30 C
ಪುತ್ತೂರು, ಬೆಳ್ತಂಗಡಿ
March 6, 2026
Uncategorizedಪ್ರಮುಖ ಸುದ್ದಿ

ಬೆಳ್ತಂಗಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆ : ವಾಷಿ೯ಕ ರೂ.99.93 ಲಕ್ಷ ಲಾಭ – ಶೇ 15 ಡಿವಿಡೆಂಡ್ ಘೋಷಿಸಿದ ಅಧ್ಯಕ್ಷ ಅಜಿತ್ ಕುಮಾರ್ ಆರಿಗ

ಬೆಳ್ತಂಗಡಿ: ಬೆಳ್ತಂಗಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಇದರ 2024-25ನೇ ಸಾಲಿನ ವಾರ್ಷಿಕ ಮಹಾಸಭೆ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ಆರಿಗ ಅವರ ಅಧ್ಯಕ್ಷತೆಯಲ್ಲಿ ಸೆ.4ರಂದು ಶ್ರೀ ಧ.ಮಂ.ಕಲಾಭವನ ಬೆಳ್ತಂಗಡಿಯಲ್ಲಿ ಜರುಗಿತು.

ಸಂಘವು ಏಳು ಗ್ರಾಮ ವ್ಯಾಪ್ತಿಯನ್ನು ಒಳಗೊಂಡಿದ್ದು, ನಡ, ಸವಣಾಲು, ಮದ್ದಡ್ಕ ಹಾಗೂ ಈ ವಷ೯ ಮುಂಡೂರುನಲ್ಲಿ ಶಾಖೆಯನ್ನು ತೆರೆಯಲಾಗಿದೆ.ವರದಿ ವಷ೯ದಲ್ಲಿ 12,466 ಸದಸ್ಯತ್ವವನ್ನು ಹೊಂದಿದೆ. ಇದರಲ್ಲಿ ವಷಾ೯ಂತ್ಯಕ್ಕೆ 2626 ಎ ತರಗತಿ ಸದಸ್ಯರು, 9,781 ಸಿ ತರಗತಿ ಮತ್ತು 59 ಡಿ ತರಗತಿ ಸದಸ್ಯರು ಇದ್ದಾರೆ. ಸಂಘವು ವಷಾ೯ಂತ್ಯಕ್ಕೆ 2.70 ಕೋಟಿ ಪಾಲು ಬಂಡವಾಳವಿದ್ದು, ಸಂಘವು ಒಟ್ಟು 18.59 ಕೋಟಿ ನಿರಖು ಠೇವಣಿ ಹೊಂದಿದೆ. ವರದಿ ಸಾಲಿನಲ್ಲಿ ಠೇವಣಿ ಸಂಗ್ರಹದಲ್ಲಿ ಶೇ 7.41ಪ್ರಗತಿಯನ್ನು ಸಾಧಿಸಲಾಗಿದೆ. ಸಂಘವು 2024-25ನೇ ಸಾಲಿನಲ್ಲಿ 27.78 ಕೋಟಿ ಸಾಲ ವಿತರಣೆ ಮಾಡಲಾಗಿದೆ. ವರದಿ ವಷ೯ದಲ್ಲಿ ಶೇ 17.93 ಸಾಲ ವಿತರಣೆಯಲ್ಲಿ ಏರಿಕೆಯಾಗಿದ್ದು, ವರದಿ ವಷ೯ದಲ್ಲಿ ಶೇ 99.60 ಸಾಲ ವಸೂಲಾತಿ ಆಗಿದೆ.ಸಂಘವು 99.93 ಕೋಟಿ ಲಾಭ ಗಳಿಸಿದ್ದು, ಸದಸ್ಯರಿಗೆ ಶೇ 15 ಡಿವಿಡೆಂಡ್ ನೀಡಲಾಗಿದೆ ಎಂದು ತಿಳಿಸಿದರು. ಸಂಘದ ನೂತನ ಕಟ್ಟಡ ನಿರ್ಮಾಣದ ಉದ್ದೇಶದಿಂದ ಕಳೆದ ಸಭೆಯಲ್ಲಿ ಆದ ಪ್ರಸ್ತಾಪಿಸಿದಂತೆ ಬೆಳ್ತಂಗಡಿಯಲ್ಲಿ ಜಾಗ ಖರೀದಿ ಮಾಡಿದ್ದೇವೆ ಎಂದು ತಿಳಿಸಿ, ಸಂಘದ ಎಲ್ಲಾ
ಸಾಧನೆಗಳಿಗೆ ಸಹಕಾರ ನೀಡಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.

ಸಂಘದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರಸಾದ್ ವರದಿ ವಾಚಿಸಿ,
ಕನಾಟ೯ಕ ರಾಜ್ಯ ಸರ್ಕಾರ ರೈತರ ಬೆಳೆ ಸಾಲಕ್ಕೆ
12%‌ ಮತ್ತು ಕೃಷಿ ಅಭಿವೃದ್ಧಿ ಸಾಲಗಳಿಗೆ 12% ಬಡ್ಡಿ ವಿಧಿಸಿದ್ದು, ನಿಗದಿಪಡಿಸಿದ ವಾಯಿದೆಗೆ ಸರಿಯಾಗಿ ಸಾಲ ಹಾಗೂ ಸಾಲದ ಕಂತಿನ ಮೊಬಲಗನ್ನು ಬಡ್ಡಿ ಸಹಿತ ಮರುಪಾವತಿ ಮಾಡುವ ಸಾಲಗಾರರಿಗೆ ಬಡ್ಡಿಯಲ್ಲಿ ರಿಯಾಯಿತಿ ನೀಡಲಾಗಿದೆ.
ವರ್ಷಾರಂಭದಲ್ಲಿ ರೈತರ ಕೃಷಿ ಸಾಲ ರಾಜ್ಯ ಸರಕಾರದಿಂದ ಬರಲು ಬಾಕಿ ರೂ. 65,34,172.00 ಇದ್ದು ವರದಿ ವರ್ಷದಲ್ಲಿ ಬೇಡಿಕೆ ರೂ. 86,02,989.00 ಹಾಗೂ ರೂ. 81,40,656.00 ಬಡ್ಡಿ ಸಹಾಯಧನ ಬಂದಿದ್ದು ರೂ. 69,96,505.00 ಬಡ್ಡಿ ಸಹಾಯಧನ ರಾಜ್ಯ ಸರಕಾರದಿಂದ ಇನ್ನು ಬರಲು ಬಾಕಿ ಇರುತ್ತದೆ. ಕೇಂದ್ರ ಸರ್ಕಾರದಿಂದ ಬೆಳೆ ಸಾಲ ಕ್ಲಪ್ತ ಮರುಪಾವತಿ ಬಡ್ಡಿ ಸಹಾಯಧನ ಆರಂಭದ ಬಾಕಿ ರೂ 6,362.00 ಇದ್ದು ವರದಿ ವರ್ಷದಲ್ಲಿ ಬೇಡಿಕೆ 28,77,773.28 ಹಾಗೂ ರೂ. 28,77,729.16 ಬಡ್ಡಿ ಸಹಾಯಧನ ಬಂದಿದ್ದು ವರ್ಷಾಂತ್ಯಕ್ಕೆ 6,406.12 ಬಡ್ಡಿ ಸಹಾಯಧನ ಬರಬೇಕಾಗಿದೆ. ಪಶು ಭಾಗ್ಯ ಯೋಜನೆಯಡಿಯಲ್ಲಿ ರಾಜ್ಯ ಸರಕಾರದಿಂದ ರೂ.5,470 ಬರಲು ಬಾಕಿ ಇದೆ. ಅಲ್ಲದೆ ಸಂಘಕ್ಕೆ ಕೇಂದ್ರ ಸರಕಾರದಿಂದ ರೂ 4,07,013.00 ಬಡ್ಡಿ ಸಹಾಯಧನ ಬರಲು ಬಾಕಿ ಇದ್ದು ವರದಿ ವರ್ಷದಲ್ಲಿ ಬೇಡಿಕೆ ರೂ. 22,19,139.25 ಹಾಗೂ ರೂ.21,89,342.00 ಬಡ್ಡಿ ಸಹಾಯಧನ ಬಂದಿದ್ದು ರೂ. 4,36,810.25 ಬಡ್ಡಿ ಸಹಾಯಧನ ಕೇಂದ್ರ ಸರಕಾರದಿಂದ ಇನ್ನು ಬರಲು ಬಾಕಿ ಇರುತ್ತದೆ ಎಂದು ತಿಳಿಸಿದರು.

ಸಮಾರಂಭದಲ್ಲಿ ಹೈನುಗಾರಿಕೆ ಸಾಧಕರಾದ ಫ್ರಾನ್ಸಿಸ್ ಡಿ.ಸೋಜ ನಡ, ಬೇಬಿ ಸಫಲ್ಯ ಹುಣ್ಸೆಕಟ್ಟೆ, ಜೌಷಧಿ ಸಿಂಪಡಿಸುವ ಮೋಹನ್ ಗೌಡ ನಡ, ಸುರೇಶ್ ಪೂಜಾರಿ, ಸಂಘದ ಹಿರಿಯ ಸದಸ್ಯರಾದ ಬಾಲಕೃಷ್ಣ ಭಟ್ ಸವಣಾಲು, ಬಾಬು ಗೌಡ ಕೆಂಬಜೆ೯, ವಿಜಯಮ್ಮ ಮಂಜೊಟ್ಟಿ, ಬಾಬು ಶೆಟ್ಟಿ ಲಾಯಿಲ, ವಿಮಲ ಕೊಡೆಕಲ್, ರತ್ನಾವತಿ ಮಂಜೊಟ್ಟಿ, ಫೆಲಿಕ್ಸ್ ಪಿಂಟೋ ಕುವೆಟ್ಟು ಇವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು. ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯ ಸಾಧಕ ಸಂಘದ ಸದಸ್ಯರ ಮಕ್ಕಳಿಗೆ ಪ್ರೋತ್ಸಾಹ ಧನ ವಿತರಣೆ ಮಾಡಲಾಯಿತು.

