22.9 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಕಕ್ಕಿಂಜೆ ಶ್ರೀ ಕೃಷ್ಣ ಆಸ್ಪತ್ರೆಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ

ಕಕ್ಕಿಂಜೆ: ಶ್ರೀ ಕೃಷ್ಣ ಆಸ್ಪತ್ರೆ ಕಕ್ಕಿಂಜೆ ಹಾಗೂ ಕೆಎಂಸಿ ಆಸ್ಪತ್ರೆ, ಅತ್ತಾವರ, ಮಂಗಳೂರು ಇವರ ಸಹಯೋಗದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವು ಆ. 30 ರಂದು ಶ್ರೀ ಕೃಷ್ಣ ಆಸ್ಪತ್ರೆ, ಕಕ್ಕಿಂಜೆಯಲ್ಲಿ ನಡೆಯಿತು.


ಕಾರ್ಯಕ್ರಮದ ಉದ್ಘಾಟನೆಯನ್ನು ಕೆಎಂಸಿ ಆಸ್ಪತ್ರೆಯ ಕಣ್ಣಿನ ವಿಭಾಗ ಮುಖ್ಯಸ್ಥರಾದ ಡಾ. ಸಂಗೀತ ಜಗನ್ನಾಥನ್ ನೆರವೇರಿಸಿ ಮಾತನಾಡಿ ಕೆಎಂಸಿ ಸಮುದಾಯ ವೈದ್ಯಕೀಯ ವಿಭಾಗದಿಂದ ಶ್ರೀ ಕೃಷ್ಣ ಆಸ್ಪತ್ರೆಯ ಸಹಯೋಗದೊಂದಿಗೆ ಗ್ರಾಮೀಣ ಪ್ರದೇಶದ ಜನರಿಗೆ ಗುಣಮಟ್ಟದ ಆರೋಗ್ಯ ಸೇವೆ ನೀಡುವ ನಿಟ್ಟಿನಲ್ಲಿ ಮತ್ತು ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಲು ಈ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ. ಮುಂದಿನ ದಿನಗಳಲ್ಲಿ ಪ್ರತಿ ತಿಂಗಳ ಎರಡನೇ ಮತ್ತು ನಾಲ್ಕನೇ ಶನಿವಾರ ಶಿಬಿರವು ನಡೆಯಲಿದೆ. ಸಾರ್ವಜನಿಕರು ಈ ಶಿಬಿರದ ಸಂಪೂರ್ಣ ಪ್ರಯೋಜನ ಪಡೆಯಬಹುದು ಎಂದರು.
ಶ್ರೀ ಕೃಷ್ಣ ಆಸ್ಪತ್ರೆಯ ಆಡಳಿತ ನಿರ್ದೇಶಕರಾದ ಡಾ. ಮುರಳಿಕೃಷ್ಣ ಇರ್ವತ್ರಾಯ ಅತಿಥಿಗಳನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ ಶಿಬಿರದ ಬಗ್ಗೆ ಮಾಹಿತಿ ನೀಡಿದರು.


ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಚಾರ್ಮಾಡಿ ಗ್ರಾ.ಪಂ ಅಧ್ಯಕ್ಷೆ ಶಾರದಾ, ಉದ್ಯಮಿ ಗಿರೀಶ್ ಕುದ್ರೆಂತಾಯ ಧರ್ಮಸ್ಥಳ, ಕೆಎಂಸಿ ಆಸ್ಪತ್ರೆಯ ಜನಸಂಪರ್ಕಧಿಕಾರಿ ಉದಯ್, ಶ್ರೀ ಕೃಷ್ಣ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕಿ ಡಾ. ವಂದನಾ ಎಂ ಇರ್ವತ್ರಾಯ ಭಾಗವಹಿಸಿದ್ದರು.


