ನೆರಿಯ ಗ್ರಾಮದ ಕೊಲೋಡಿ ನಿವಾಸಿ ಬಾಲಚಂದ್ರ ಮಲೆಕುಡಿಯ ಇವರು ತಮ್ಮ ತೋಟದಲ್ಲಿ ಮರಕಡಿಯುವಾಗ ಆಕಸ್ಮಿಕವಾಗಿ ಜಾರಿ ಬಿದ್ದು ಬೆನ್ನುಮೂಳೆ ಮುರಿತಕ್ಕೊಳಗಾಗಿದ್ದು ಚಿಕಿತ್ಸೆ ಯ ನಂತರ ಮಲಗಿದಲ್ಲಿಯೇ ಇದ್ದು ಪ್ರಸ್ತುತ ಕೊಕ್ಕಡ ದಲ್ಲಿ ಪತ್ನಿಯವರ ಮನೆಯಲ್ಲಿದ್ದು ಇವರ ಪರಿಸ್ಥಿತಿಯನ್ನು ಮನಗಂಡು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ವತಿಯಿಂದ ಒದಗಿಸಲಾದ ವೀಲ್ ಚಯರ್ ಅನ್ನು ಕೊಕ್ಕಡ ವಲಯ ಮೇಲ್ವಿಚಾರಕಿ ಶ್ರೀಮತಿ ಭಾಗೀರಥಿ ಮತ್ತು ಶ್ರೀಮತಿ ರೋಹಿಣಿ ವಿತರಿಸಿದರು.
ಈ ವೇಳೆ ಒಕ್ಕೂಟದ ಪದಾಧಿಕಾರಿಗಳಾದ ವಿಠಲ ತೆಂಕುಬೈಲು, ನಾರಾಯಣ ಗೌಡ ತೆಂಕುಬೈಲು, ರಮೇಶ್ ಕಟ್ಟೆಮಜಲು ಉಪಸ್ಥಿತರಿದ್ದರು.