ಸಂಘದ ಉಪಾಧ್ಯಕ್ಷ ಗಣೇಶ್ ಭಂಡಾರಿ, ನಿದೇ೯ಶಕಾದ ಮುನಿರಾಜ ಅಜ್ರಿ, ಪುರಂದರ, ಶ್ರೀಮತಿ ರಾಧಾ, ನಾರಾಯಣ ಆಚಾರ್ಯ, ಅಶೋಕ್ ರೈ, ಶ್ರೀನಾಥ್ ಕೆ.ಎಂ, ತಿಮ್ಮಯ್ಯ ನಾಯ್ಕ, ರಮೇಶ್ ನಲ್ಕೆ, ಹರಿಯಪ್ಪ ನಾಯ್ಕ, ಶ್ರೀಮತಿ ಪ್ರೇಮಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಂಘದ ನಿರ್ದೇಶಕಿ ಶ್ರೀಮತಿ ಪ್ರೇಮಾ ಇವರ ಪ್ರಾಥ೯ನೆ ಬಳಿಕ, ಸಂಘದ ನಿದೇ೯ಶಕ ಮುನಿರಾಜ ಅಜ್ರಿ ಸ್ವಾಗತಿಸಿದರು. ಮುಖ್ಯ ಕಾರ್ಯನಿವಾ೯ಹಣಾಧಿಕಾರಿ ಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು. ಶಾಖಾ ನಿವ೯ಹಕ ವಿನೋದ್ ಕುಮಾರ್ ಹಾಗೂ ಗುಮಾಸ್ತೆ ವನಿತಾ ಎನ್.ಎಚ್ ವಿವಿಧ ಕಾಯ೯ಕ್ರಮ ನಿವ೯ಹಿಸಿದರು. ಸಂಘದ ನಿರ್ದೇಶಕ ಶ್ರೀನಾಥ್ ಕೆ.ಎಂ ಧನ್ಯವಾದವಿತ್ತರು. ಲೆಕ್ಕಿಗ ಹೇಮಲತಾ, ಗುಮಾಸ್ತೆ ಹರಿಣಿ ಪ್ರಭು, ಶಾಖಾ ನಿವ೯ಹಕಿ ನಳಿನಿ, ಮಾರಾಟ ಗುಮಾಸ್ತ ಹರೀಶ್, ಶ್ರೀ ಮತಿ ಸುಶ್ಮಿತಾ, ಅಟೆಂಡರ್ ಆನಂದ, ಪಿಗ್ಮಿ ಸಂಗ್ರಹಾಕರಾದ ಲಕ್ಷೀಧರ್, ಸುಬ್ಬಣ್ಣ ನಾಯ್ಕ, ಸುಧಾ‌ ಎಸ್.ಪೈ, ಶ್ರೀಮತಿ ಲಲಿತಾ ಸಹಕರಿಸಿದರು.

Related posts

ಗೇರುಕಟ್ಟೆ: ಉಚಿತ ಯೋಗ ಶಿಕ್ಷಣ ತರಗತಿಯ ಉದ್ಘಾಟನೆ

Suddi Udaya

ಬೆಳ್ತಂಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಾಣಿಜ್ಯ ಸಂಘದ ಉದ್ಘಾಟನಾ ಸಮಾರಂಭ

Suddi Udaya

ಶಿಲಾ೯ಲು : ಅಪ್ರಾಪ್ತ ವಯಸ್ಸಿನ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಆರೋಪಿಯ ವಿರುದ್ಧ ಪೋಕ್ಸೋ ಪ್ರಕರಣ ದಾಖಲು

Suddi Udaya

ಬೆಳ್ತಂಗಡಿ ಮುಳಿಯ ಗೋಲ್ಡ್ & ಡೈಮಂಡ್ ವತಿಯಿಂದ ತಾಲ್ಲೂಕು ಮಟ್ಟದ ಹಗ್ಗಜಗ್ಗಾಟ ಸ್ಪರ್ಧೆ: ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ

Suddi Udaya

ಧರ್ಮಸ್ಥಳ ಗ್ರಾ.ಪಂ. ನಲ್ಲಿ ವಿಶ್ವ ಮಹಿಳಾ ದಿನಾಚರಣೆ

Suddi Udaya

ಅಳದಂಗಡಿ: ಸರಕಾರಿ ಸೌಲಭ್ಯ ವಂಚಿತರಾದ ವೃದ್ಧ ಮಹಿಳೆಯ ಶೆಡ್ ಗೆ ಬಂತು ಸೋಲಾರ್ ಲೈಟ್ ಡಿ.ಸಿ. ಕರೆ ಮಾಡಿ ಅಜ್ಜಿಯ ಬಗ್ಗೆ ಮಾಹಿತಿ ಸಂಗ್ರಹ

Suddi Udaya
error: Content is protected !!