö್ಯನಿಂಗ್), ಎಕೋಕಾರ್ಡಿಯಾಗ್ರಾಫಿ, ಇಸಿಜಿ, ಡೇ ಕೇರ್ ವ್ಯವಸ್ಥೆ, ಆಯುರ್ವೇದ ವಿಭಾಗ, ಫಿಸಿಯೋಥೆರಪಿ ವಿಭಾಗ, ಅಪಘಾತ ಮತ್ತು ತುರ್ತು ಚಿಕಿತ್ಸಾ ವಿಭಾಗ, ಸ್ಪೇಶಲ್ ರೂಮ್ ಹಾಗೂ ಜನರಲ್ ವಾರ್ಡುಗಳು, ವಿಮೆ ಹೊಂದಿದವರಿಗೆ ಪಾವತಿ ರಹಿತ ಚಿಕಿತ್ಸೆ, ಕ್ಯಾಂಟೀನ್ ಸೇವೆ ಲಭ್ಯವಿದೆ.
ಕಾರ್ಯಕ್ರಮದಲ್ಲಿ ಉದ್ಯಮಿ, ನವೀನ್ ಭಟ್, ಬಣಕಲ್ ಉದ್ಯಮಿಗಳಾದ ಗಿರೀಶ್ ಕುದ್ರೆಂತಾಯ ಧರ್ಮಸ್ಥಳ, ಹರೀಶ್ ರಾವ್ ಮುಂಡ್ರುಪ್ಪಾಡಿ, ರಾಘವೇಂದ್ರ ಬೈಪಾಡಿತ್ತಾಯ, ನಾಗೇಶ್ ರಾವ್ ಮುಂಡ್ರುಪ್ಪಾಡಿ ಹಾಗೂ ಶ್ರೀ ಕೃಷ್ಣ ಹೆಲ್ತ್ ಸೆಂಟರ್ ಕಕ್ಕಿಂಜೆ, ಸಾಯಿಕೃಷ್ಣ ಹೆಲ್ತ್ ಸೆಂಟರ್ ಬಣಕಲ್, ಹೊಯ್ಸಳ ಹೆಲ್ತ್ ಕೇರ್‌ನ ಸಿಬ್ಬಂದಿಗಳು, ವೈದ್ಯರು ಉಪಸ್ಥಿತರಿದ್ದು ಸಹಕರಿಸಿದರು.
ಡಾ.ಆಲ್ವಿನ್ ಸ್ವಾಗತಿಸಿದರು. ಅನೀಶ್ ಕೃಷ್ಣ ಇರ್ವತ್ರಾಯ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಲ್ಯಾಬ್ ತಂತ್ರಜ್ಞ ಆರಿಶ್ ನಿರೂಪಿಸಿದರು. ಡಾ. ಸಾತ್ವಿಕ್ ಕುದ್ದಣ್ಣಾಯ ವಂದಿಸಿದರು. ಹೆಲ್ತ್ ಸೆಂಟರ್ ಪ್ರಾರಂಭೋತ್ಸವದ ಪ್ರಯುಕ್ತ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಿತು.