ಕಾರ್ಯಕ್ರಮದಲ್ಲಿ ಕೆಎಂಸಿ ಕಿವಿ ಮೂಗು ಗಂಟಲು ವಿಭಾಗದ ತಜ್ಞ ವೈದ್ಯರಾದ ಡಾ.ಕಿರಣ್ ಹೆಗ್ಡೆ, ಮಕ್ಕಳ ತಜ್ಞರಾದ ಡಾ. ದಿವ್ಯಾ ರವಿ, ಜನರಲ್ ಮೆಡಿಸಿನ್ ವಿಭಾಗದ ತಜ್ಞವೈದ್ಯರಾದ ಡಾ.ಪ್ರಕೃತಿ, ಕಣ್ಣಿನ ತಜ್ಞರಾದ ಡಾ.ವೈಷ್ಣವಿ, ಶ್ರೀ ಕೃಷ್ಣ ಆಸ್ಪತ್ರೆಯ ವೈದ್ಯಾಧಿಕಾರಿಗಳಾದ ಡಾ.ಅಲ್ಬೀನ್ ಜೋಸೆಫ್, ಡಾ.ಸಾತ್ವೀಕ್ ಕುದ್ದಣ್ಣಾಯ, ಡಾ.ಗ್ರೀಷ್ಮಾ, ಡಾ.ಶಾರೂನ್, ಡಾ.ಅನೀಶ್ ಕೃಷ್ಣ ಇರ್ವತ್ರಾಯ, ಆಡಳಿತಾಧಿಕಾರಿ ಜ್ಯೋತಿ ವಿ ಸ್ವರೂಪ್, ಕೆಎಂಸಿ ಆಸ್ಪತ್ರೆಯ ಪಿಆರ್‌ಒ ಹರ್ಬರ್ಟ್ ಮೊದಲಾದವರಿದ್ದರು.
ಡಾ. ವಂದನಾ ಎಂ ಇರ್ವತ್ರಾಯ ಧನ್ಯವಾದವಿತ್ತರು. ಆರಿಶ್ ಕಾರ್ಯಕ್ರಮ ನಿರೂಪಿಸಿ, ಗಣೇಶ್ ಕಾರ್ಯಕ್ರಮ ಸಂಯೋಜಿಸಿದರು. ಶಿಬಿರದಲ್ಲಿ ನೂರಕ್ಕೂ ಅಧಿಕ ಸಂಖ್ಯೆಯಲ್ಲಿ ಸಾರ್ವಜನಿಕರು ಪಾಲ್ಗೊಂಡು ಶಿಬಿರದ ಪ್ರಯೋಜನ ಪಡೆದುಕೊಂಡರು. ಕಾರ್ಯಕ್ರಮದಲ್ಲಿ ಕೆಎಂಸಿ ಜನಸಂಪರ್ಕಧಿಕಾರಿ ಉದಯ್ ಇವರನ್ನು ಸನ್ಮಾನಿಸಲಾಯಿತು.

Related posts

ದಾಮೋದರ ಶೆಟ್ಟಿಅನಾರೋಗ್ಯದಿಂದ ನಿಧನ

Suddi Udaya

ಉಜಿರೆ: ದೊಂಪದಪಲ್ಕೆ ಸ.ಹಿ.ಪ್ರಾ. ಶಾಲೆಯಲ್ಲಿ ಎಸ್.ಡಿ.ಎಮ್.ಸಿ ರಚನೆ

Suddi Udaya

ಮಂಜುಶ್ರೀ ಭಜನಾ ಮಂಡಳಿ ಕುಂಡದಬೆಟ್ಟು ಇದರ ವತಿಯಿಂದ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ

Suddi Udaya

ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಬೆಳ್ತಂಗಡಿ ತಾಲೂಕು ಘಟಕದಿಂದ ನಿವೃತ್ತ ಯೋಧ ಸಿ ಜಾರ್ಜ್ ಕುಟ್ಟಿ ಯವರಿಗೆ ಸನ್ಮಾನ

Suddi Udaya

ಉಜಿರೆ: ಎಸ್.ಡಿ.ಎಂ.ವಸತಿ ಪದವಿಪೂರ್ವ ಕಾಲೇಜಿನಲ್ಲಿ ಪ್ರಥಮ ಪ.ಪೂ. ವಿದ್ಯಾರ್ಥಿಗಳ ಸೇರ್ಪಡೆ ಹಾಗೂ ಮಾಹಿತಿ ಕಾರ್ಯಕ್ರಮ

Suddi Udaya

ಇಂದಬೆಟ್ಟು: ದೇವನಾರಿ ನಿವಾಸಿ ರಝಾಕ್ ನಿಧನ

Suddi Udaya
error: Content is protected !!